ನವದೆಹಲಿ: ಹೂಡಿಕೆದಾರ ರಾಕೇಶ್ ಜುಂಜುನವಾಲಾ ಅವರ ಮಾಲಿಕತ್ವದ ಆಕಾಶ ಏರ್ ಏರ್‌ಲೈನ್‌ಗೆ ಮೊದಲ ವಿಮಾನ ಬೋಯಿಂಗ್ 737 ಮ್ಯಾಕ್ಸ್ ಸೇರ್ಪಡೆಯಾಗಿದೆ.
ಆಕಾಶ ಏರ್ ಒಟ್ಟು 72 ವಿಮಾನಗಳಿಗೆ ಆರ್ಡರ್ ಮಾಡಿದ್ದು, 2023ರ ಮಾರ್ಚ್ ಒಳಗೆ 18 ವಿಮಾನಗಳು ದೊರೆಯಲಿವೆ. ಜುಲೈನಲ್ಲಿ ಏರ್‌ಲೈನ್‌ನ ಮೊದಲ ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆ ಇದೆ. ಇಂಡಿಗೊದ ಮಾಜಿ ಅಧ್ಯಕ್ಷ ಆದಿತ್ಯ ಘೋಷ್ ಆಕಾಶ್ ಏರ್‌ನ ಸಹ ಸಂಸ್ಥಾಪಕರಾಗಿದ್ದಾರೆ.
ಈ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಇಂಧನ ದಕ್ಷತೆಯ, ಸುಧಾರಿತ ಮತ್ತು ಕಡಿಮೆ ನಿರ್ವಹಣೆ ವೆಚ್ಚ ಬಯಸುವ ವಿಮಾನವಾಗಿದೆ. ಭಾರತದ ಮಾರುಕಟ್ಟೆಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ ಎಂದು ಬೋಯಿಂಗ್ ಸಿಇಒ ಸ್ಟಾನ್ ಡೀಲ್ ತಿಳಿಸಿದ್ದಾರೆ.