Site icon Vistara News

Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್‌?

Jio announced 30 Percent discount on Freedom Offer for Air Fiber new customers

ಮುಂಬೈ: ಜಿಯೋದಿಂದ ಏರ್ ಫೈಬರ್ ಹೊಸ ಗ್ರಾಹಕರಿಗೆ “ಫ್ರೀಡಂ ಆಫರ್” ಶೇಕಡಾ 30ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ. ಅಂದ ಹಾಗೆ ಜಿಯೋ ಫೈಬರ್ ಅಥವಾ ಏರ್ ಫೈಬರ್ ಎಂಬುದು ದೇಶದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಮತ್ತು ಅತಿ ದೊಡ್ಡದಾದ ಗೃಹ ಬ್ರಾಡ್ ಬ್ಯಾಂಡ್ ಹಾಗೂ ಮನರಂಜನಾ ಸೇವೆಯನ್ನು ಒದಗಿಸುತ್ತಿರುವ (Jio Air Fiber) ಸಂಸ್ಥೆಯಾಗಿದೆ.

1.2 ಕೋಟಿ ಮನೆಗಳೊಂದಿಗೆ ಜಿಯೋಫೈಬರ್ ಅಥವಾ ಏರ್ ಫೈಬರ್ ಎಂಬುದು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಭಾರತೀಯರ ಮನೆಗಳನ್ನು ಇನ್ನಷ್ಟು ವೇಗವಾಗಿ ಡಿಜಿಟೈಸ್ ಮಾಡುವ ಉದ್ದೇಶದಿಂದ ಮತ್ತು ಭಾರತವನ್ನು ಡಿಜಿಟಲ್ ಸಮುದಾಯವಾಗಿ ಮಾರ್ಪಡಿಸುವ ಉದ್ದೇಶದಿಂದ ಜಿಯೋದಿಂದ ಈ ಭರವಸೆಯ ಕೊಡುಗೆಯನ್ನು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಇನ್ನಷ್ಟು ಮನೆಗಳಲ್ಲಿ ಈ ಸಂಪರ್ಕ ಪಡೆಯುವುದಕ್ಕೆ ಉತ್ತೇಜನ ದೊರೆಯುತ್ತದೆ. ಈಗಾಗಲೇ ಕೈಗೆಟುಕುವ ಬೆಲೆಯಲ್ಲಿ ಇರುವ ಜಿಯೋಏರ್ ಫೈಬರ್ ಪ್ಲಾನ್‌ಗಳ ಜತೆಗೆ ಶೇಕಡಾ 30ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Paris Olympics India schedule: ಒಲಿಂಪಿಕ್ಸ್​ನಲ್ಲಿ ನಾಳೆ ಭಾರತ ಯಾವೆಲ್ಲ ವಿಭಾಗದಲ್ಲಿ ಸ್ಪರ್ಧಿಸಲಿದೆ?; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಈ ಫ್ರೀಡಂ ಆಫರ್ ಜತೆಗೆ ಹೊಸ ಜಿಯೋಏರ್ ಫೈಬರ್ ಬಳಕೆದಾರರು ಶೇ 30ರಷ್ಟು ರಿಯಾಯಿತಿಯನ್ನು ಹೊಸ ಸಂಪರ್ಕವನ್ನು 1000 ರೂಪಾಯಿಯ ಇನ್‌ಸ್ಟಲೇಷನ್ ಶುಲ್ಕದ ಮನ್ನಾದ ಮೂಲಕ ಪಡೆಯುತ್ತಾರೆ. ಇದು ಸೀಮಿತ ಅವಧಿಯ ಕೊಡುಗೆ ಆಗಿದ್ದು, ಜುಲೈ 26ರಿಂದ ಆಗಸ್ಟ್ 15ನೇ ತಾರೀಕಿನ ಮಧ್ಯೆ ಇರುತ್ತದೆ.

ಜಿಯೋಏರ್ ಫೈಬರ್ ಸಂಪರ್ಕ ಪಡೆಯುವುದು ಹೇಗೆ?

ಇನ್ನು ಜಿಯೋಏರ್ ಫೈಬರ್ ಸಂಪರ್ಕ ಪಡೆಯುವುದು ಹೇಗೆ ಎಂಬ ಪ್ರಶ್ನೆ ಇದೆಯಾ? ಅದು ಬಹಳ ಸರಳ. Jio.com ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮಗಿರುವ ಆಸಕ್ತಿಯನ್ನು ತಿಳಿಸಿ ಅಥವಾ 60008-60008 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ. ಜಿಯೋದಿಂದ ಸ್ಥಿರ ನಿಸ್ತಂತು (ವೈರ್ಲೆಸ್) ಕೊಡುಗೆ ಏರ್ ಫೈಬರ್ ಅನ್ನು ಕಳೆದ ವರ್ಷ ಗಣೇಶ ಚತುರ್ಥಿಗೆ ಪರಿಚಯಿಸಲಾಯಿತು.

ಜಿಯೋದಿಂದ 5ಜಿ ಸ್ಟ್ಯಾಂಡ್ ಅಲೋನ್ ಸಂಪರ್ಕ ಸೇವೆಗಳನ್ನು ನಿಯೋಜಿಸಲಾಗಿದೆ. 5ಜಿ ಸ್ಥಿರ ನಿಸ್ತಂತು ಸಂಪರ್ಕವನ್ನು ಒದಗಿಸುವುದಕ್ಕೆ ಮೀಸಲಿಟ್ಟ ನೆಟ್‌ವರ್ಕ್ ಬಳಕೆ ಮಾಡುತ್ತಿದೆ. ನೆಟ್‌ವರ್ಕ್ ಇಕ್ಕಟ್ಟಾಗುವುದನ್ನು ನಿರ್ವಹಿಸುವುದಕ್ಕೆ ಇದರಿಂದ ಸಹಾಯ ಆಗುತ್ತದೆ. ಆದರೂ ಏರ್‌ಫೈಬರ್‌ನ ಸರಾಸರಿ ಬಳಕೆದಾರರು ಒಂದು ತಿಂಗಳಿಗೆ 400 ಜಿಬಿ ಡೇಟಾ ಬಳಸುತ್ತಾರೆ.

ಏನಿದು ಜಿಯೋ ಏರ್ ಫೈಬರ್?

ಯಾವುದೇ ತಂತಿ ಇಲ್ಲದೆ ಫೈಬರ್ ರೀತಿ ವೇಗವನ್ನು ಗಾಳಿಯ ಮೂಲಕವೇ ಒದಗಿಸುತ್ತದೆ ಏರ್ ಫೈಬರ್. ಬಳಕೆದಾರರು ಪ್ಲಗ್ ಹಾಕಿ, ಆನ್ ಮಾಡಿದರೆ ಆಯಿತು. ಇಷ್ಟು ಮಾಡಿದಲ್ಲಿ ತಮ್ಮ ಮನೆಯಲ್ಲಿ ವೈಯಕ್ತಿಕವಾಗಿ ಹಾಟ್‌ಸ್ಪಾಟ್ ಅನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಂತಾಗುತ್ತದೆ.

ಇದನ್ನೂ ಓದಿ: Rain in Karnataka: ಬೆಳಗಾವಿಯಲ್ಲಿ ನಗರದೊಳಗೆ ಬಂದ ನದಿಗಳು, ಮನೆ ಖಾಲಿ ಮಾಡಿದ ಜನ

ಜಿಯೋಫೈಬರ್ ಸ್ಥಿರ ನಿಸ್ತಂತು ಸಂಪರ್ಕ ಪರಿಹಾರವಾಗಿದ್ದು, ಇದರಿಂದ ಯಾವುದೇ ಅಡೆತಡೆಯಿಲ್ಲದೆ 1 ಜಿಬಿಪಿಎಸ್ ತನಕದ ಹೈ- ಸ್ಪೀಡ್ ಸಂಪರ್ಕ ಮನೆ ಮತ್ತು ಕಚೇರಿಗಳಿಗೆ ದೊರೆಯುತ್ತದೆ. ಏಕಕಾಲಕ್ಕೆ ಹಲವು ಸಾಧನಗಳನ್ನು ಬಳಸಬಹುದು. ಸ್ಮಾರ್ಟ್‌ ಫೋನ್, ಪರ್ಸನಲ್ ಕಂಪ್ಯೂಟರ್‌ಗಳು, ಟ್ಯಾಬ್ಲೆಟ್, ಸ್ಮಾರ್ಟ್ ಟಿವಿಗಳು, ಮತ್ತು ಇದರ ಜತೆಗೆ ಸೆಟ್ ಟಾಪ್ ಬಾಕ್ಸ್‌ಗಳನ್ನು ಸಹ ಏಕಕಾಲಕ್ಕೆ ಸಂಪರ್ಕ ಕೊಡಬಹುದು, ಅದು ಕೂಡ ಇಂಟರ್‌ನೆಟ್ ವೇಗದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಂತೆ ಸಾಧ್ಯವಾಗುತ್ತದೆ.

Exit mobile version