ನವ ದೆಹಲಿ: ರಿಲಯನ್ಸ್ ಸಮೂಹದ ಜಿಯೊ-ಬಿಪಿ ಡೀಸೆಲ್ ( Jio-bp diesel) ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಸಾರ್ವಜನಿಕ ತೈಲ ಕಂಪನಿಗಳು ವಿತರಿಸುವ ಸಾಮಾನ್ಯ ಡೀಸೆಲ್‌ಗಿಂತ ಲೀಟರ್‌ಗೆ 1 ರೂ. ಅಗ್ಗದಲ್ಲಿ ಜಿಯೊ -ಬಿಪಿ ಡೀಸೆಲ್ ಮಾರಾಟವಾಗುತ್ತಿದೆ. ಇದರಿಂದ ಹೆಚ್ಚು ದೂರ ಸಂಚರಿಸುವ ಟ್ರಕ್‌ಗಳ ಮಾಲೀಕರಿಗೆ ಇಂಧನ ವೆಚ್ಚದಲ್ಲಿ ಗಣನೀಯ ಉಳಿತಾಯದ ಲಾಭವಾಗಲಿದೆ.
ಹೀಗಿದ್ದರೂ, ಮಾರುಕಟ್ಟೆಯಲ್ಲಿ ಈ ಟ್ರಕ್ ವಲಯ ಸೀಮಿತವಾಗಿರುವುದರಿಂದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬ್ರಿಟನ್ ಮೂಲದ ಬಿಪಿ ಕಂಪನಿಯ ಜಂಟಿ ಸಹಭಾಗಿತ್ವದ ಈ ಯೋಜನೆಗೆ ಹೆದ್ದಾರಿ ಮತ್ತು ಸಗಟು ಪೂರೈಕೆ (bulk supply) ವಲಯದಲ್ಲಿ ಮಾತ್ರ ಅನುಕೂಲವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಕಂಪನಿಯ ಹೇಳಿಕೆ ಪ್ರಕಾರ ಟ್ರಕ್ ಮಾಲೀಕರಿಗೆ ಇಂಧನ ವೆಚ್ಚದಲ್ಲಿ ವಾರ್ಷಿಕ 1 ಲಕ್ಷ ರೂ. ಉಳಿತಾಯವಾಗಲಿದೆ. ACTIVE ಟೆಕ್ನಾಲಜಿ ಆಧರಿತ ಡೀಸೆಲ್ ಆಗಿರುವುದರಿಂದ ಇಂಧನದ ದಕ್ಷತೆ ಸುಧಾರಿಸುತ್ತದೆ ಎಂದಿದೆ. ಹೀಗಿದ್ದರೂ ಡಿಸ್ಕೌಂಟ್ ಆರಂಭಿಕ ಕೊಡುಗೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: IPL 2023 : ಐಪಿಎಲ್ನಲ್ಲಿ ಡಿಜಿಟಲ್ ಪ್ರಸಾರದೆಡೆಗೆ ವಾಲಿದ ಜಾಹೀರಾತುದಾರರು, ಜಿಯೊಗೆ ಭರ್ಜರಿ ಲಾಭ
ಸಾರ್ವಜನಿಕ ವಲಯದ ಕಂಪನಿಗಳು additive laced ಡೀಸೆಲ್ ಅನ್ನು ಅಧಿಕ ದರದಲ್ಲಿ ವಿತರಿಸುತ್ತವೆ. ಇಂಡಿಯನ್ ಆಯಿಲ್ ಕಂಪನಿಯ XtraMile ಡೀಸೆಲ್ ದರ ದಿಲ್ಲಿಯಲ್ಲಿ ಲೀಟರ್‌ಗೆ 92.91 ರೂ. ಮತ್ತು ಮುಂಬಯಿನಲ್ಲಿ 97.51 ರೂ. ಆಗಿದ್ದರೆ ಸಾಮಾನ್ಯ ಡೀಸೆಲ್ ದರ ದಿಲ್ಲಿಯಲ್ಲಿ ಲೀಟರ್‌ಗೆ 89.62 ರೂ. ಮತ್ತು ಮುಂಬಯಿನಲ್ಲಿ 92.28 ರೂ. ಆಗಿದೆ.