ನವ ದೆಹಲಿ: ದೇಶದ ಪ್ರಮುಖ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೊದ ನೆಟ್ ವರ್ಕ್‌ನಲ್ಲಿ ಮಂಗಳವಾರ ಬೆಳಗ್ಗೆ ತಾಂತ್ರಿಕ ಅಡಚಣೆ ಕಾಣಿಸಿಕೊಂಡು, ಬಳಕೆದಾರರಿಗೆ (Jio Outage) ಕರೆಗಳನ್ನು ಸ್ವೀಕರಿಸಲು ಮತ್ತು ಎಸ್ಸೆಮ್ಮೆಸ್‌ಗಳನ್ನು ಕಳುಹಿಸಲು ಸಮಸ್ಯೆ ಉಂಟಾಯಿತು. ನೂರಾರು ಬಳಕೆದಾರರು ಫೋನ್ ಕರೆಗಳನ್ನು ಪಡೆಯಲು ಸಾಧ್ಯವಾಗದೆ ಸಮಸ್ಯೆ ಎದುರಿಸಿದರು.
ಹೀಗಿದ್ದರೂ, ಜಿಯೊದ ಇಂಟರ್‌ನೆಟ್ ಸೇವೆಗೆ ಸಮಸ್ಯೆ ಇದ್ದಿರಲಿಲ್ಲ. ಅನೇಕ ಮಂದಿ ಟ್ವಿಟರ್‌ನಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ದಿಲ್ಲಿ, ಮುಂಬಯಿ, ಕೋಲ್ಕತಾದಲ್ಲಿ ರಿಲಯನ್ಸ್ ಜಿಯೊ ಬಳಕೆದಾರರಿಗೆ ಅಡಚಣೆ ಕಾಣಿಸಿಕೊಂಡಿತು.