ಮುಂಬಯಿ: ರಿಲಯನ್ಸ್ ಜಿಯೊ ಇದೀಗ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಜಿಯೊ ಟ್ರೂ 5G ಸೇವೆಗೆ ( Jio 5G) ಚಾಲನೆ ನೀಡಿದೆ.
ಮುಂಬಯಿ, ನವ ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಾಣಸಿ ಮತ್ತು ನಾಥದ್ವಾರ ನಗರಗಳಲ್ಲಿ ಜಿಯೋ ಟ್ರೂ- 5G ಸೇವೆಗಳ ಯಶಸ್ವಿ ಬಿಡುಗಡೆಯ ಬಳಿಕ, ಬೆಂಗಳೂರು ಮತ್ತು ಹೈದರಾಬಾದ್‌ಗೂ ವಿಸ್ತರಿಸಿದೆ. ಈಗಾಗಲೇ. ಜಿಯೋ ಟ್ರೂ 5G ಸೇವೆಯನ್ನು ಆರು ನಗರಗಳಲ್ಲಿ ಲಕ್ಷಗಟ್ಟಲೆ ಬಳಕೆದಾರರು ಪಡೆಯುತ್ತಿದ್ದಾರೆ. ಇದಕ್ಕೆ ದೊರೆಯುತ್ತಿರುವ ಪ್ರತಿಕ್ರಿಯೆ ಅತ್ಯಂತ ಧನಾತ್ಮಕವಾಗಿದೆ ಎಂದು ಕಂಪನಿ ತಿಳಿಸಿದೆ.
ಜಿಯೋ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 500 ಎಂಬಿಪಿಎಸ್ (Mbps)ನಿಂದ 1 ಜಿಬಿಪಿಎಸ್ (Gbps)ವರೆಗೆ ವೇಗದ ನೆಟ್ ಸೇವೆಯನ್ನು ಪಡೆಯುತ್ತಿದ್ದಾರೆ ಹಾಗೂ ಅತಿ ಹೆಚ್ಚು ಪ್ರಮಾಣದಲ್ಲಿ ಡೇಟಾ ಬಳಸುತ್ತಿದ್ದಾರೆ ಎಂದು ಜಿಯೊ ತಿಳಿಸಿದೆ. 4G ನೆಟ್‌ವರ್ಕ್‌ನ ಮೇಲೆ ಯಾವುದೇ ಅವಲಂಬನೆ ಇಲ್ಲದೆ ಸುಧಾರಿತ 5G ನೆಟ್‌ವರ್ಕ್‌ನೊಂದಿಗೆ ಅದ್ವಿತೀಯ 5G ಮೂಲಸೌಕರ್ಯ ಒದಗಿಸಿರುವುದು, 700 MHz, 3500 MHz, ಮತ್ತು 26 GHz ಬ್ಯಾಂಡ್‌ಗಳ ಪ್ಯಾಕೇಜ್ ಇದಕ್ಕೆ ಕಾರಣ ಎಂದಿದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಈ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಿದೆ.