Site icon Vistara News

Job cuts : ಬೋಯಿಂಗ್‌ನಿಂದ 2,000 ಉದ್ಯೋಗ ಕಡಿತ, ಟಿಸಿಎಸ್‌ಗೆ ಹೊರಗುತ್ತಿಗೆ

boeing

boeing

ನವ ದೆಹಲಿ: ಅಮೆರಿಕ ಮೂಲದ ಪ್ರಸಿದ್ಧ ವಿಮಾನಗಳ ಉತ್ಪಾದಕ ಬೋಯಿಂಗ್‌ ಕಂಪನಿಯು (Boeing) 2,000 ಉದ್ಯೋಗಗಳನ್ನು ಕಡಿತಗೊಳಿಸಲು (Job cuts) ನಿರ್ಧರಿಸಿದೆ. ಜಾಗತಿಕ ಆರ್ಥಿಕ ಮಂದಗತಿಯ ಹಿನ್ನೆಲೆಯಲ್ಲಿ ಬೋಯಿಂಗ್‌ ಈ ನಿರ್ಧಾರ ಕೈಗೊಂಡಿದೆ. ಹಣಕಾಸು ಮತ್ತು ಮಾನವ ಸಂಪನ್ಮೂಲ ವಿಭಾಗಗಳಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. 2023ರಲ್ಲಿ 10,000 ಉದ್ಯೋಗಿಗಳನ್ನು ನೇಮಿಸುವುದಾಗಿ ಬೋಯಿಂಗ್‌ ಈ ಹಿಂದೆ ಹೇಳಿತ್ತು. 2022ರಲ್ಲಿ 15,000 ಮಂದಿಯನ್ನು ನೇಮಿಸಿತ್ತು. ಬೋಯಿಂಗ್‌ ತನ್ನ ಮೂರನೇ ಒಂದರಷ್ಟು ಉದ್ಯೋಗಗಳನ್ನು ಭಾರತದಲ್ಲಿ ಟಾಟಾ ಕನ್ಸಲ್ಟಿಂಗ್‌ ಸರ್ವೀಸ್‌ಗೆ ಹೊರಗುತ್ತಿಗೆ ನೀಡುವುದಾಗಿ ಕಳೆದ ವರ್ಷ ಘೋಷಿಸಿತ್ತು.

ಬೋಯಿಂಗ್‌ ಕಂಪನಿಯು ಟಿಸಿಎಸ್‌ ಗೆ ತನ್ನ ಹಣಕಾಸು ಮತ್ತು ಅಕೌಂಟಿಂಗ್‌ ಹುದ್ದೆಗಳನ್ನು ಹೊರಗುತ್ತಿಗೆ ನೀಡುತ್ತಿದೆ. ಹೀಗಾಗಿ ಉದ್ಯೋಗ ಕಡಿತ ಸಾಧ್ಯವಾಗಲಿದೆ. ಐಟಿ, ಹಣಕಾಸು, ಅಕೌಂಟಿಂಗ್‌ ಅನ್ನು ಟಿಸಿಎಸ್‌ಗೆ ವರ್ಗಾಯಿಸುವುದರಿಂದ ಬೋಯಿಂಗ್‌ಗೆ ವೆಚ್ಚ ಉಳಿತಾಯ ನಿರೀಕ್ಷಿಸಲಾಗಿದೆ.

Exit mobile version