ಹೈದರಾಬಾದ್: ಬೇಬಿ ಪೌಡರ್ ಉತ್ಪಾದಕ ಜಾನ್ಸನ್ & ಜಾನ್ಸನ್ ತನ್ನ ಉತ್ಪನ್ನಗಳಿಗೆ ಬೇಡಿಕೆ ಕುಸಿದಿರುವುದರಿಂದ ತೆಲಂಗಾಣದಲ್ಲಿರುವ ತನ್ನ ಅತಿ ದೊಡ್ಡ ಉತ್ಪಾದನಾ ಘಟಕವನ್ನು, ಔಷಧ ಉತ್ಪಾದಕ ಕಂಪನಿ ಹೆಟೆರೊಗೆ ಮಾರಾಟ ಮಾಡಿದೆ.
ಹೆಟೆರೊ ಈ ಘಟಕಕ್ಕೆ ಹೆಚ್ಚುವರಿ 600 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ. ಘಟಕವನ್ನು 130 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಇದರಿಂದ 2,000 ಮಂದಿಗೆ ಉದ್ಯೋಗ ಸಿಗಲಿದೆ.
ಜಾನ್ಸನ್ ಘಟಕ 55.27 ಎಕರೆ ಸ್ಥಳದಲ್ಲಿ ಅಸ್ತಿತ್ವದಲ್ಲಿದೆ. 2016ರಲ್ಲಿ ಕನ್‌ಸ್ಯೂಮರ್ ಹೆಲ್ತ್ ಪ್ರಾಡಕ್ಟ್ ಗಳ ಉತ್ಪಾದನೆ ಆರಂಭಿಸಿತ್ತು. ಬೇಬಿಕೇರ್, ಸೌಂದರ್ಯವರ್ಧಕ, ತ್ವಚೆಯ ಆರೋಗ್ಯ ವರ್ಧಕ ಉತ್ಪನ್ನಗಳನ್ನು ಇಲ್ಲಿ ತಯಾರಿಸುತ್ತಿತ್ತು.