Site icon Vistara News

Kadlekai Parishe 2022 | ಬೆಂಗಳೂರಿನ ಬಸವನಗುಡಿಯಲ್ಲಿ ಇಂದು ಸಂಜೆ 6.30ಕ್ಕೆ ಕಡಲೆ ಕಾಯಿ ಪರಿಷೆಗೆ ಚಾಲನೆ

parishe

ಬೆಂಗಳೂರು: ಬೆಂಗಳೂರಿನ ಜನ ಸಂಭ್ರಮ ಮತ್ತು ಸಡಗರದಿಂದ ನಿರೀಕ್ಷಿಸುತ್ತಿರುವ ಬಸವನಗುಡಿಯ ಐತಿಹಾಸಿಕ ಕಡಲೆ ಕಾಯಿ ಪರಿಷೆಗೆ (Kadlekai Parishe 2022) ಇಂದು ಸಂಜೆ ಚಾಲನೆ ಸಿಗಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಸಂಜೆ 6.3೦ ಕ್ಕೆ ಪರೀಷೆಗೆ ಚಾಲನೆ ನೀಡಲಿದ್ದಾರೆ. ನಾಲ್ಕು ದಿನಗಳ ಕಾಲ ಕಡ್ಲೆಕಾಯಿ ಪರೀಷೆ ನಡೆಯಲಿದೆ. ಈಗಾಗಲೇ ಪರೀಷೆಗೆ ನೂರಾರು ರೈತರು ಆಗಮಿಸಿದ್ದಾರೆ. ಕೋಲಾರ, ಚಿತ್ರ ದುರ್ಗ ಸೇರಿದಂತೆ ನೆರೆಯ ಜಿಲ್ಲೆಗಳಿಂದಲೂ ರೈತರು ಕಡಲೇಕಾಯಿಯನ್ನು ತಂದಿದ್ದಾರೆ.

ಪರೀಷೆ ಅಂಗವಾಗಿ ಕೆಂಬಾಂಬುದಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಪರೀಷೆ ನಡೆಯುವ ದಿನ ರಾತ್ರಿ 7.3೦ ರಿಂದ 1 ಗಂಟೆ ತೆಪ್ಪೋತ್ಸವಕ್ಕೆ ಅವಕಾಶ ನೀಡಲಾಗಿದೆ. ಈ ಬಾರಿ ಪ್ಲಾಸ್ಟಿಕ್ ಮುಕ್ತ ಪರೀಷೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

ಪ್ರತಿ ಅಂಗಡಿಗೂ ಪಾಲಿಕೆಯಿಂದ ಪರಿಸರ ಸ್ನೇಹಿ ಬ್ಯಾಗ್ ವಿತರಿಸಲಾಗಿದೆ. ಸಾರ್ವಜನಿಕರೇ ಬ್ಯಾಗ್ ತರುವಂತೆ ಬಿಬಿಎಂಪಿ ಮನವಿ ಮಾಡಿದೆ. ದೊಡ್ಡ ಗಣಪತಿಗೆ 1೦೦೦ ಕೆಜಿ ಕಡಲೆಕಾಯಿಯಿಂದ ಅಭಿಷೇಕ ನಡೆಯಲಿದೆ. ಹುರಿದಿರುವ ಕಡಲೆಕಾಯಿ ಸೇರಿಗೆ 3೦ ರೂ, ಹಾಗೂ ಹಸಿ ಕಡಲೆ ಸೇರಿಗೆ 3೦ ರೂ.ಗಳಂತೆ ಮಾರಾಟವಾಗುವ ನಿರೀಕ್ಷೆ ಇದೆ.

Exit mobile version