ಮೈಸೂರು: ಎಲ್ ಆ್ಯಂಡ್‌ಟಿ ಟೆಕ್ನಾಲಜೀಸ್ (L&T) ಮೈಸೂರಿನಲ್ಲಿ ತನ್ನ ಹೊಸ ಕ್ಯಾಂಪಸ್ ಅನ್ನು ಆರಂಭಿಸಿದೆ. ಎಂಜಿನಿಯರಿಂಗ್ ಕ್ಷೇತ್ರದ ಉತ್ಪನ್ನಗಳು, ಡಿಜಿಟಲ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಈ ಹೊಸ ಕೇಂದ್ರ ಮಾಡಲಿದೆ.
ಮಾಡ್ಯುಲ್ ಎಕ್ಸ್ ಎಂಬ ಈ ನೂತನ ಕ್ಯಾಂಪಸ್, 8 ಅಂತಸ್ತುಗಳನ್ನು ಹೊಂದಿದೆ. ಸುಸಜ್ಜಿತವಾದ ಕ್ಯಾಂಪಸ್, 1,300 ಎಂಜಿನಿಯರ್‌ಗಳು ಕುಳಿತು ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್. ಎನ್. ಸುಬ್ರಮಣ್ಯನ್ ಹಾಗೂ ಸಿಇಒ ಅಮಿತ್ ಚಡ್ಡಾ ಅವರು ಕೇಂದ್ರವನ್ನು ಉದ್ಘಾಟಿಸಿದರು.
ಸುಂದರ ನಗರ ಮೈಸೂರು ವೃತ್ತಿಪರರಿಗೆ ಸಕಲ ಸೌಲಭ್ಯಗಳನ್ನು ನೀಡುವ ಉತ್ತಮ ತಾಣ. ನಗರದಲ್ಲಿ ತನ್ನ ವಿತರಣೆ ಮತ್ತು ವಿನ್ಯಾಸ ಕೇಂದ್ರವನ್ನು ವೇಗವಾಗಿ ವಿಸ್ತರಿಸಲಾಗುತ್ತಿದೆ. ಜಾಗತಿಕ ಮಟ್ಟದ ಗ್ರಾಹಕರಿಗೆ ಈ ಕ್ಯಾಂಪಸ್ ತನ್ನ ಸೇವೆ ನೀಡಲಿದೆ ಎಂದರು. ಮುಂದಿನ ಎರಡು ವರ್ಷದಲ್ಲಿ 1,000 ಎಂಜಿನಿಯರ್‌ಗಳನ್ನು ನೇಮಕ ಮಾಡಲು ಕಂಪನಿ ನಿರ್ಧರಿಸಿದೆ.