Site icon Vistara News

RBI | ಸೊಲ್ಲಾಪುರದ ಲಕ್ಷ್ಮೀ ಕೋಪರೇಟಿವ್‌ ಬ್ಯಾಂಕ್‌ ಲೈಸೆನ್ಸ್‌ ರದ್ದು, ಠೇವಣಿದಾರರ ಗತಿ ಏನು?

cash

ಮುಂಬಯಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ಮಹಾರಾಷ್ಟ್ರದ ಸೊಲ್ಲಾಪುರದ ಲಕ್ಷ್ಮೀ ಕೋಪರೇಟಿವ್‌ ಬ್ಯಾಂಕ್‌ನ ಲೈಸೆನ್ಸ್‌ ಅನ್ನು ರದ್ದುಪಡಿಸಿದೆ.

ಬಂಡವಾಳದ ಕೊರತೆ ಮತ್ತು ಆದಾಯ ಗಳಿಕೆಯ ಸಾಮರ್ಥ್ಯ ಕೊರತೆ ಹಿನ್ನೆಲೆಯಲ್ಲಿ ಲೈಸೆನ್ಸ್‌ ರದ್ದುಪಡಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಹೀಗಾಗಿ ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ಸೊಲ್ಲಾಪುರದ ಲಕ್ಷ್ಮೀ ಕೋಪರೇಟಿವ್‌ ಬ್ಯಾಂಕ್ ತನ್ನ ಹಣಕಾಸು ಸೇವೆಗಳನ್ನು ಸ್ಥಗಿತಗೊಳಿಸಬೇಕಾಗಿದೆ.

ಲಕ್ಷ್ಮೀ ಕೋಪರೇಟಿವ್‌ ಬ್ಯಾಂಕ್‌ ನಲ್ಲಿರುವ ಹಾಲಿ ಠೇವಣಿಗಳು ಗ್ರಾಹಕರಿಗೆ ಸಂಪೂರ್ಣವಾಗಿ ಹಿಂತಿರುಗಿಸಲು ಸಾಕಾಗುವಷ್ಟು ಮೊತ್ತವನ್ನು ಹೊಂದಿಲ್ಲ ಎಂದು ಆರ್‌ಬಿಐ ತಿಳಿಸಿದೆ.

ಠೇವಣಿದಾರರ ಗತಿ ಏನು? : ಠೇವಣಿದಾರರು 5 ಲಕ್ಷ ರೂ. ತನಕ ಠೇವಣಿ ವಿಮೆ ಪಡೆಯಲು ಅರ್ಹರಿರುತ್ತಾರೆ ಎಂದು ಆರ್‌ಬಿಐ ತಿಳಿಸಿದೆ. ಆದರೆ ಒಂದು ವೇಳೆ ಐದು ಲಕ್ಷ ರೂ.ಗಿಂತ ಹೆಚಿನ ಮೊತ್ತ ಠೇವಣಿ ಇಟ್ಟಿದ್ದರೆ, ಐದು ಲಕ್ಷ ರೂ. ಮೊತ್ತಕ್ಕೆ ವಿಮೆ ಪರಿಹಾರ ಸಿಗಬಹುದು. ಆರ್‌ಬಿಐ ಅಂದಾಜಿನ ಪ್ರಕಾರ 99% ಠೇವಣಿದಾರರಿಗೆ ಅವರ ಠೇವಣಿ ಸಿಗಬಹುದು. ಸೊಲ್ಲಾಪುರ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿದೆ.

Exit mobile version