ನವದೆಹಲಿ: ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್‌ಗಳಿಗೆ ಕೆವೈಸಿ ಪರಿಷ್ಕರಣೆ ಮಾಡಲು ಕೊನೆಯ ದಿನ ಇದೇ 2022ರ ಜೂನ್ 30 ಆಗಿದೆ. ಹೀಗಾಗಿ ಎಲ್ಲ ಹೂಡಿಕೆದಾರರು ಗಡುವಿನ ಒಳಗಾಗಿ ಕೆವೈಸಿ ಅಪ್‌ಡೇಟ್ ಮಾಡಬೇಕು ಎಂದು ಎನ್‌ಎಸ್‌ಡಿಎಲ್ ತಿಳಿಸಿದೆ.
ನ್ಯಾಶನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (NSDL) ಈ ಸಂಬಂಧ ಹೇಳಿಕೆ ನೀಡಿದ್ದು, ಕೆವೈಸಿಯಲ್ಲಿ ಹೂಡಿಕೆದಾರರು ತಮ್ಮ ಹೆಸರು, ಪ್ಯಾನ್, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಆದಾಯ ಶ್ರೇಣಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ತಿಳಿಸಿದೆ. 2021ರ ಜೂನ್ 1ರಿಂದ ಕೆವೈಸಿಯಲ್ಲಿ ಈ ಆರೂ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ.
ಹೂಡಿಕೆದಾರರಿಗೆ ಈಗಾಗಲೇ ಅಲರ್ಟ್ ಮಾಡಲಾಗಿದೆ ಎಂದು ಎನ್‌ಎಸ್‌ಡಿಎಲ್ ತಿಳಿಸಿದೆ. ಜೂನ್ 30ರ ಬಳಿಕ ಕೆವೈಸಿ ಪರಿಷ್ಕರಣೆ ಆಗದಿರುವ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಳನ್ನು ನಿಷ್ಕ್ರಿಯ ಖಾತೆ ಎಂದು ಪರಿಗಣಿಸಲಾಗುವುದು ಎಂದು ಎನ್‌ಎಸ್‌ಡಿಎಲ್ ತಿಳಿಸಿದೆ.
ಈ ಹಿಂದೆ 2022 ಮಾರ್ಚ್ 31 ಕೆವೈಸಿ ಪರಿಷ್ಕರಣೆಗೆ ಕೊನೆ ದಿನಾಂಕವಾಗಿತ್ತು ಬಳಿಕ ಜೂನ್ 30ಕ್ಕೆ ವಿಸ್ತರಿಸಲಾಗಿತ್ತು.