Site icon Vistara News

Layoffs : ಡೆಲ್‌ ಕಂಪನಿಯಿಂದ 6,000 ಉದ್ಯೋಗಿಗಳ ವಜಾ

Layoffs: 6,000 layoffs from Dell

ನವ ದೆಹಲಿ: ಅಮೆರಿಕ ಮೂಲದ ತಂತ್ರಜ್ಞಾನ ಕಂಪನಿ ಡೆಲ್‌ (Dell) 5,650 ಉದ್ಯೋಗಿಗಳನ್ನು ವಜಾಗೊಳಿಸಲು (Layoffs) ಉದ್ದೇಶಿಸಿದೆ. ಕಂಪನಿಯ ಜಾಗತಿಕ ಮಟ್ಟದ ಸಿಬ್ಬಂದಿ ಸಂಖ್ಯೆಯಲ್ಲಿ 5% ಪಾಲು ಇದಾಗಿದೆ. ಹೊಸ ನೇಮಕಾತಿಯಲ್ಲಿ ಕಡಿತ, ಪ್ರಯಾಣಗಳ ವೆಚ್ಚ ಇಳಿಕೆ ಇತ್ಯಾದಿ ಕ್ರಮಗಳನ್ನು ಕಂಪನಿ ಕೈಗೊಂಡಿದೆ. ಕಂಪನಿ ಈ ಹಿಂದೆಯೂ ಅನೇಕ ವಿಪತ್ತುಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಮುಂಬರುವ ದಿನಗಳಲ್ಲಿ ಪ್ರಬಲವಾಗಿ ವಿಸ್ತರಿಸಲಿದೆ. 2020ರಲ್ಲಿ ಕೋವಿಡ್-‌19 ಬಿಕ್ಕಟ್ಟಿನ ಸಂದರ್ಭ ಕಂಪನಿ ಉದ್ಯೋಗ ಕಡಿತ ಮಾಡಿತ್ತು.

ಡೆಲ್‌ ಕಂಪನಿಯು 39,000 ಸಿಬ್ಬಂದಿಯನ್ನು ಹೊಂದಿದೆ. ಕಂಪನಿಯ ಉದ್ಯೋಗಿಗಳಲ್ಲಿ ಮೂರನೇ ಒಂದರಷ್ಟು ಮಂದಿ ಅಮೆರಿಕ ಮೂಲದವರಾಗಿದ್ದಾರೆ. ಡೆಲ್‌ ಸತತ ಆವಿಷ್ಕಾರಗಳಿಂದ ತನ್ನ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಆರ್ಥಿಕ ಅನಿಶ್ಚಿತತೆಯ ಕಾಲಾವಧಿಯಲ್ಲಿಯೂ ಗುಣಮಟ್ಟದ ಸೇವೆಯನ್ನು ಒದಗಿಸುತ್ತಿದೆ. ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವೆಚ್ಚ ನಿಯಂತ್ರಣ ಅಗತ್ಯವಾಗಿದೆ.

೨೦೨೨ರ ಅಕ್ಟೋಬರ್-ಡಿಸೆಂಬರ್‌ ಅವಧಿಯಲ್ಲಿ ಪರ್ಸನಲ್‌ ಕಂಪ್ಯೂಟರ್‌ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿತ್ತು. ಡೆಲ್‌ ಕಂಪನಿಯ ವ್ಯವಹಾರದಲ್ಲಿ 37% ಇಳಿಕೆಯಾಗಿತ್ತು. ಎಚ್‌ಪಿ ಕೂಡ ಮುಂದಿನ ಮೂರು ವರ್ಷಗಳಲ್ಲಿ 6,000 ಉದ್ಯೋಗಗಳನ್ನು ಕಡಿತಗೊಳಿಸಲಿದೆ. ಸಿಸ್ಕೊ ಸಿಸ್ಟಮ್‌, ಇಂಟರ್‌ನ್ಯಾಶನಲ್‌ ಬಿಸಿನೆಸ್‌ ಮೆಶೀನ್ಸ್‌ ಕಾರ್ಪ್‌ ಕೂಡ ತಲಾ 4,000 ಕಾರ್ಮಿಕರನ್ನು ವಜಾಗೊಳಿಸಲಿದೆ. ಟೆಕ್‌ ವಲಯ 2022ರಲ್ಲಿ 97,171 ಉದ್ಯೋಗಗಳನ್ನು ಕಡಿತಗೊಳಿಸಿತ್ತು.

Exit mobile version