Site icon Vistara News

Layoffs news : ಸ್ಟಾರ್ಟಪ್‌ಗಳಲ್ಲಿ ಜನವರಿ-ಮಾರ್ಚ್‌ನಲ್ಲಿ 9,400 ಹುದ್ದೆ ಕಡಿತ

Layoffs news 9400 job cuts in startups in January March

ಬೆಂಗಳೂರು: ದೇಶದ ಸ್ಟಾರ್ಟಪ್‌ ವಲಯದಲ್ಲಿ (Start Up) ಫಂಡ್‌ ಪೂರೈಕೆಯ ಕೊರತೆ ಕಾಡುತ್ತಿದೆ. ಜನವರಿ-ಮಾರ್ಚ್‌ ಅವಧಿಯಲ್ಲಿ 9,400 ಹುದ್ದೆ ಕಡಿತವಾಗಿದೆ ಎಂದು (Layoffs news) ನೇಮಕಾತಿ ವಲಯದ ಕರಿಯರ್‌ ನೆಟ್‌ ವರದಿ ತಿಳಿಸಿದೆ. ಆನ್‌ಲೈನ್‌ ಶಿಕ್ಷಣ ವಲಯದ ಬೈಜೂಸ್‌, ಅನ್‌ಅಕಾಡೆಮಿ, ಸೋಶಿಯಲ್‌ ಮೀಡಿಯಾ ಸ್ಟಾರ್ಟಪ್‌ ಶೇರ್‌ ಚಾಟ್‌, ಅಪಾರ್ಟ್‌ಮೆಂಟ್‌ ಮ್ಯಾನೇಜ್‌ಮೆಂಟ್‌ ಪ್ಲಾಟ್‌ ಫಾರ್ಮ್‌ ಮೈಗೇಟ್‌, ಕಾರ್‌ ಸರ್ವೀಸ್‌ ಕಂಪನಿ ಗೋ-ಮೆಕಾನಿಕ್‌ ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ ಗಣನೀಯ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಿವೆ ಎಂದು ವರದಿ ತಿಳಿಸಿದೆ.

ಜನವರಿ-ಮಾರ್ಚ್‌ ಅವಧಿಯಲ್ಲಿ ಪ್ರಮುಖ ಸ್ಟಾರ್ಟಪ್‌ಗಳು 100-300 ಲೆಕ್ಕದಲ್ಲಿ ಉದ್ಯೋಗ ಕಡಿತ ಮಾಡಿವೆ. ಡನ್ಜೊ, ಹೆಲ್ತ್‌ ಟೆಕ್‌ ಸಾಫ್ಟ್‌ವೇರ್‌ ಸರ್ವೀಸ್‌ ನೀಡುವ ಸಾಸ್‌, ಓಲಾದಲ್ಲೂ ಹುದ್ದೆ ಕಡಿತ ಉಂಟಾಗಿತ್ತು.

ಸ್ಟಾರ್ಟಪ್‌ಗಳಲ್ಲಿ ಹಿರಿಯ ಉದ್ಯೋಗಿಗಳೂ ಉದ್ಯೋಗ ಕಳೆದುಕೊಂಡಿದ್ದಾರೆ. ಎಜ್ಯುಟೆಕ್‌, ಫಿನ್‌ಟೆಕ್‌, ಇ-ಕಾಮರ್ಸ್‌, ಸಾಸ್‌, ಹೆಲ್ತ್‌ಟೆಕ್‌ ವಲಯದ ಸ್ಟಾರ್ಟಪ್‌ ಗಳಲ್ಲಿ ನೇಮಕಾತಿಯ ಪ್ರಮಾಣ ಇಳಿಕೆಯಾಗಿದೆ. ಶಯಕ್ಷಣಿಕ ತಂತ್ರಜ್ಞಾನ ಆಧರಿತ ಸ್ಟಾರ್ಟಪ್‌ಗಳಲ್ಲಿ ಅತಿ ಹೆಚ್ಚು ಉದ್ಯೋಗ ಕಡಿತ ಉಂಟಾಗಿದೆ. ಮುಂದಿನ 6 ತಿಂಗಳು ತನಕ ಪರಿಸ್ಥಿತಿ ಸುಧಾರಿಸುವ ಲಕ್ಷಣ ಇಲ್ಲ ಎನ್ನುತ್ತಾರೆ ಕೆರಿಯರ್‌ ನೆಟ್‌ ಸಿಇಒ ಅಂಶುಮಾನ್‌ ದಾಸ್.‌

ಹೂಡಿಕೆಗೆ ಕೊರತೆ ಇಲ್ಲದಿದ್ದರೂ ಹಲವು ಸ್ಟಾರ್ಟಪ್‌ಗಳು ತಮ್ಮ ನೇಮಕಾತಿಯ ಸ್ವರೂಪವನ್ನು ಬದಲಿಸಲು ಯೋಚಿಸಿವೆ. ಈಗಿನ ಮಾರುಕಟ್ಟೆಗೆ ತಕ್ಕಂತೆ ನೇಮಕಾತಿಯನ್ನು ಮಾಡಲು ಮುಂದಾಗಿವೆ. ಇದರ ಪರಿಣಾಮ ಸದ್ಯಕ್ಕೆ ಹೊಸ ನೇಮಕಾತಿ ವಿಳಂಬವಾಗುತ್ತಿದೆ.

Exit mobile version