ಹೊಸದಿಲ್ಲಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮುಂದಿನ ವಾರ ತನ್ನ ಚೊಚ್ಚಲ ನಾಲ್ಕನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಲಿದೆ. ಷೇರುದಾರರಿಗೆ ಡಿವಿಡೆಂಡ್ ಅನ್ನೂ ಪ್ರಕಟಿಸುವ ನಿರೀಕ್ಷೆ ಇದೆ.
ಇತ್ತೀಚೆಗೆ ಯಶಸ್ವಿ ಐಪಿಒ ನಡೆಸಿರುವ ಎಲ್‌ಐಸಿಯ ತ್ರೈಮಾಸಿಕ ಫಲಿತಾಂಶ ಹಾಗೂ ಡಿವಿಡೆಂಡ್ ವಿತರಣೆ ಇದೀಗ ಕುತೂಹಲ ಮೂಡಿಸಿದೆ. ತ್ರೈಮಾಸಿಕ ಫಲಿತಾಂಶ ಹಾಗೂ 2021-22 ನೇ ಸಾಲಿನ ಫಲಿತಾಂಶ ಮತ್ತು ಆ ಸಾಲಿನ ಡಿವಿಡೆಂಡ್ ಘೋಷಣೆ ಮಾಡುವ ನಿರೀಕ್ಷೆ ಇದೆ.
ಎಲ್‌ಐಸಿ ಮೇ 30 ರಂದು ನಿರ್ದೇಶಕರ ಆಡಳಿತ ಮಂಡಳಿ ಸಭೆ ನಡೆಸಲಿದೆ. ಸಭೆಯಲ್ಲಿ ಚೊಚ್ಚಲ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಲಿದೆ. ಜನವರಿ-ಮಾರ್ಚ್ ಅವಧಿಯ ಹಣಕಾಸು ರಿಸಲ್ಟ್ ಗೊತ್ತಾಗಲಿದೆ. ಬಿಎಸ್‌ಇನಲ್ಲಿ ಮಂಗಳವಾರ ಎಲ್‌ಐಸಿ ಷೇರು ದರ 829ರೂ. ಇತ್ತು. ಎಲ್‌ಐಸಿಯ 20,557 ಕೋಟಿ ರೂ.ಗಳ ಐಪಿಒ ಮೇ 4ರಿಂದ ಮೇ 9ರ ತನಕ ನಡೆದಿತ್ತು.
ಇದನ್ನೂ ಓದಿ: ಹೂಡಿಕೆದಾರರಿಗೆ ಎಲ್‌ಐಸಿ ಷೇರು ಕಲಿಸಿದ ಹೊಸ ಪಾಠ!