ಮುಂಬಯಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಷೇರುದಾರರಿಗೆ ೧೦ ರೂ. ಮುಖಬೆಲೆಯ ಪ್ರತಿ ಷೇರಿಗೆ ೧.೫೦ ರೂ.ಗಳ ಡಿವಿಡೆಂಡ್ ಅನ್ನು ಘೋಷಿಸಿದೆ.
೨೦೨೨ರ ಆಗಸ್ಟ್ ೨೬ರಂದು ಡಿವಿಡೆಂಡ್ ವಿತರಣೆಯಾಗಲಿದೆ. ಈ ನಡುವೆ ಶುಕ್ರವಾರ ಎಲ್‌ಐಸಿ ಷೇರು ದರದಲ್ಲಿ ಚೇತರಿಕೆ ದಾಖಲಾಗಿದ್ದು, ೭೦೬ ರೂ.ಗೆ ಏರಿಕೆಯಾಗಿದೆ. ಸೆಪ್ಟೆಂಬರ್ ೨೭ರಂದು ಎಲ್‌ಐಸಿಯ ವಾರ್ಷಿಕ ಮಹಾ ಸಭೆ (ಎಜಿಎಂ) ಕೂಡ ನಡೆಯಲಿದೆ. ಎಲ್‌ಐಸಿ ಐಪಿಒ ಬಳಿಕ ನಡೆಯುತ್ತಿರುವ ಮೊದಲ ಎಜಿಎಂ ಇದಾಗಿದೆ.
ಎಲ್‌ಐಸಿ ಲಾಭ ಇಳಿಕೆ
ಎಲ್‌ಐಸಿ ಕಳೆದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ೨,೪೦೯ ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಆದರೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (೨,೯೧೭ ಕೋಟಿ ರೂ.) ೧೭% ಇಳಿಕೆಯಾಗಿತ್ತು. ಎಲ್‌ಐಸಿಯ ಐಪಿಒ ನಡೆದು ಒಂದು ತಿಂಗಳಿನ ಅವಧಿಯಲ್ಲಿ ಸಂಸ್ಥೆಯ ಮಾರುಕಟ್ಟೆ ಮೌಲ್ಯದಲ್ಲಿ ೧.೮೬ ಲಕ್ಷ ಕೋಟಿ ರೂ. ನಷ್ಟವಾಗಿತ್ತು. ಹೂಡಿಕೆದಾರರಲ್ಲಿ ಕಳವಳ ಮೂಡಿಸಿತ್ತು. ಏಷ್ಯಾದಲ್ಲಿಯೇ ಈ ವರ್ಷ ಅತಿ ಹೆಚ್ಚು ನಷ್ಟಕ್ಕೀಡಾಗಿರುವ ಐಪಿಒಗಳಲ್ಲಿ, ಮೇನಲ್ಲಿ ನಡೆದ ಎಲ್‌ಐಸಿ ಐಪಿಒ ಕೂಡ ಒಂದಾಗಿದೆ.