Site icon Vistara News

LIC business : ಖಾಸಗಿ ವಿಮೆ ಕಂಪನಿಗಳ ಅಬ್ಬರಕ್ಕೆ ಮಂಕಾದ ಎಲ್‌ಐಸಿ

LIC OFFICE

#image_title

ಮುಂಬಯಿ: ಖಾಸಗಿ ವಲಯದ ವಿಮೆ ಕಂಪನಿಗಳು ಕಳೆದ ಮೇ ತಿಂಗಳಿನಲ್ಲಿ ಭರ್ಜರಿ ವಹಿವಾಟು ದಾಖಲಿಸಿವೆ. ಇವುಗಳ ಅಬ್ಬರಕ್ಕೆ ಎಲ್‌ಐಸಿ ಮಂಕಾಗಿದೆ. (Life Insurance Corporation-LIC) ಖಾಸಗಿ ವಿಮೆ ಕಂಪನಿಗಳು ಪ್ರೀಮಿಯಂ ಮಾರಾಟದಲ್ಲಿ 10% ಬೆಳವಣಿಗೆ ದಾಖಲಿಸಿದ್ದರೆ, ಎಲ್‌ಐಸಿ 6% ಇಳಿಕೆ ಕಂಡಿದೆ.

ಎಸ್‌ಬಿಐ ಲೈಫ್‌ ಮತ್ತು ಎಚ್‌ಡಿಎಫ್‌ಸಿ ಲೈಫ್‌ ಅತಿ ಹೆಚ್ಚು ವಹಿವಾಟನ್ನು ಮೇನಲ್ಲಿ ನಡೆಸಿವೆ. ವಿಮೆ ಮಾರುಕಟ್ಟೆ ತಜ್ಞರ ಪ್ರಕಾರ ಕಳೆದ ತಿಂಗಳು ವಿಮೆ ಬಿಸಿನೆಸ್‌ ಇಳಿಕೆಗೆ ಬೇಸ್‌ ಎಫೆಕ್ಟ್‌ ಉನ್ನತ ಮಟ್ಟದಲ್ಲಿ ಇದ್ದುದೂ ಒಂದು ಕಾರಣ. ಏಕೆಂದರೆ 2022ರ ಮೇನಲ್ಲಿ ವಿಮೆ ಕಂಪನಿಗಳು 101% ವಹಿವಾಟು ಪ್ರಗತಿ ದಾಖಲಿಸಿತ್ತು. ಕೋವಿಡ್‌ ಬಿಕ್ಕಟ್ಟು ಉಪಶಮನವಾಗಿ ಮಾರುಕಟ್ಟೆ ತೆರೆದಿದ್ದರಿಂದ ವಹಿವಾಟು ಹೆಚ್ಚಳವಾಗಿತ್ತು.

ಐಸಿಐಸಿಐ ಪ್ರುಡೆನ್ಷಿಯಲ್‌ ಲೈಫ್‌, ಎಚ್‌ಡಿಎಫ್‌ಸಿ ಲೈಫ್‌ ಮತ್ತು ಎಸ್‌ಬಿಐ ಲೈಫ್‌ ಕಳೆದ ಮೇನಲ್ಲಿ 8-10% ಪ್ರಗತಿ ದಾಖಲಿಸಿತ್ತು. ಮ್ಯಾಕ್ಸ್‌ ಲೈಫ್ಸ್‌ ಬೆಳವಣಿಗೆ ಮಂದಗತಿಯಲ್ಲಿತ್ತು. ಏಪ್ರಿಲ್‌ನಲ್ಲಿ ವಿಮೆ ವಹಿವಾಟು ಕಡಿಮೆಯಾಗಿದ್ದರೂ, ಮೇನಲ್ಲಿ ಮತ್ತೆ ಚುರುಕಾಗಿತ್ತು ಎಂದು ಕೋಟಕ್‌ ಇನ್‌ಸ್ಟಿಟ್ಯೂಶನಲ್‌ ಈಕ್ವಿಟೀಸ್‌ನ ವರದಿ ತಿಳಿಸಿದೆ.

ಜೀವ ವಿಮೆ ಇಂಡಸ್ಟ್ರಿ (life insurance industry) ಕಳೆದ ಏಪ್ರಿಲ್-ಮೇನಲ್ಲಿ ಒಟ್ಟು 36,043 ಕೋಟಿ ರೂ. ಪ್ರೀಮಿಯಂ ಅನ್ನು ಸಂಗ್ರಹಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 15% ಇಳಿಕೆ ದಾಖಲಿಸಿದೆ. ಎಸ್‌ಬಿಐ ಲೈಫ್‌ 3,751 ಕೋಟಿ ರೂ.ಗಳ ಪ್ರೀಮಿಯಂ ಸಂಗ್ರಹಿಸಿದೆ. 2022-23ರ ಇದೇ ಅವಧಿಗೆ ಹೋಲಿಸಿದರೆ (2,764 ಕೋಟಿ ರೂ.) 35% ಏರಿಕೆ ದಾಖಲಿಸಿದೆ.

ಎಲ್‌ಐಸಿ ಗಣನೀಯ ಕುಸಿತ: ಎಲ್‌ಐಸಿಯ ಪ್ರೀಮಿಯಂ ಸಂಗ್ರಹ 27,557 ಕೋಟಿ ರೂ.ಗಳಿಂದ 19,866 ಕೋಟಿ ರೂ.ಗೆ ಇಳಿಕೆ ದಾಖಲಿಸಿದೆ. 27% ಕುಸಿತ ಆಗಿರುವುದು ಗಮನಾರ್ಹ.‌

ಕಳೆದ ವರ್ಷ ಸಂಚಲನ ಮೂಡಿಸಿದ್ದ ಎಲ್‌ಐಸಿಯ ಐಪಿಒದಲ್ಲಿ ಹೂಡಿಕೆ ಮಾಡಿದ್ದವರಿಗೆ ಕಳೆದೊಂದು ವರ್ಷದಲ್ಲಿ ಭಾರಿ ನಿರಾಸೆಯಾಗಿದೆ. (LIC Stock) ಹೂಡಿಕೆದಾರರಿಗೆ ಒಂದೇ ವರ್ಷದಲ್ಲಿ 2.5 ಲಕ್ಷ ಕೋಟಿ ರೂ. ನಷ್ಟದ ಆಘಾತ ಎದುರಿಸುವಂತಾಗಿದೆ. (Life Insurance Corporation India-LIC) 2022ರ ಮೇ 17ರಂದು ಎಲ್‌ಐಸಿ ಷೇರು ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ನೋಂದಣಿಯಾಗಿತ್ತು. ಐಪಿಒ ದರ ಪ್ರತಿ ಷೇರಿಗೆ 949 ರೂ. ಆಗಿತ್ತು. ಈ ಮಟ್ಟದಿಂದ ದರದಲ್ಲಿ 40% ಇಳಿಕೆಯಾಗಿದೆ. ಇದರ ಪರಿಣಾಮ ಎಲ್‌ಐಸಿಯ ಮಾರುಕಟ್ಟೆ ಮೌಲ್ಯದಲ್ಲಿ ಒಟ್ಟು 2.5 ಲಕ್ಷ ಕೋಟಿ ರೂ. ನಷ್ಟವಾಗಿದೆ.

ಸರ್ಕಾರ ಈಗಲೂ ಎಲ್‌ಐಸಿಯಲ್ಲಿ 96.5% ಷೇರು ಪಾಲನ್ನು ಹೊಂದಿದೆ. ಮ್ಯೂಚುವಲ್‌ ಫಂಡ್‌ಗಳು ಮತ್ತು ಎಫ್‌ಐಐಗಳು ಎಲ್‌ಐಸಿಯಲ್ಲಿ ಕಳೆದೊಂದು ವರ್ಷದಲ್ಲಿ ಹೂಡಿಕೆಯನ್ನು ತಗ್ಗಿಸಿವೆ. ಎಲ್‌ಐಸಿಯಲ್ಲಿ ರಿಟೇಲ್‌ ಹೂಡಿಕೆದಾರರ ಸಂಖ್ಯೆಯೂ ಇಳಿದಿದೆ.

ಇದನ್ನೂ ಓದಿ: Digital Payments: ಡಿಜಿಟಲ್ ಪಾವತಿ, ಇಂಡಿಯಾದ್ದೇ ಕೀರ್ತಿ! ಎಲ್ಲ ದೇಶಗಳನ್ನು ಹಿಂದಿಕ್ಕಿ ನಂ.1 ಆದ ಭಾರತ

Exit mobile version