Site icon Vistara News

LIC credit card : ಎಲ್‌ಐಸಿಯಿಂದ ಎರಡು ಕ್ರೆಡಿಟ್‌ ಕಾರ್ಡ್‌ ಬಿಡುಗಡೆ, ಲಾಭಗಳೇನು?

lic

ನವ ದೆಹಲಿ: ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌, ಎಲ್‌ ಐಸಿ ಕಾರ್ಡ್ಸ್‌ ಮತ್ತು ಮಾಸ್ಟರ್‌ ಕಾರ್ಡ್‌ ಎರಡು ಕೋ-ಬ್ರಾಂಡೆಡ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ಬಿಡುಗಡೆಗೊಳಿಸಿವೆ. ಎಲ್‌ ಐಸಿ ಕ್ಲಾಸಿಕ್‌ ಮತ್ತು ಎಲ್‌ಐಸಿ ಸಿಲೆಕ್ಟ್‌ ಎಂಬ ಎರಡು ಕ್ರೆಡಿಟ್‌ ಕಾರ್ಡ್‌ಗಳನ್ನು 2023ರ ಡಿಸೆಂಬರ್‌ 14ರಂದು ಬಿಡುಗಡೆಗೊಳಿಸಲಾಗಿದೆ. (LIC credit card) ಹಾಗಾದರೆ ಈ ಕ್ರೆಡಿಟ್‌ ಕಾರ್ಡ್‌ಗಳಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.

ಕಡಿಮೆ ಬಡ್ಡಿ ದರದಿಂದ ಶೂನ್ಯ- ಪ್ರವೇಶ ಶುಲ್ಕ, ರಿವಾರ್ಡ್‌ ಪಾಯಿಂಟ್ಸ್‌, 5 ಲಕ್ಷ ರೂ. ಅಪಘಾತ ವಿಮೆ ಮತ್ತು ಇತರ ಬೆನಿಫಿಟ್‌ಗಳನ್ನು ಎರಡೂ ಕ್ರೆಡಿಟ್‌ ಕಾರ್ಡ್‌ಗಳು ಹೊಂದಿವೆ. ನೀವು ಈ ಕ್ರೆಡಿಟ್‌ ಕಾರ್ಡ್‌ಗಳನ್ನು ಪಡೆಯಲು ಎಲ್‌ ಐಸಿ ಪಾಲಿಸಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂಬ ನಿಯಮವೇನೂ ಇಲ್ಲ. ಹೀಗಿದ್ದರೂ, ನೀವು ಪಾಲಿಸಿದಾರರಾಗಿದ್ದ ಪಕ್ಷದಲ್ಲಿ ಇನ್ಷೂರೆನ್ಸ್‌ ಪ್ರೀಮಿಯಂ ಮೇಲೆ ರಿವಾರ್ಡ್ಸ್‌ ಪಾಯಿಂಟ್‌ಗಳನ್ನು ಪಡೆಯುತ್ತೀರಿ.

ಎಲ್‌ ಐಸಿ ಕ್ಲಾಸಿಕ್‌ ಕ್ರೆಡಿಟ್‌ ಕಾರ್ಡ್:‌ ಎಲ್‌ ಐಸಿ ಕ್ಲಾಸಿಕ್‌ ಕ್ರೆಡಿಟ್‌ ಕಾರ್ಡ್ ವಿಶೇಷತೆಗಳೇನು ಎಂಬುದನ್ನು ನೋಡೋಣ. ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ವೆಬ್‌ಸೈಟ್‌ನಲ್ಲಿ ಈ ಕುರಿತ ವಿವರಗಳು ಇವೆ.

ಫೀಸ್‌ ಮತ್ತು ಇತರ ಶುಲ್ಕಗಳು: ಈ ಕ್ರೆಡಿಟ್‌ ಕಾರ್ಡ್‌ ಪಡೆಯಲು ಯಾವುದೇ ಜಾಯಿನಿಂಗ್‌ ಫೀ ಇರುವುದಿ.. ವಾರ್ಷಿಕ ಶುಲ್ಕವೂ ಇರುವುದಿಲ್ಲ. ಬಡ್ಡಿ ದರ ಮಾಸಿಕ 0.75 ಅಥವಾ ವಾರ್ಷಿಕ 9% ಇರುತ್ತದೆ. ಇದು ಮಾಸಿಕ 3.5% ಅಥವಾ ವಾರ್ಷಿಕ 42% ತನಕ ಹೋಗಬಹುದು.

ಇದನ್ನೂ ಓದಿ: ಬರ್ತ್ ಡೇಟ್ ತಪ್ಪಾಗಿದ್ದಕ್ಕೆ 5 ಕೋಟಿ ರೂ. ವಿಮೆ ಪಾವತಿಗೆ ನಿರಾಕರಣೆ! 4 ಕೋಟಿ ಬಡ್ಡಿ ಸೇರಿಸಿ 9 ಕೋಟಿ ರೂ. ನೀಡಲು ಆಯೋಗ ಆದೇಶ!

ಕ್ಯಾಶ್‌ ವಿತ್‌ ಡ್ರಾವಲ್‌ ಶುಲ್ಕ: ‌ದೇಶೀಯ ಮತ್ತು ಅಂತಾರಾಷ್ಟ್ರೀಯ ಎಟಿಎಂಗಳಲ್ಲಿ 48 ದಿನಗಳ ತನಕ ಬಡ್ಡಿ ದರ ರಹಿತ ಕ್ಯಾಶ್‌ ವಿತ್‌ ಡ್ರಾವಲ್ಸ್ ಸೌಲಭ್ಯ ಸಿಗಲಿದೆ. ಇಎಂಐಗಳಿಗೆ ಸಂಬಂಧಿಸಿ ಪ್ರತಿ ವರ್ಗಾವಣೆಗೆ 199 ರೂ. ಶುಲ್ಕ ಇರುತ್ತದೆ. ವಿಳಂಬ ಪಾವತಿ ಶುಲ್ಕ: ಒಟ್ಟು ಬಾಕಿಯ 15%. (ಕನಿಷ್ಠ 100 ರೂ. ಮತ್ತು ಗರಿಷ್ಠ 1,250 ರೂ.). ಅಂತಾರಾಷ್ಟ್ರೀಯ ಟ್ರಾನ್ಸಕ್ಷನ್‌ಗಳಿಗೆ 3.5% ಶುಲ್ಕ.

ಎಲ್‌ ಐಸಿ ಕ್ಲಾಸಿಕ್‌ ಕ್ರೆಡಿಟ್‌ ಕಾರ್ಡ್‌ ಪ್ರಯೋಜನ: ಕಾರ್ಡ್‌ ಸಕ್ರಿಯವಾದ 30 ದಿನಗಳೊಳಗೆ ನೀವು ಮೊದಲ 5,000 ರೂ. ಖರ್ಚು ಮಾಡಿದರೆ 1,000 ರಿವಾರ್ಡ್‌ ಪಾಯಿಂಟ್‌ಗಳು ಸಿಗುತ್ತವೆ. ಕಾರ್ಡ್‌ ಸಕ್ರಿಯವಾದ ಮೊದಲ 30 ದಿನಗಳ ಒಳಗೆ ಮೊದಲ ಇಎಂಐ ಪಾವತಿಗೆ 5% ಕ್ಯಾಶ್‌ ಬ್ಯಾಕ್‌ (1000 ರೂ. ತನಕ) ಸಿಗುತ್ತದೆ.

ಯಾತ್ರಾದಲ್ಲಿ ದೇಶೀಯ ವಿಮಾನ ಯಾನದ ಟಿಕೆಟ್‌ ಬುಕಿಂಗ್‌ ಮೇಲೆ 500 ರೂ. ಡಿಸ್ಕೌಂಟ್‌ ಸಿಗುತ್ತದೆ. ಫಾರ್ಮ್‌ ಈಸಿ ಪ್ಲಸ್‌ನ 399 ರೂ.ಗಳ ಮೆಂಬರ್‌ ಶಿಪ್‌ ಸಿಗುತ್ತದೆ. ಲೆನ್ಸ್‌ ಕಾರ್ಟ್‌ ಗೋಲ್ಡ್‌ ನ 1 ವರ್ಷದ ಮೆಂಬರ್‌ ಶಿಪ್‌ ಸಿಗುತ್ತದೆ.

ಎಲ್‌ ಐಸಿ ಕ್ಲಾಸಿಕ್‌ ಕ್ರೆಡಿಟ್‌ ಕಾರ್ಡ್‌ ರಿವಾರ್ಡ್:‌ ಎಲ್‌ ಐಸಿ ಕ್ಲಾಸಿಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಎಲ್‌ ಐಸಿ ಇನ್ಷೂರೆನ್ಸ್‌ನ ಪ್ರೀಮಿಯಂ ವೆಚ್ಚಗಳಿಗೆ ನೀವು ರಿವಾರ್ಡ್‌ ಪಾಯಿಂಟ್‌ಗಳನ್ನು ಪಡೆಯುತ್ತೀರಿ.

ಎಲ್‌ಐಸಿ ಕ್ಲಾಸಿಕ್‌ ಕ್ರೆಡಿಟ್‌ ಕಾರ್ಡ್‌ನ ಇತರ ಬೆನಿಫಿಟ್‌ಗಳು: ಭಾರತದಾದ್ಯಂತ ಪೆಟ್ರೋಲ್‌ ಬಂಕ್‌ಗಳಲ್ಲಿ ಫ್ಯುಯೆಲ್‌ ಸರ್ಚಾರ್ಜ್‌ 1% ಮನ್ನಾ. ಆದರೆ ಇದು 200-500 ರೂ. ನಡುವಣ ಮೊತ್ತಕ್ಕೆ ಲಭ್ಯ.

ಎಲ್‌ ಐಸಿ ಕ್ಲಾಸಿಕ್‌ ಕ್ರೆಡಿಟ್‌ ಕಾರ್ಡ್‌ ವಿಮೆಯ ಲಾಭಗಳು: 2 ಲಕ್ಷ ರೂ. ತನಕ ವೈಯಕ್ತಿಕ ಅಪಘಾತ ವಿಮೆ ದೊರೆಯುತ್ತದೆ.

ಎಲ್‌ಐಸಿ ಸಿಲೆಕ್ಟ್‌ ಕ್ರೆಡಿಟ್‌ ಕಾರ್ಡ್:‌ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ವೆಬ್‌ ಸೈಟ್‌ ಪ್ರಕಾರ ಈ ಕಾರ್ಡ್‌ ಜತೆಗೆ 25,000 ರೂ.ಗಳ ಪರ್ಚೇಸ್‌ ಪ್ರೊಟೆಕ್ಷನ್‌ ಕವರ್‌, ಕ್ರೆಡಿಟ್‌ ಶೀಲ್ಡ್‌ ಲಭ್ಯವಿದೆ. 1399 ರೂ.ಗಳ ರೋಡ್‌ ಸೈಟ್‌ ಅಸಿಸ್ಟೆನ್ಸ್‌ ಲಭಿಸುತ್ತದೆ. ವಿಮಾನ ಪ್ರಯಾಣದ ವೇಳೆ ವಿಮಾನದ ವಿಳಂಬ, ಬ್ಯಾಗೇಜ್ ನಷ್ಟ, ಪಾಸ್‌ ಪೋರ್ಟ್‌ ನಷ್ಟ, ಇತರ ದಾಖಲೆಗಳ ನಷ್ಟ ಆದರೆ 4,000 ರೂ. ವಿಮೆಯ ಕವರೇಜ್‌ ಸಿಗುತ್ತದೆ.‌ 1 ಕೋಟಿ ರೂ.ಗಳ ಏರ್‌ ಆಕ್ಸಿಡೆಂಟ್‌ ವಿಮೆ ಪರಿಹಾರ ಲಭ್ಯ.

Exit mobile version