Site icon Vistara News

LIC ಹೌಸಿಂಗ್‌ ಫೈನಾನ್ಸ್‌, ಬಜಾಜ್‌ ಹೌಸಿಂಗ್ ಫಿನ್‌ ಸಾಲದ ಬಡ್ಡಿ ದರ 0.50% ಏರಿಕೆ

housing

ನವ ದೆಹಲಿ: ಗೃಹ ಸಾಲ ವಿತರಕ ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌ (LIC housing finance)ಮತ್ತು ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌ ತಮ್ಮ ಗೃಹ ಸಾಲಗಳ ಬಡ್ಡಿ ದರದಲ್ಲಿ ೦.೫೦% ಏರಿಕೆ ಮಾಡಿವೆ.

ಆರ್‌ಬಿಐ ಹಣದುಬ್ಬರವನ್ನು ಹತ್ತಿಕ್ಕಲು ರೆಪೊ ದರವನ್ನು ಕಳೆದ ಮೇನಿಂದ ೧.೪೦% ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಸಾಲದ ಉತ್ಪನ್ನಗಳ ಬಡ್ಡಿ ದರವನ್ನು ಏರಿಸುತ್ತಿವೆ. ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ತನ್ನ ಗೃಹ ಸಾಲದ ಬಡ್ಡಿ ದರವನ್ನು ವೇತನದಾರರಿಗೆ ೭.೭೦%ಕ್ಕೆ ಪರಿಷ್ಕರಿಸಿದೆ. ಏರಿಕೆಯ ಹೊರತಾಗಿಯೂ ಉಭಯ ಸಂಸ್ಥೆಗಳು ಸ್ಪರ್ಧಾತ್ಮಕ ದರದಲ್ಲಿ ಬಡ್ಡಿ ದರಗಳನ್ನು ನಿಗದಿಪಡಿಸಿವೆ. ದರ ಪರಿಷ್ಕರಣೆ ನಂತರ ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌ ಗೃಹ ಸಾಲದ ಬಡ್ಡಿ ದರ ಈಗ ೮% ಆಗಿದೆ. ಈ ಹಿಂದೆ ೭.೫೦% ಇತ್ತು.

Exit mobile version