ಎಲ್‌ಐಸಿ ತನ್ನ 67ನೇ ವಾರ್ಷಿಕೋತ್ಸವವನ್ನು (LIC Insurance policy) 2023ರ ಆಗಸ್ಟ್ 31ರಂದು ಆಚರಿಸಿದೆ. ಹಾಗೂ 2023ರ ಸೆಪ್ಟೆಂಬರ್ 1ರಿಂದ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ. (Life Insurance Corporation of India) ಇದರ ಉದ್ದೇಶ ವೈಯಕ್ತಿಕವಾಗಿ ಲ್ಯಾಪ್ಸ್ ಆಗಿರುವ ವಿಮೆ ಪಾಲಿಸಿಗಳ ನವೀಕರಣಕ್ಕೆ ಅವಕಾಶ ನೀಡುವುದು. ಭಾರತೀಯ ಜೀವ ವಿಮೆ ನಿಗಮ ಈ ಸಂಬಂಧ ಟ್ವಿಟರ್‌ನಲ್ಲಿ ವಿವರಣೆ ನೀಡಿದೆ.
ಲ್ಯಾಪ್ಸ್ ಆಗಿರುವ ಪಾಲಿಸಿಗಳ ಪುನಶ್ಚೇತನ: ಸಕಾಲಕ್ಕೆ ಪ್ರೀಮಿಯಂ ಕಟ್ಟಿ ನವೀಕರಣ ಮಾಡದಿದ್ದರೆ ಅಂಥ ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಆದರೆ ಷರತ್ತುಗಳ ಪ್ರಕಾರ ಇಂಥ ಲ್ಯಾಪ್ಸ್ ಆಗಿರುವ ಪಾಲಿಸಿಗಳನ್ನು ಕೂಡ ಬಡ್ಡಿ ಸಹಿತ ಪಾವತಿಸಬಹುದು. ಜತೆಗೆ ಅಗತ್ಯ ಮಾಹಿತಿಗಳನ್ನು ನೀಡಬೇಕಾಗುತ್ತದೆ. ನೀವು ವಿಮೆ ಖರೀದಿಸಿದ್ದರೆ ಪೂರ್ಣ ಅವಧಿಯ ತನಕ ಪ್ರೀಮಿಯಂ ಅನ್ನು ಸಕಾಲಕ್ಕೆ ಪಾವತಿಸಿ. ಅದು ನಿಮ್ಮ ಕುಟುಂಬಕ್ಕೆ ವಿಮೆಯ ರಕ್ಷಣೆಯನ್ನು ನೀಡುತ್ತದೆ. ಆಕಸ್ಮಿಕ ವಿಪತ್ತಿನ ಸಂದರ್ಭ ಕುಟುಂಬಕ್ಕೆ ಭದ್ರತೆ ನೀಡುತ್ತದೆ. ಆಶ್ರಯವಾಗುತ್ತದೆ.
ಲ್ಯಾಪ್ಸ್ಡ್ ಪಾಲಿಸಿ ಎಂದರೇನು? : ನಿಗದಿತ ದಿನದಂದು ಎಲ್‌ಐಸಿ ಪ್ರೀಮಿಯಂ ಕಟ್ಟದಿದ್ದರೆ ಅಂಥ ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಆದರೆ ಅದಕ್ಕೆ ಕಾರಣ ಕೊಟ್ಟು ಮತ್ತೆ ನವೀಕರಣ ಮಾಡಲೂ ಅವಕಾಶ ಇರುತ್ತದೆ. ಎಲ್ಲ ಪ್ರೀಮಿಯಂ ಬಾಕಿಯನ್ನು ಬಡ್ಡಿ ಸಹಿತ ಕಟ್ಟಬೇಕಾಗುತ್ತದೆ. ಹೀಗಿದದರೂ ಎಲ್‌ಐಸಿಯು ಲ್ಯಾಪ್ಸ್ ಆಗಿರುವ ಪಾಲಿಸಿಯ ನವೀಕರಣಕ್ಕೆ ಒಪ್ಪುವ ಅಥವಾ ನಿರಾಕರಿಸುವ ಅಧಿಕಾರವನ್ನು ಹೊಂದಿದೆ.
ಎಲ್‌ಐಸಿ ವೆಬ್‌ಸೈಟ್ ಪ್ರಕಾರ, ಪಾಲಿಸಿದಾರ ಕನಿಷ್ಠ 3 ಪೂರ್ಣ ವರ್ಷಗಳ ಕಾಲ ಪ್ರೀಮಿಯಂ ಕಟ್ಟಿದ್ದರೆ, ಬಳಿಕ ಪ್ರೀಮಿಯಂ ಪಾವತಿಸದಿದ್ದರೆ ಮತ್ತು ಮೊದಲ ಸಲ ಪ್ರೀಮಿಯಂ ಪಾವತಿಸದೆ 6 ತಿಂಗಳೊಳಗೆ ಮೃತಪಟ್ಟಿದ್ದರೆ, ಅನ್ ಪೇಯ್ಡ್ ಪ್ರೀಮಿಯಂ ಅನ್ನು ಕಳೆದು ಉಳಿದ ವಿಮೆ ಪರಿಹಾರ ನೀಡಲಾಗುವುದು.
ಇದನ್ನೂ ಓದಿ: Money Changes : ಸೆಪ್ಟೆಂಬರ್‌ನಲ್ಲಿ 7 ಹಣಕಾಸು ಬದಲಾವಣೆಗಳನ್ನು ಮರೆಯದಿರಿ
ಒಂದು ವೇಳೆ ಪಾಲಿಸಿದಾರ ಕನಿಷ್ಠ 5 ವರ್ಷ ಪ್ರೀಮಿಯಂ ಕಟ್ಟಿದ್ದು, ಮೃತಪಡುವುದಕ್ಕೆ 12 ತಿಂಗಳು ಮೊದಲು ಮೊದಲ ಸಲ ಪ್ರೀಮಿಯಂ ಕಟ್ಟಿಲ್ಲ ಎಂದಿದ್ದರೆ, ಅನ್ ಪೇಯ್ಡ್ ಪ್ರೀಮಿಯಂ ಮೊತ್ತವನ್ನು ಕಳೆದು ಉಳಿದ ಹಣವನ್ನು ನೀಡಲಾಗುವುದು.
ಎಲ್‌ಐಸಿ ಪಾಲಿಸಿ ಸೇವೆಯನ್ನು WhatsApp ಮೂಲಕ ಪಡೆಯುವುದು ಹೇಗೆ?
ಎಲ್‌ಐಸಿಯ WhatsApp ಅಪ್ಲಿಕೇಶನ್‌ನಲ್ಲಿ Hi ಎಂದು ಟೈಪಿಸಿ 8976862090 ಕ್ಕೆ ಕಳಿಸಿ. 11 ಆಯ್ಕೆಗಳನ್ನು ನೀವು ಗಳಿಸಬಹುದು. ಚಾಟ್ ಬಾಕ್ಸ್‌ನಲ್ಲಿ ಆಪ್ಷನ್ ನಂಬರ್ ನಮೂದಿಸಿ. ಉದಾಹರಣೆಗೆ 1 ಎಂದು ಟೈಪಿಸಿ ನಿಮ್ಮ ಮುಂದಿನ ಎಲ್‌ಐಸಿ ಪ್ರೀಮಿಯಂ ಕಟ್ಟುವ ದಿನಾಂಕ ತಿಳಿಯಿರಿ. ಎಷ್ಟು ಮೊತ್ತ ಎಂಬುದನ್ನೂ ತಿಳಿದುಕೊಳ್ಳಬಹುದು.