Site icon Vistara News

LIC Jeevan Azad Policy : 20 ವರ್ಷದ ಪ್ಲಾನ್‌ಗೆ ಕೇವಲ 12 ವರ್ಷ ಪ್ರೀಮಿಯಂ, ಇಲ್ಲಿದೆ ಡಿಟೇಲ್ಸ್

LIC

ಭಾರತೀಯ ಜೀವ ವಿಮಾ ನಿಗಮ (Life insurance corporation of India) ಎಲ್‌ಐಸಿ ಜೀವನ್‌ ಆಜಾದ್‌ ಪಾಲಿಸಿ ( LIC Jeevan Azad Policy) ಎಂಬ ವಿಮೆ ಯೋಜನೆಯನ್ನು ಬಿಡುಗಡೆಗೊಳಿಸಿದೆ. ಒಂದು ತಿಂಗಳಿನೊಳಗೆಯೇ 50,000ಕ್ಕೂ ಹೆಚ್ಚು ಪಾಲಿಸಿಗಳು ಮಾರಾಟವಾಗಿದೆ. ಪಾಲಿಸಿದಾರರಿಗೆ ಮೆಚ್ಯೂರಿಟಿಯ ದಿನ ಸಮ್-‌ ಆಶ್ಯೂರ್ಡ್ ಮೊತ್ತದ ಖಾತರಿಯನ್ನು ಇದು ಒಳಗೊಂಡಿದೆ. ಹಾಗಾದರೆ ಈ ಪಾಲಿಸಿಯ ಬಗ್ಗೆ ತಿಳಿಯುವ ಕುತೂಹಲವೇ? ಇಲ್ಲಿದೆ ಉತ್ತರ.

ಏನಿದು ಎಲ್‌ಐಸಿ ಜೀವನ್‌ ಆಜಾದ್‌ ಪಾಲಿಸಿ?

ಎಲ್‌ಐಸಿಯ ಜೀವನ್‌ ಆಜಾದ್‌ ಪಾಲಿಸಿಯು ವೈಯಕ್ತಿಕ, ನಾನ್-ಲಿಂಕ್ಡ್‌, ನಾನ್-ಪಾರ್ಟಿಸಿಪೇಟಿಂಗ್‌ ಸೇವಿಂಗ್ಸ್‌ ಲೈಫ್‌ ಇನ್ಷೂರೆನ್ಸ್‌ ಪ್ಲಾನ್‌ ಆಗಿದೆ. ಇದು ಲಿಮಿಟೆಡ್‌ ಪ್ರೀಮಿಯಂ ಎಂಡೊಮೆಂಟ್‌ ಪ್ಲಾನ್‌ ಆಗಿದೆ. (limited premium endoment plan) ಇಲ್ಲಿ ಪ್ರೀಮಿಯಂ ಪೇಮೆಂಟ್‌ ಟರ್ಮ್‌ ( premium payment term) 20 ವರ್ಷಗಳಾಗಿರುತ್ತದೆ. ಪ್ರೀಮಿಯಂ ಕೇವಲ 12 ವರ್ಷಗಳಾಗಿರುತ್ತದೆ. ಇದೇ ರೀತಿ 18 ವರ್ಷಗಳ ಪ್ರೀಮಿಯಂ 10 ವರ್ಷ ಆಗಿರುತ್ತದೆ. ಪಾಲಿಸಿದಾರರಿಗೆ ಮೆಚ್ಯೂರಿಟಿ ಅವಧಿಯಲ್ಲಿ ನಿರ್ದಿಷ್ಟ ಮೊತ್ತ ಖಾತರಿಯಾಗಿ ಸಿಗುತ್ತದೆ. 30 ವರ್ಷದ ಪಾಲಿಸಿದಾರ 10 ವರ್ಷ 12,083 ರೂ. ನೀಡಿದರೆ 18 ವರ್ಷಗಳ ಬಳಿಕ ಮೆಚ್ಯೂರಿಟಿ ವಾಲ್ಯು 2 ಲಕ್ಷ ರೂ. ಆಗಿರುತ್ತದೆ. ನಿವ್ವಳ 4-5 % ಬಡ್ಡಿ ಸೇರುತ್ತದೆ.

ಇದನ್ನೂ ಓದಿ: Mutual fund : ಮ್ಯೂಚುವಲ್‌ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ಬೇಸ್‌ ಪ್ಲಾನ್‌ನ ಮುಖ್ಯಾಂಶಗಳು ಇಂತಿವೆ: ಮಿನಿಮಮ್‌ ಬೇಸಿಕ್‌ ಸಮ್‌ ಅಶ್ಶೂರ್ಡ್:‌ 200,000 ರೂ. ಮ್ಯಾಕ್ಸಿಮಮ್ ಸಮ್‌ ಅಶ್ಯೂರ್ಡ್:‌ 5,00,000 ರೂ, ವಿಮೆ ಪಡೆಯಲು ಕನಿಷ್ಠ ವಯಸ್ಸು 90 ದಿನಗಳು. ಗರಿಷ್ಠ ವಯೋಮತಿ: 50 ವರ್ಷಗಳು. ಕನಿಷ್ಠ ಮೆಚ್ಯೂರಿಟಿ ವಯಸ್ಸು: 18 ವರ್ಷ, ಗರಿಷ್ಠ ಮೆಚ್ಯೂರಿಟಿ ವಯಸ್ಸು 70 ವರ್ಷ.

ಡೆತ್‌ ಬೆನಿಫಿಟ್:‌ ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರ ಮೃತಪಟ್ಟರೆ ಡೆತ್‌ ಬೆನಿಫಿಟ್‌ ದೊರೆಯಲಿದೆ. sum assured on death ಎಂದರೆ ವಾರ್ಷಿಕ ಪ್ರೀಮಿಯಂನ 7 ಪಟ್ಟು ಮೊತ್ತ ಸಿಗಲಿದೆ.

ಎಲ್‌ಐಸಿ ಜೀವನ್‌ ಆಜಾದ್ ಪಾಲಿಸಿಯನ್ನು ಆನ್‌ಲೈನ್‌ ಮೂಲಕವೂ ಪಡೆಯಬಹುದು. ಇದಕ್ಕಾಗಿ ಎಲ್‌ಐಸಿಯ ವೆಬ್‌ಸೈಟ್‌ www.licindia.in ನಲ್ಲಿ ಲಾಗಿನ್‌ ಆಗಬೇಕು. Buy policy online ವಿಭಾಗದಲ್ಲಿ LICs Jeevan Azad ಮೇಲೆ ಕ್ಲಿಕ್ಕಿಸಬೇಕು.

Exit mobile version