Site icon Vistara News

LIC Jeevan Kiran plan : ಎಲ್‌ಐಸಿಯಿಂದ ನೂತನ ಪ್ಲಾನ್‌ ಜೀವನ್‌ ಕಿರಣ್‌ ಬಿಡುಗಡೆ

LIC

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮ (Life Insurance Corporation of India-LIC) ತನ್ನ ನೂತನ ಪ್ಲಾನ್‌ ಜೀವನ್‌ ಕಿರಣ್‌ (LIC Jeevan Kiran plan) ಅನ್ನು ಬಿಡುಗಡೆಗೊಳಿಸಿದೆ. ಜೀವನ್‌ ಕಿರಣ್‌ ಪ್ಲಾನ್‌ 2023ರ ಜುಲೈ 27ರಿಂದ ಜಾರಿಯಾಗುತ್ತಿದೆ.

ಜೀವನ್‌ ಕಿರಣ್‌ ವೈಯಕ್ತಿಕ, ಉಳಿತಾಯ, ಲೈಫ್‌ ಇನ್ಷೂರೆನ್ಸ್‌ ಪ್ಲಾನ್‌ ಆಗಿದೆ. ಎಲ್‌ಐಸಿಯ ಜೀವನ್‌ ಕಿರಣ್‌ ಪ್ಲಾನ್‌ನ ಐಡೆಂಟಿಫಿಕೇಶನ್‌ ನಂಬರ್‌ 512N353V01 (PLAN NO-870) ಆಗಿದೆ. ಈ ಪ್ಲಾನ್‌ ಅಗ್ಗದ ವೆಚ್ಚದಲ್ಲಿ ಜೀವ ವಿಮೆಯನ್ನು ಒದಗಿಸುತ್ತದೆ. 18 ವರ್ಷದಿಂದ ಆರಂಭಿಸಿ 65 ವರ್ಷ ವಯೋಮಿತಿಯವರಿಗೆ ವಿಮೆ ಕವರೇಜ್‌ ಅನ್ನು ಒದಗಿಸುತ್ತದೆ. ಈ ವಿಮೆಯಲ್ಲಿ minimum sum assured ಮೊತ್ತವು 15 ಲಕ್ಷ ರೂ. ಆಗಿದೆ. 50 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ಸಮ್‌ ಅಶ್ಶೂರ್ಡ್‌ ಮೊತ್ತಕ್ಕೆ ಪ್ರೀಮಿಯಂನಲ್ಲಿ ರಿಬೇಟ್‌ ಇದೆ.

ಪಾಲಿಸಿಯ ಅವಧಿಯು 10 ವರ್ಷಗಳಿಂದ 40 ವರ್ಷಗಳ ತನಕ ಭಿನ್ನವಾಗಿದೆ. ಸ್ಮೋಕರ್ಸ್‌ ಮತ್ತು ನಾನ್-ಸ್ಮೋಕರ್ಸ್‌ಗೆ ಪ್ರೀಮಿಯಂ ದರ ಕೂಡ ಭಿನ್ನವಾಗಿದೆ. ಮೆಚ್ಯೂರಿ ವಯಸ್ಸು ಕನಿಷ್ಠ 28 ವರ್ಷ ಹಾಗೂ ಗರಿಷ್ಠ 80 ವರ್ಷ. ಈ ವಿಮೆಯ ಪ್ರೀಮಿಯಂ ಅನ್ನು ಸಿಂಗಲ್‌ ಪ್ರೀಮಿಯಂ ಅಥವಾ ರೆಗ್ಯುಲರ್‌ ಪ್ರೀಮಿಯಂ ಆಗಿ ಪಾವತಿಸಬಹುದು. ಪ್ರೀಮಿಯಂನ ಕನಿಷ್ಠ ಕಂತು 3,000 ರೂ. ಸಿಂಗಲ್‌ ಪ್ರೀಮಿಯಂ ಪಾಲಿಸಿಯ ದರ 3,000 ರೂ.

ಮೆಚ್ಯೂರಿಟಿ: ಈ ಟರ್ಮ್‌ ಅಶ್ಶೂರೆನ್ಸ್‌ ಪಾಲಿಸಿಯಲ್ಲಿ ಒಟ್ಟು ಪ್ರೀಮಿಯಂನ ರಿಫಂಡ್‌ ಲಭ್ಯವಿದೆ. ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರ ಮೃತಪಟ್ಟರೆ ವಿಮೆ ಪರಿಹಾರ (sum assured on death) ಸಿಗಲಿದೆ. ವಾರ್ಷಿಕ ಪ್ರೀಮಿಯಂನ 7 ಪಟ್ಟು ಮೊತ್ತದ ತನಕ ಸಿಗಲಿದೆ. ಸಿಂಗಲ್‌ ಪ್ರೀಮಿಯಂಗೆ basic sum assured ಮೊತ್ತಕ್ಕಿಂತ 125% ಪಟ್ಟು ಸಿಗಲಿದೆ.

ಆನ್‌ಲೈನ್‌ ಮೂಲಕ ಕೂಡ ಎಲ್‌ಐಸಿಯ ಜೀವನ್‌ ಕಿರಣ್‌ ಪಾಲಿಸಿಯನ್ನು ಖರೀದಿಸಬಹುದು. (www.licindia.in) ಆಫ್‌ಲೈನ್‌ನಲ್ಲೂ ಏಜೆಂಟರು, ಕಾರ್ಪೊರೇಟ್‌ ಏಜೆಂಟರು, ಬ್ರೋಕರ್‌ಗಳು, ಇನ್ಷೂರೆನ್ಸ್‌ ಮಾರ್ಕೆಟಿಂಗ್‌ ಕಂಪನಿಗಳ ಮೂಲಕ ಪ್ಲಾನ್‌ ಪಡೆಯಬಹುದು. ಈ ಪ್ಲಾನ್‌ ನಾನ್-ಲಿಂಕ್ಡ್‌ ಮತ್ತು ನಾನ್-ಪಾರ್ಟಿಸಿಪೇಟಿಂಗ್‌ ಪ್ಲಾನ್‌ ಎಂಬುದಾಗಿ ಲಭ್ಯವಿದೆ.

Exit mobile version