ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ (IMF) ಭಾರತದ ನೇರ ನಗದು ವರ್ಗಾವಣೆ ಮತ್ತು ಆಧಾರ್ ವ್ಯವಸ್ಥೆಯನ್ನು ಶ್ಲಾಘಿಸಿದೆ.
” ಭಾರತದಿಂದ ಸಾಕಷ್ಟು ಕಲಿಯುವುದಿದೆ. ಭಾರತದಲ್ಲಿ ನೇರ ನಗದು ವರ್ಗಾವಣೆಗೆ ಸಂಬಂಧಿಸಿ ಉಂಟಾಗಿರುವ ಬೆಳವಣಿಗೆ ಅಮೋಘ. ಇದು ಅದ್ಭುತವಾದ ಸಂಘಟನಾ ಕೌಶಲದಿಂದ ಸಿದ್ಧಿಸಿದೆ. ಏಕೆಂದರೆ ಅಗಾಧ ಜನಸಂಖ್ಯೆಯ ಗಾತ್ರ ಇದ್ದರೂ, ಕೆಳ ಮಟ್ಟದ ಆದಾಯದ ಜನತೆಯೂ ತಂತ್ರಜ್ಞಾನದ ಸದುಪಯೋಗವನ್ನು ಪಡೆಯಲು ಸಾಧ್ಯವಾಗಿರುವುದು ಮತ್ತು ಸರ್ಕಾರ ಈ ನೇರ ನಗದು ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿರುವುದು ಗಮನಾರ್ಹʼʼ ಎಂದು ಐಎಂಎಫ್‌ನ ಉಪ ನಿರ್ದೇಶಕ ಪಾಲೊ ಮೌರೊ ತಿಳಿಸಿದ್ದಾರೆ.
ಆಧಾರ್ ಯೋಜನೆಯನ್ನೂ ಐಎಂಎಫ್ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ. ತಂತ್ರಜ್ಞಾನದಿಂದ ಸಂಕೀರ್ಣ ಸವಾಲುಗಳನ್ನು ಬಗೆಹರಿಸಬಹುದು ಎಂಬುದಕ್ಕೆ ಭಾರತದಲ್ಲಿ ನಡೆದಿರುವ ನೇರ ನಗದು ವರ್ಗಾವಣೆ ಮತ್ತು ಆಧಾರ್ ಸೌಲಭ್ಯದ ಕ್ರಾಂತಿ ಸಾಕ್ಷಿಯಾಗಿದೆ. ಆಫ್ರಿಕಾದಲ್ಲಿ ಕೂಡ ಇಂಥ ಉದಾಹರಣೆಗಳು ಸಿಗುತ್ತವೆ. ಹೀಗಾಗಿ ಭಾರತ ಮತ್ತು ಆಫ್ರಿಕಾದಿಂದ ಜಗತ್ತಿನ ಇತರ ದೇಶಗಳು ಕಲಿಯಬೇಕಾದ್ದು ಬಹಳಷ್ಟಿದೆ ಎಂದು ಅವರು ಹೇಳಿದ್ದಾರೆ.