Site icon Vistara News

Logistics index : ವಿಶ್ವಬ್ಯಾಂಕ್‌ನ ಲಾಜಿಸ್ಟಿಕ್ಸ್‌ ಇಂಡೆಕ್ಸ್‌ನಲ್ಲಿ 6 ಸ್ಥಾನ ಮೇಲಕ್ಕೇರಿದ ಭಾರತ, ಕಾರಣವೇನು?

port

#image_title

ನವ ದೆಹಲಿ: ಭಾರತವು ವಿಶ್ವಬ್ಯಾಂಕ್‌ನ ಲಾಜಿಸ್ಟಿಕ್ಸ್‌ ಪರ್‌ಫಾರ್ಮನ್ಸ್‌ ಇಂಡೆಕ್ಸ್‌ನಲ್ಲಿ 38ನೇ ಸ್ಥಾನಕ್ಕೇರಿದ್ದು, 6 ಸ್ಥಾನ ಮೇಲಕ್ಕೇರಿದೆ. (Logistics index) ಬಂದರುಗಳಲ್ಲಿ ಹಡಗುಗಳ ನಿರ್ವಹಣೆಯಲ್ಲಿ ಉಂಟಾಗಿರುವ ಗಣನೀಯ ಸುಧಾರಣೆ ಇದಕ್ಕೆ ಕಾರಣವಾಗಿದೆ.

2018ಕ್ಕೆ ಹೋಲಿಸಿದರೆ ಭಾರತದಲ್ಲಿ ಬಂದರುಗಳ ಕಾರ್ಯಕ್ಷಮತೆಯಲ್ಲಿ ಸುಧಾರಣೆಯಾಗಿದೆ. ಉತ್ತಮ ಮೂಲಸೌಕರ್ಯಗಳು ಸಿಗುತ್ತಿವೆ. ಬಂದರುಗಳಲ್ಲಿ ಹಡಗುಗಳ ಸರಕುಗಳ ವಿಲೇವಾರಿಗೆ ತಗಲುವ ಡ್ವೆಲ್‌ ಟೈಮ್‌ (dwell time) ಅವಧಿಯು 2.6 ದಿನಗಳಿಗೆ ಇಳಿಕೆಯಾಗಿದೆ. (world banks logistic performance) ಯುಎಇಯಲ್ಲಿ ಇದು 4 ದಿನಗಳಾಗುತ್ತದೆ. ದಕ್ಷಿಣ ಆಫ್ರಿಕಾದಲ್ಲಿ 7 ದಿನ ಬೇಕಾಗುತ್ತದೆ.

2015ರಿಂದೀಚೆಗೆ ಭಾರತವು ಬಂದರುಗಳ ಅಭಿವೃದ್ಧಿಯಲ್ಲಿ ಗಣನೀಯ ಹೂಡಿಕೆ ಮಾಡಿದೆ. ಇದರ ಪರಿಣಾಮ ಮೂಲಸೌಕರ್ಯಗಳು ಅಭಿವೃದ್ಧಿಯಾಗಿವೆ. ನವೀನ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ವಿಶಾಖಪಟ್ಟಣಂ ಬಂದರಿನಲ್ಲಿ 2015ರಲ್ಲಿ 32.4 ದಿನ ಬೇಕಾಗುತ್ತಿದ್ದ ಡ್ವೆಲ್‌ ಟೈಮ್‌ 2019ರ ವೇಳೆಗೆ 5.3 ದಿನಕ್ಕೆ ಇಳಿದಿತ್ತು.

ಲಾಜಿಸ್ಟಿಕ್ಸ್‌ ವಲಯದ ಸುಧಾರಣೆಯ ನಿಟ್ಟಿನಲ್ಲಿ ಈ ಟ್ರೆಂಡ್‌ ಮುಂದುವರಿದಿರುವುದರಿಂದ ನಮ್ಮ ಬಿಸಿನೆಸ್‌ ಹೆಚ್ಚು ಸ್ಪರ್ಧಾತ್ಮಕವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇಂಡೆಕ್ಸ್‌ನಲ್ಲಿ 2014ರಿಂದೀಚೆಗೆ ಭಾರತ 54 ಸ್ಥಾನ ಸುಧಾರಿಸಿದೆ.

Exit mobile version