Site icon Vistara News

Finance Bill 2023 : ಹಣಕಾಸು ವಿಧೇಯಕಕ್ಕೆ ಲೋಕಸಭೆ ಅಸ್ತು, ಡೆಟ್‌ ಮ್ಯೂಚುವಲ್‌ ಫಂಡ್‌ ಮೇಲೆ ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್

Nirmala Sitaraman

ನವ ದೆಹಲಿ: ಹಣಕಾಸು ವಿಧೇಯಕ 2023 (Finance Bill 2023) ಅನ್ನು 45 ಕ್ಕೂ ಹೆಚ್ಚು ತಿದ್ದುಪಡಿಗಳೊಂದಿಗೆ ಲೋಕಸಭೆಯಲ್ಲಿ ಶುಕ್ರವಾರ ಅಂಗೀಕರಿಸಲಾಗಿದೆ. ಪ್ರತಿಪಕ್ಷಗಳ ಸದಸ್ಯರು ಅದಾನಿ-ಹಿಂಡೆನ್‌ಬರ್ಗ್‌ ವಿವಾದದ ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಹಣಕಾಸು ವಿಧೇಯಕದ ಅಂಶಗಳು 2023-24ರ ಸಾಲಿಗೆ ಅನ್ವಯಿಸಲಿವೆ.

ಡೆಟ್‌ ಮ್ಯೂಚುವಲ್‌ ಫಂಡ್‌ಗಳು ತಮ್ಮ ಒಟ್ಟು ಆಸ್ತಿಯಲ್ಲಿ 35%ಕ್ಕಿಂತ ಕಡಿಮೆ ಮೊತ್ತವನ್ನು ಡೆಟ್‌ ಈಕ್ವಿಟಿಗಳಲ್ಲಿ ಹೂಡಿದರೆ, ಅಂಥ ಮ್ಯೂಚುವಲ್‌ ಫಂಡ್‌ಗಳು ದೀರ್ಘಾವಧಿಯ ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌ ( long term tax benefit ) ಸೌಲಭ್ಯವನ್ನು ಕಳೆದುಕೊಳ್ಳುತ್ತವೆ. ಹಾಗೂ ಅಲ್ಪಾವಧಿಯ ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌ (short term capital gains tax) ಅನ್ನು ಆಕರ್ಷಿಸುತ್ತವೆ. 2023ರ ಏಪ್ರಿಲ್‌ 1ರ ನಂತರದ ಹೂಡಿಕೆಗೆ ಇದು ಅನ್ವಯ. ಅದೇ ರೀತಿ ಮೂರು ವರ್ಷಕ್ಕಿಂತ ಹೆಚ್ಚು ಅವಧಿಯ ಡೆಟ್‌ ಫಂಡ್‌ಗಳಿಗೆ ಇಂಡೆಕ್ಸೆಶನ್‌ ಬೆನಿಫಿಟ್‌ (Indexation) ಸಿಗುವುದಿಲ್ಲ. ಜತೆಗೆ 20% ತೆರಿಗೆ ಶ್ರೇಣಿಗೆ ಅರ್ಹವಾಗುವುದಿಲ್ಲ. ಇಂಡೆಕ್ಸೆಶನ್‌ ಬೆನಿಫಿಟ್‌ ಅಡಿಯಲ್ಲಿ ಹಣದುಬ್ಬರವನ್ನು ಪರಿಗಣಿಸಿ ತೆರಿಗೆ ಲೆಕ್ಕ ಹಾಕಲಾಗುತ್ತದೆ. ಹಣದುಬ್ಬರ ಹೆಚ್ಚಾದಾಗ ತೆರಿಗೆ ಹೊರೆ ಕಡಿಮೆಯಾಗುತ್ತದೆ.

ಲೋಕಸಭೆಯಲ್ಲಿ ಗುರುವಾರ 2023-24ರ ಅವಧಿಯಲ್ಲಿ ವೆಚ್ಚಕ್ಕೆ 45 ಲಕ್ಷ ಕೋಟಿ ರೂ.ಗಳ ಅನುದಾನ ಬೇಡಿಕೆಯ ವಿಧೇಯಕವನ್ನು ಅಂಗೀಕರಿಸಲಾಯಿತು. ಫೆಬ್ರವರಿ 1ರಂದು ಕೇಂದ್ರ ಬಜೆಟ್‌ ಅನ್ನು ಮಂಡಿಸಲಾಗಿತ್ತು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪ್ರಮುಖ ಘೋಷಣೆಗಳು:

ಸರ್ಕಾರ ನಿರೀಕ್ಷೆ ಮೀರಿದ ಸಾರ್ವಜನಿಕ ಬಂಡವಾಳ ವೆಚ್ಚವನ್ನು (capital investment) 2023-24ರಲ್ಲಿ ಮಾಡಲಿದ್ದು, 10 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 2022-23ರಲ್ಲಿ ಇದು 7.5 ಲಕ್ಷ ಕೋಟಿ ರೂ.ಗಳಾಗಿತ್ತು.

ಸರ್ಕಾರ ವಿತ್ತೀಯ ಕೊರತೆಯನ್ನು ಜಿಡಿಪಿಯ 6.4%ರಿಂದ 5.9%ಕ್ಕೆ ಇಳಿಸಲು ಉದ್ದೇಶಿಸಿದೆ.

ಬಜೆಟ್‌ ಪ್ರಕಾರ ಒಟ್ಟು ಸಾಲ 15.43 ಲಕ್ಷ ಕೋಟಿ ರೂ.ಗಳಾಗಲಿದೆ.

ಮಧ್ಯಮ ವರ್ಗದ ಜನತೆಗೆ ವಾರ್ಷಿಕ 7 ಲಕ್ಷ ರೂ. ತನಕದ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಈ ಹಿಂದೆ 5 ಲಕ್ಷ ರೂ. ತನಕ ಮಿತಿ ಇತ್ತು.

ಮೊಬೈಲ್‌ ಫೋನ್‌ ಬಿಡಿಭಾಗಗಳು, ಲಿಥಿಯಂ ಬ್ಯಾಟರಿ, ಗ್ರೀನ್‌ ಎನರ್ಜಿ ಉತ್ಪಾದನೆ, ರಫ್ತಿಗೆ ಸಹಕರಿಸುವ ಉತ್ಪನ್ನಗಳಿಗೆ ಕಸ್ಟಮ್ಸ್‌ ಸುಂಕದಿಂದ ವಿನಾಯಿತಿ ನೀಡಲಾಗಿದೆ.

ಅಫರ್ಡಬಲ್‌ ಹೌಸಿಂಗ್‌ ಯೋಜನೆಗಳನ್ನು ಅಭಿವೃದ್ಧಿಪಡಿಸಲು ನಿರ್ಮಾಣ ವಲಯದ ಉದ್ದಿಮೆಗೆ ನೆರವನ್ನು ವೃದ್ಧಿಸಲಾಗಿದೆ. ಪಿಎಂ ಆವಾಸ್‌ ಯೋಜನೆ ಅಡಿಯಲ್ಲಿ ನೆರವನ್ನು 79,000 ಕೋಟಿ ರೂ.ಗೆ ಏರಿಸಲಾಗಿದೆ.

Exit mobile version