Site icon Vistara News

Low duration Mutual fund : ಕಡಿಮೆ ಅವಧಿಯ ಮ್ಯೂಚುವಲ್‌ ಫಂಡ್‌ಗಳಲ್ಲಿ ಎಷ್ಟು ರಿಟರ್ನ್‌ ಸಿಗುತ್ತದೆ ಗೊತ್ತೇ?

RBI

ಕಡಿಮೆ ಅವಧಿಯ ಮ್ಯೂಚುವಲ್‌ ಫಂಡ್‌ಗಳನ್ನು ಲೋ ಡ್ಯುರೇಶನ್‌ ಮ್ಯೂಚುವಲ್‌ ಫಂಡ್ಸ್‌ ಎನ್ನುತ್ತಾರೆ. (Low duration Mutual funds) ಇವುಗಳು ಡೆಟ್‌ ಮ್ಯೂಚುವಲ್‌ ಫಂಡ್‌ ಕೆಟಗರಿಯಲ್ಲಿ ಬರುತ್ತವೆ ( Debt mutual fund) ಹೊಸ ಹೂಡಿಕೆದಾರರಿಗೆ ಸರಳ ಆಯ್ಕೆಯಾಗಿ ಇವುಗಳು ಬರುತ್ತವೆ. ಸ್ಟ್ರಾಟಜಿ ಮತ್ತು ಅವಧಿಗೆ ಅನುಗುಣವಾಗಿ ಇವುಗಳನ್ನೂ ಹಲವು ಕೆಟಗರಿಗಳನ್ನಾಗಿಸಬಹುದು. ಅವುಗಳೆಂದರೆ ಓವರ್‌ ನೈಟ್‌ ಫಂಡ್ಸ್‌, ಲಿಕ್ವಿಡ್‌ ಫಂಡ್ಸ್‌, ಅಲ್ಟ್ರಾ-ಶಾರ್ಟ್‌ ಡ್ಯುರೇಶನ್‌ ಫಂಡ್ಸ್‌, ಲೋ ಡ್ಯುರೇಶನ್‌ ಫಂಡ್ಸ್‌, ಶಾರ್ಟ್‌ ಡ್ಯುರೇಶನ್‌ ಫಂಡ್ಸ್‌, ಮೀಡಿಯಂ ಡ್ಯುರೇಶನ್‌ ಫಂಡ್ಸ್‌, ಮೀಡಿಯಂ ಟು ಲಾಂಗ್‌ ಡುರೇಶನ್‌ ಫಂಡ್ಸ್‌ ಮತ್ತು ಲಾಂಗ್‌ ಡ್ಯುರೇಶನ್‌ ಫಂಡ್ಸ್.‌ ಇಲ್ಲೀಗ ಲೋ ಡ್ಯುರೇಶನ್‌ ಮ್ಯೂಚುವಲ್‌ ಫಂಡ್‌ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ಅದರಲ್ಲಿ ಯಾರು ಹೂಡಿಕೆ ಮಾಡಬಹುದು? ಹೂಡಿಕೆಗೆ ಮುನ್ನ ಪರಿಗಣಿಸಬೇಕಾದ ಸಂಗತಿಗಳ ಬಗ್ಗೆ ತಿಳಿಯೋಣ.

ಲೋ ಡ್ಯುರೇಶನ್‌ ಮ್ಯೂಚುವಲ್‌ ಫಂಡ್ಸ್‌ ಎಂದರೇನು? ಲೋ ಡ್ಯುರೇಶನ್‌ ಫಂಡ್‌ಗಳು, ಹಣಕಾಸು ಮಾರುಕಟ್ಟೆಯ ಸಾಧನಗಳು ಮತ್ತು ಡೆಟ್‌ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. 6ರಿಂದ 12 ತಿಂಗಳುಗಳ ಅವಧಿಯನ್ನು ಸಾಮಾನ್ಯವಾಗಿ ಒಳಗೊಂಡಿರುತ್ತದೆ. ಕಡಿಮೆ ರಿಸ್ಕ್‌ ಹಾಗೂ ಒಂದು ವರ್ಷದ ಅವಧಿಗೆ ಹೂಡಿಕೆ ಮಾಡಲು ಬಯಸುವವರಿಗೆ ಇವುಗಳು ಒಳ್ಳೆಯದು. ಲಿಕ್ವಿಡ್‌ ಫಂಡ್‌ ಮತ್ತು ಓವರ್‌ ನೈಟ್‌ ಫಂಡ್‌ಗೆ ಹೋಲಿಸಿದರೆ ಲೋ ಡ್ಯುರೇಶನ್‌ ಫಂಡ್‌ ಹೆಚ್ಚು ರಿಟರ್ನ್‌ ನೀಡುತ್ತದೆ. 6-12 ತಿಂಗಳ ಅವಧಿಯಲ್ಲಿ ಸರಾಸರಿ 6.5% ಮತ್ತು 8.5% ಶ್ರೇಣಿಯಲ್ಲಿ ಆದಾಯ ಲಭಿಸಬಹುದು.

ಹೇಗೆ ಕೆಲಸ ಮಾಡುತ್ತದೆ? ಫಂಡ್‌ ಮ್ಯಾನೇಜರ್‌ ಡೆಟ್‌ ಸೆಕ್ಯುರಿಟೀಸ್‌ ಮತ್ತು ಮನಿ ಮಾರ್ಕೆಟ್‌ ಸಾಧನಗಳನ್ನು ಆಯ್ಕೆ ಮಾಡುತ್ತಾರೆ. ಅವಧಿ 6 ಮತ್ತು 12 ತಿಂಗಳೊಳಗೆ ಇರುವಂತೆ ನೋಡಿಕೊಳ್ಳುತ್ತಾರೆ.

ಯಾರು ಹೂಡಿಕೆ ಮಾಡಬಹುದು? ಸೆಬಿಯು ಮ್ಯೂಚುವಲ್‌ ಫಂಡ್‌ ಗಳನ್ನು ನಾನಾ ಕೆಟಗರಿಗಳಲ್ಲಿ ವಿಂಗಡಿಸಿದ ಬಳಿಕ ಹೂಡಿಕೆದಾರರಿಗೆ ಸುಲಭವಾಗಿದೆ. ತಮ್ಮ ಹಣಕಾಸು ಗುರಿಗಳು, ರಿಸ್ಕ್‌ ಪ್ರಿಫರೆನ್ಸ್‌ ಅನ್ವಯ ಆಯ್ಕೆ ಮಾಡಿಕೊಳ್ಳಬಹುದು. ಬ್ಯಾಂಕಿನ ಉಳಿತಾಯ ಖಾತೆಗಿಂತ ಇದು ಉತ್ತಮ. ಹೆಚ್ಚು ಆದಾಯ ನೀಡಬಲ್ಲುದು.

ಹೂಡಿಕೆಗೆ ಮುನ್ನ ಗಮನಿಸಿ: ಡೆಟ್‌ ಫಂಡ್‌ ಆಗಿ ಇದು ಕಡಿಮೆ ರಿಸ್ಕ್‌ ಇರುವ ಮ್ಯೂಚುವಲ್‌ ಫಂಡ್‌ ಆಗಿದೆ. ಕ್ರೆಡಿಟ್‌ ರಿಸ್ಕ್‌, ಇಂಟರೆಸ್ಟ್‌ ರೇಟ್‌ ರಿಸ್ಕ್‌, ಲಿಕ್ವಿಡಿಟಿ ರಿಸ್ಕ್‌ ಇದರಲ್ಲಿ ಕಡಿಮೆಯೇ. ಒಟ್ಟಾರೆಯಾಗಿ 6.5%ರಿಂದ 8.5 % ರಿಟರ್ನ್‌ ಸಿಗುತ್ತದೆ. ವೆಚ್ಚದ ಅನುಪಾತವನ್ನು ಗಮನಿಸಿ. ನಿಮ್ಮ ಇನ್ವೆಸ್ಟ್‌ ಮೆಂಟ್‌ ಪ್ಲಾನ್‌ ಪ್ರಕಾರ ಹೂಡಿಕೆಯನ್ನು ಮಾಡಿರಿ.

Exit mobile version