Site icon Vistara News

LPG ಹೊಸ ಕನೆಕ್ಷನ್‌ ದರದಲ್ಲಿ 750 ರೂ. ಹೆಚ್ಚಳ, ಇಂದಿನಿಂದಲೇ ಅನ್ವಯ

lpg

ನವದೆಹಲಿ: ಸಾರ್ವಜನಿಕ ತೈಲ ಕಂಪನಿಗಳು ಹೊಸತಾಗಿ ಎಲ್ಪಿಜಿ ಸಂಪರ್ಕ ಪಡೆಯಲು ಬಯಸುವ ಗ್ರಾಹಕರಿಗೆ ಕನೆಕ್ಷನ್‌ ದರದಲ್ಲಿ 750 ರೂ.ಗಳನ್ನು ಏರಿಸಿವೆ. ಹೀಗಾಗಿ ಜೂನ್‌ 16ರಿಂದ ಪ್ರತಿ ಎಲ್ಪಿಜಿ ಕನೆಕ್ಷನ್‌ ದರ 2,200 ರೂ.ಗೆ ಹೆಚ್ಚಳವಾಗಿದೆ.

ಈ ಹಿಂದೆ ಎಲ್ಪಿಜಿ ಕನೆಕ್ಷನ್‌ ದರ 1,450 ರೂ. ಆಗಿತ್ತು. ಮಾತ್ರವಲ್ಲದೆ ಎರಡು ಸಿಲಿಂಡರ್‌ಗಳನ್ನು ಪಡೆಯುವವರು 4,400 ರೂ. ಠೇವಣಿ ನೀಡಬೇಕು.

ಎಲ್ಪಿಜಿ ಸಿಲಿಂಡರ್‌ನ ಗ್ಯಾಸ್‌ ರೆಗ್ಯುಲೇಟರ್‌ ದರ 150 ರೂ.ಗಳಿಂದ 250 ರೂ.ಗೆ ಏರಿಕೆಯಾಗಿದೆ.

5 ಕೆ.ಜಿ ಸಿಲಿಂಡರ್‌ ಪಡೆಯುವ ಹೊಸ ಗ್ರಾಹಕರಿಗೆ ಭದ್ರತಾ ಠೇವಣಿ 800 ರೂ.ಗಳಿಂದ 1,150 ರೂ.ಗೆ ಹೆಚ್ಚಳವಾಗಿದೆ. ಗ್ಯಾಸ್‌ ಪೈಪ್‌ ಮತ್ತು ಪಾಸ್‌ಬುಕ್‌ಗೆ ಅನುಕ್ರಮವಾಗಿ 150 ರೂ. ಹಾಗೂ 25 ರೂ ಕೊಡಬೇಕು.

ದೇಶದಲ್ಲಿ ಎಲ್ಪಿಜಿ ಬಳಕೆಯಲ್ಲಿ 2019-22 ಅವಧಿಯಲ್ಲಿ 28 % ಹೆಚ್ಚಳವಾಗಿದೆ. ಮೇನಲ್ಲಿ 10.3 ಟನ್‌ ಎಲ್ಪಿಜಿ ಬಳಕೆಯಾಗಿದೆ.

ಇದನ್ನೂ ಓದಿ: LPG ಅಡುಗೆ ಅನಿಲ ಸಬ್ಸಿಡಿ ಉಜ್ವಲ ಫಲಾನುಭವಿಗಳಿಗೆ ಮಾತ್ರ, ಉಳಿದವರಿಗೆ ಮುಗಿದ ಅಧ್ಯಾಯ

Exit mobile version