Site icon Vistara News

LPG Price Cut : ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್‌ ದರದಲ್ಲಿ 171.50 ರೂ. ಇಳಿಕೆ

LPG Price Cut 171.50 rupees decrease in commercial LPG cylinder price

#image_title

ನವ ದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್‌ ಸಿಲಿಂಡರ್‌ ದರದಲ್ಲಿ ಗಣನೀಯ ದರ ಇಳಿಕೆಯನ್ನು ಪ್ರಕಟಿಸಿವೆ. 19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ ( Commercial LPG cylinder) ಸೋಮವಾರದಿಂದ (ಮೇ 1) ಇಳಿಕೆಯಾಗಿದೆ. (LPG Price Cut) ಇದರಿಂದಾಗಿ ದಿಲ್ಲಿಯಲ್ಲಿ 19 ಕೆ.ಜಿ ಕಮರ್ಶಿಯಲ್‌ ಎಲ್ಪಿಜಿ ದರ ಈಗ 1856.50 ರೂ.ಗೆ ತಗ್ಗಿದೆ. ಮನೆಗಳಲ್ಲಿ ಬಳಕೆ ಮಾಡುವ ಅಡುಗೆ ಅನಿಲ ದರದಲ್ಲಿ ಬದಲಾವಣೆ ಆಗಿಲ್ಲ.

2023ರ ಏಪ್ರಿಲ್‌ 1ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್‌ ದರದಲ್ಲಿ 91.50 ರೂ. ಕಡಿತ ಮಾಡಿದ್ದವು. ಆಗ ದಿಲ್ಲಿಯಲ್ಲಿ 19 ಕೆಜಿ ಕಮರ್ಷಿಯಲ್‌ ಸಿಲಿಂಡರ್‌ ದರ 2,028 ರೂ. ಇತ್ತು. ಕಳೆದ ಮಾರ್ಚ್‌ 1ರಂದು ತೈಲ ಮಾರುಕಟ್ಟೆ ಕಂಪನಿಗಳು ಕಮರ್ಶಿಯಲ್‌ ಎಲ್ಪಿಜಿ ಸಿಲಿಂಡರ್‌ ದರದಲ್ಲಿ 350.50 ರೂ. ಏರಿಕೆ ಮಾಡಿತ್ತು. ಡೊಮೆಸ್ಟಿಕ್‌ ಎಲ್ಪಿಜಿ ಸಿಲಿಂಡರ್‌ ದರದಲ್ಲಿ 50 ರೂ. ಏರಿಸಲಾಗಿತ್ತು.

2022ರ ಸೆಪ್ಟೆಂಬರ್‌ 1ರಂದು ಕಮರ್ಶಿಯಲ್‌ ಎಲ್ಪಿಜಿ ಸಿಲಿಂಡರ್‌ ದರದಲ್ಲಿ 91.50 ರೂ.ಗಳನ್ನು ಏರಿಸಲಾಗಿತ್ತು. 2022ರ ಆಗಸ್ಟ್‌ 1ರಂದು 36 ರೂ. ಕಡಿತ ಮಾಡಲಾಗಿತ್ತು. ಕೋಲ್ಕೊತಾದಲ್ಲಿ 19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ ಈಗ 1960.50 ರೂ.ಗೆ ಇಳಿದಿದೆ. ಅಲ್ಲಿ ಈ ಹಿಂದೆ 2132 ರೂ. ಇತ್ತು. ಮುಂಬಯಿನಲ್ಲಿ 19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ ಈಗ 1808 ರೂ.ಗೆ ಇಳಿದಿದೆ. ಈ ಹಿಂದೆ 1980 ರೂ. ಇತ್ತು. ಚೆನ್ನೈನಲ್ಲಿ ಈಗ 19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ 2021 ರೂ.ಗೆ ಇಳಿದಿದೆ. ಈ ಹಿಂದೆ 2192 ರೂ. ಇತ್ತು.

19 ಕೆ.ಜಿ ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ದರ ಇಳಿಕೆಯಿಂದ ಹೋಟೆಲ್‌, ರೆಸ್ಟೊರೆಂಟ್‌, ಉದ್ದಿಮೆಗಳಿಗೆ ಅನುಕೂಲವಾಗಲಿದೆ. ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಹಾದಿ ಸುಗಮವಾಗಲಿದೆ. ಹಣದುಬ್ಬರ ನಿಯಂತ್ರಿಸಲು ಕೂಡ ಸಹಕಾರಿಯಾಗುವ ನಿರೀಕ್ಷೆ ಇದೆ.

Exit mobile version