ಹೊಸದಿಲ್ಲಿ: ಅಡುಗೆ ಅನಿಲ ಸಿಲಿಂಡರ್ (ಎಲ್ಪಿಜಿ) ದರದಲ್ಲಿ ಗುರುವಾರ 3.50 ರೂ. ಏರಿಕೆಯಾಗಿದ್ದು, ದೇಶಾದ್ಯಂತ 1,000 ರೂ.ಗಳ ಗಡಿ ದಾಟಿದೆ.
ಬೆಂಗಳೂರಿನಲ್ಲಿ 14.2 ಕೆ.ಜಿ ಅಡುಗೆ ಅನಿಲ ಸಿಲಿಂಡರ್ ದರ 1,005.50 ರೂ.ಗೆ ಏರಿಕೆಯಾಗಿದೆ. ದಿಲ್ಲಿಯಲ್ಲಿ 1005 ರೂ, ಮುಂಬಯಿನಲ್ಲಿ 1005 ರೂ, ಕೋಲ್ಕೊತಾದಲ್ಲಿ 1,029 ರೂ, ಚೆನ್ನೈನಲ್ಲಿ 1,018 ರೂ.ಗೆ ವೃದ್ಧಿಸಿದೆ.ಈ ಹಿಂದೆ ಮೇ 7ರಂದು ಎಲ್ಪಿಜಿ ಅನಿಲ ದರದಲ್ಲಿ 50 ರೂ. ಏರಿಕೆಯಾಗಿತ್ತು.
ಕಳೆದ 1 ವರ್ಷದಲ್ಲಿ ಅಡುಗೆ ಅನಿಲ ದರದಲ್ಲಿ 200 ರೂ. ಹೆಚ್ಚಳವಾಗಿದೆ. ರಷ್ಯಾ-ಉಕ್ರೇನ್ ಸಂಘರ್ಷದ ಬಳಿಕ ಕಚ್ಚಾ ತೈಲ ದರ 110 ಡಾಲರ್‌ಗೆ ಜಿಗಿದಿದೆ. ಇದು ಅಡುಗೆ ಅನಿಲ ದರ ಹೆಚ್ಚಳಕ್ಕೂ ಕಾರಣವಾಗಿದೆ.