ನವದೆಹಲಿ: ಅಡುಗೆ ಅನಿಲ ಸಿಲಿಂಡರ್ ( ಎಲ್ಪಿಜಿ) ದರದಲ್ಲಿ ಶುಕ್ರವಾರ ಇಳಿಕೆಯಾಗಿದೆ.
ದಿಲ್ಲಿಯಲ್ಲಿ ಇಂಡೇನ್ ಗ್ಯಾಸ್‌ನ ವಾಣಿಜ್ಯೋದ್ದೇಶದ ೧೯ ಕೆ.ಜಿ ಸಿಲಿಂಡರ್ ದರದಲ್ಲಿ ೧೯೮ ರೂ. ಕಡಿತವಾಗಿದೆ. ಕೋಲ್ಕತಾದಲ್ಲಿ ೧೮೨ ರೂ, ಮುಂಬಯಿನಲ್ಲಿ ೧೯೦ ರೂ, ಚೆನ್ನೈನಲ್ಲಿ ೧೮೭ ರೂ. ಇಳಿಕೆಯಾಗಿದೆ. ಇದರ ಪರಿಣಾಮ ದಿಲ್ಲಿಯಲ್ಲೀಗ ೧೯ ಕೆಜಿ ಎಲ್ಪಿಜಿ ಸಿಲಿಂಡರ್ ದರ ೨,೦೨೧ ರೂ.ಗೆ ತಗ್ಗಿದೆ. ಈ ಹಿಂದೆ ೨,೨೧೯ ರೂ. ಇತ್ತು.
ಇಂಡಿಯನ್ ಆಯಿಲ್ ಕಂಪನಿ ಕೂಡ ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಸಿಲಿಂಡರ್ ದರವನ್ನು ಕಡಿತಗೊಳಿಸಿದೆ ಎಂದು ವರದಿಯಾಗಿದೆ.
ಕಳೆದ ಜೂನ್‌ನಲ್ಲಿ ವಾಣಿಜ್ಯೋದ್ದೇಶದ ಸಿಲಿಂಡರ್ ದರದಲ್ಲಿ ೧೩೫ ರೂ. ಇಳಿಕೆಯಾಗಿದೆ. ಆದರೆ ಮೇ ೭ ಮತ್ತು ಮೇ ೧೯ರಂದು ದರ ಏರಿಕೆಯಾಗಿತ್ತು.
೧೪.೨ ಕೆ.ಜಿ ಸಿಲಿಂಡರ್ ದರ ಇಂತಿದೆ.
- ದಿಲ್ಲಿ: ೧,೦೦೩ ರೂ.
- ಮುಂಬಯಿ: ೧,೦೦೩ ರೂ.
- ಕೋಲ್ಕತಾ: ೧,೦೨೯ ರೂ.
- ಚೆನ್ನೈ: ೧,೦೧೯ ರೂ.
- ಲಖನೌ: ೧,೦೪೧ ರೂ.
- ಜೈಪುರ: ೧,೦೦೭ ರೂ.
- ಪಟನಾ: ೧,೦೯೩ ರೂ.
- ಬೆಂಗಳೂರು: ೧,೦೬೨ ರೂ.