Site icon Vistara News

L&T Mutual Fund : ಮಾರುಕಟ್ಟೆಯಿಂದ ಎಲ್&ಟಿ ಮ್ಯೂಚುವಲ್ ಫಂಡ್‌ ನಿರ್ಗಮನ, ಎಚ್‌ಎಸ್‌ಬಿಸಿ ಫಂಡ್‌ ಜತೆ ವಿಲೀನ

Mutual fund

#image_title

ಮುಂಬಯಿ: ಎಲ್&ಟಿ ಮ್ಯೂಚುವಲ್‌ ಫಂಡ್‌ ಮಾರುಕಟ್ಟೆಯಿಂದ (L&T Mutual Fund) ನಿರ್ಗಮಿಸಿದೆ. ಕ್ಯಾಪಿಟಲ್‌ ಮಾರ್ಕೆಟ್‌ ನಿಯಂತ್ರಕ ಸೆಬಿ ಈ ವಿಷಯವನ್ನು ಸೋಮವಾರ ತಿಳಿಸಿದೆ.

ಎಲ್&ಟಿ ಮ್ಯೂಚುವಲ್‌ ಫಂಡ್‌ ಟ್ರಸ್ಟಿ ಲಿಮಿಟೆಡ್‌ ಸೆಬಿಗೆ ತನ್ನ ನೋಂದಣಿಯನ್ನು ಸರೆಂಡರ್‌ ಮಾಡುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಎಲ್&ಟಿ ಮ್ಯೂಚುವಲ್‌ ಫಂಡ್‌ ಅನ್ನು ಎಚ್‌ಎಸ್‌ಬಿಸಿ ಮ್ಯೂಚುವಲ್‌ ಫಂಡ್‌ ಜತೆಗೆ ವಿಲೀನಗೊಳಿಸಲು ಸೆಬಿ ಅನುಮೋದನೆ ನೀಡಲಿದೆ. ಈ ಹಿನ್ನೆಲೆಯಲ್ಲಿ ಸೆಬಿಯು ಎಲ್&ಟಿ ಮ್ಯೂಚುವಲ್‌ ಫಂಡ್‌ನ ಅರ್ಜಿಯನ್ನು ಸ್ವೀಕರಿಸಿದೆ. 2023ರ ಏಪ್ರಿಲ್‌ 6ರಿಂದ ಇದು ಅನ್ವಯವಾಗಲಿದೆ. ಹೀಗಿದ್ದರೂ ಎಲ್&ಟಿ ದಂಡ ಸೇರಿದಂತೆ ತನ್ನ ಎಲ್ಲ ಉತ್ತರದಾಯಿತ್ವಗಳಿಗೆ ಬದ್ಧವಾಗಿರಬೇಕು (liabilities) ಎಂದು ತಿಳಿಸಿದೆ.

ಬಜಾಜ್‌ ಫಿನ್‌ ಸರ್ವನಿಂದ 7 ಯೋಜನೆ:

ಬಜಾಜ್‌ ಫಿನ್‌ಸರ್ವ್‌ ಮ್ಯೂಚಯವಲ್‌ ಫಂಡ್‌ 7 ಹೊಸ ಈಕ್ವಿಟಿ, ಡೆಟ್‌, ಹೈಬ್ರಿಡ್ ಮ್ಯೂಚುವಲ್‌ ಫಂಡ್‌ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಸೆಬಿಗೆ ಡ್ರಾಫ್ಟ್‌ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದೆ. ಸೆಬಿಯ ಅನುಮೋದನೆ ಲಭಿಸಿದ ಬಳಿಕ ಬಜಾಜ್‌ ಫಿನ್‌ ಸರ್ವ್‌ ಈ ಮ್ಯೂಚುವಲ್‌ ಫಂಡ್‌ಗಳನ್ನು ಬಿಡುಗಡೆಗೊಳಿಸಲಿದೆ.

2022ರಲ್ಲಿ ಒಟ್ಟಾರೆಯಾಗಿ 179 ಓಪನ್‌ ಎಂಡ್‌ ಫಂಡ್‌ಗಳು ಮತ್ತು 49 ಕ್ಲೋಸ್ಡ್‌ ಎಂಡ್‌ ಫಂಡ್‌ಗಳು ಬಿಡುಗಡೆಯಾಗಿವೆ. ಈ ಫಂಡ್‌ಗಳು ಒಟ್ಟಾರೆಯಾಗಿ 62,187 ಕೋಟಿ ರೂ. ಗಳಿಸಿವೆ.

Exit mobile version