ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ( UIDAI) ಎಂಆಧಾರ್ ಆ್ಯಪ್, ಬಳಕೆದಾರರಿಗೆ ತಮ್ಮ ಕುಟುಂಬದ ಸದಸ್ಯರ ಪ್ರೊಫೈಲ್‌ಗಳನ್ನು ಲಿಂಕ್ ಮಾಡಲು ಅವಕಾಶ ಕಲ್ಪಿಸುತ್ತದೆ.
ಎಂಆಧಾರ್ ಮೊಬೈಲ್ ಆ್ಯಪ್ ಅನ್ನು ಯುಐಡಿಎಐ (Unique Identification Authority of India) ಅಭಿವೃದ್ಧಿಪಡಿಸಿದೆ. ಇದು ಆಧಾರ್ ಕಾರ್ಡ್‌ದಾರರಿಗೆ ಡಿಜಿಟಲ್ ಆಧಾರ್ ಕಾರ್ಡ್ ಅನ್ನು ಹೊಂದಲು ಸಹಕಾರಿಯಾಗುತ್ತದೆ.
ಈ ಎಂಆಧಾರ್ ಆ್ಯಪ್ ಬಳಸಿ ನೀವು ನಿಮ್ಮ ಕುಟುಂಬದ ಸದಸ್ಯರ ಪ್ರೊಫೈಲ್‌ಗಳನ್ನೂ ಸೇರಿಸಿಕೊಳ್ಳಬಹುದು. ಆಧಾರ್ ಮತ್ತು ಮೊಬೈಲ್ ಫೋನ್ ಸಂಖ್ಯೆ ಲಿಂಕ್ ಆಗಿದ್ದವರು ಮಾತ್ರ ಎಂಆಧಾರ್ ಆ್ಯಪ್ ಮೂಲಕ ಪ್ರೊಫೈಲ್ ಸೃಷ್ಟಿಸಬಹುದು. ನಿಮ್ಮ ಎಂಆಧಾರ್ ಆ್ಯಪ್ ಮೂಲಕ ಐದು ಆಧಾರ್ ಪ್ರೊಫೈಲ್‌ಗಳನ್ನು ಸೇರಿಸಬಹುದು. ಅದರ ಹಂತಗಳು ಹೀಗಿದೆ-
೧. ಎಂಆಧಾರ್ ಆ್ಯಪ್ ಅನ್ನು ತೆರೆಯಿರಿ.
೨. ಮೈನ್ ಡ್ಯಾಶ್‌ಬೋರ್ಡ್‌ನಲ್ಲಿ ರಿಜಿಸ್ಟರ್ ಆಧಾರ್ ಟ್ಯಾಬ್ ಆಯ್ಕೆ ಮಾಡಿ.
೩. ನಾಲ್ಕು ಅಂಕಿಗಳ ಪಾಸ್ ವರ್ಡ್ ಪಿನ್ ಸೃಷ್ಟಿಸಿ.
೪. ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಪೂರೈಸಿ
೫. ಒಟಿಪಿ ನಮೂದಿಸಿ, ಸಬ್‌ಮಿಟ್ ಕ್ಲಿಕ್ಕಿಸಿ.
೬. ಪ್ರೊಫೈಲ್ ರಿಜಿಸ್ಟರ್ ಆಗಿರುವುದನ್ನು ಖಾತರಿಪಡಿಸಿಕೊಳ್ಳಿ.
೭. ನೋಂದಾಯಿತ ಟ್ಯಾಬ್ ನೋಂದಾಯಿತ ಹೆಸರನ್ನು ಡಿಸ್‌ಪ್ಲೇ ಮಾಡುತ್ತದೆ.
೮. ಬಾಟಮ್ ಮೆನುವಿನಲ್ಲಿ ಮೈ ಆಧಾರ್ ಆಯ್ಕೆ ಮಾಡಿಕೊಳ್ಳಿ.
೯. ನಾಲ್ಕು ಅಂಕಿಗಳ ಪಿನ್/ಪಾಸ್ ವರ್ಡ್ ಬಳಸಿ.
೧೦. ಮೈ ಆಧಾರ್ ಡ್ಯಾಶ್‌ಬೋರ್ಡ್ ಡಿಸ್‌ಪ್ಲೇ ಆಗುತ್ತದೆ.
ಕುಟುಂಬದ ಸದಸ್ಯರನ್ನು ಸೇರಿಸುವುದು ಹೇಗೆ?
೧. ಎಂ ಆಧಾರ್ ಆ್ಯಪ್ ಅನ್ನು ತೆರೆಯಿರಿ.
೨. ಆಡ್ ಪ್ರೊಫೈಲ್ ತೆರೆಯಿರಿ.
೩. ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ.
೪. ಬಳಕೆದಾರ ತನ್ನ ಡಿವೈಸ್‌ನಲ್ಲಿ ಮೂರು ಪ್ರೊಫೈಲ್‌ಗಳನ್ನು ಮಾತ್ರ ಸೇರಿಸಬಹುದು.