Site icon Vistara News

Money Guide: ಪಿಪಿಎಫ್‌, ಎನ್‌ಎಸ್‌ಸಿ, ಎಸ್‌ಸಿಎಸ್‌ಎಸ್‌ ಖಾತೆ ಸ್ಥಗಿತವಾಗದಂತೆ ನೋಡಿಕೊಳ್ಳಿ

Cash

ಸಣ್ಣ ಉಳಿತಾಯ ಯೋಜನೆಗಳಾದ ಹಿರಿಯ ನಾಗರಿಕರ ಉಳಿತಾಯ ಯೋಜನೆ ( Senior Citizens savings scheme -SCSS), ಸಾರ್ವಜನಿಕ ಭವಿಷ್ಯ ನಿಧಿ (PPF), ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌ (NSC) ಮತ್ತು ಇತರ ಅಂಚೆ ಇಲಾಖೆ ಯೋಜನೆಗಳಲ್ಲಿ ನೀವು ಹೂಡಿಕೆ (Money Guide) ಮಾಡಿದ್ದರೆ, 2023ರ ಸೆಪ್ಟೆಂಬರ್‌ 30ರ ಒಳಗೆ ಆಧಾರ್‌ ಲಿಂಕ್‌ ಮಾಡಿರಬೇಕು. ಆದ್ದರಿಂದ ಸಂಬಂಧಿಸಿದ ಅಂಚೆ ಕಚೇರಿ, ಬ್ಯಾಂಕ್‌ ಶಾಖೆಗೆ ತೆರಳಿ ಇದನ್ನು ಪೂರ್ಣಗೊಳಿಸಿ. ಒಂದು ವೇಳೆ ಸೆಪ್ಟೆಂಬರ್‌ 30ರೊಳಗೆ ಆಧಾರ್‌ ಲಿಂಕ್‌ ಮಾಡದಿದ್ದರೆ ಬಳಿಕ ನಿಮ್ಮ ಹೂಡಿಕೆ ನಿಷ್ಕ್ರಿಯವಾಗುತ್ತದೆ. ಹಾಗೂ ಇವುಗಳಲ್ಲಿ ನಿಮಗೆ ಭವಿಷ್ಯದ ಬಡ್ಡಿ ಆದಾಯ ಸಿಗದು.

ಹಣಕಾಸು ಸಚಿವಾಲಯವು 2023ರ ಮಾರ್ಚ್‌ 31ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಆಧಾರ್‌ ಮತ್ತು ಪ್ಯಾನ್‌ ಅನ್ನು ಪಿಪಿಎಫ್‌, ಎನ್‌ಎಸ್‌ಸಿ ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಲಿಂಕ್‌ ಮಾಡುವುದನ್ನು ಕಡ್ಡಾಯಗೊಳಿಸಿದೆ. ಆರು ತಿಂಗಳಿನ ಅವಧಿ 2023ರ ಸೆಪ್ಟೆಂಬರ್‌ 30ಕ್ಕೆ ಅಂತ್ಯವಾಗುತ್ತದೆ. ಆಧಾರ್-ಪ್ಯಾನ್‌ ಅನ್ನು ಅಂಚೆ ಕಚೇರಿ ಅಕೌಂಟ್‌ಗೆ ಲಿಂಕ್‌ ಮಾಡದಿದ್ದರೆ ಬಡ್ಡಿ ಸಂದಾಯವಾಗದೆ ಇರಬಹುದು. ಪಿಪಿಎಫಗ ಅಥವಾ ಸುಕನ್ಯಾ ಸಮೃದ್ಧಿ ಖಾತೆಗೆ ಠೇವಣಿ ಜಮೆ ಮಾಡಲು ಮಿತಿ ಉಂಟಾಗಬಹುದು. ಮೆಚ್ಯೂರಿಟಿ ಮೊತ್ತವು ಹೂಡಿಕೆದಾರರ ಖಾತೆಗೆ ಜಮೆ ಆಗದೆ ಇರಬಹುದು.

ಪ್ಯಾನ್‌ (PAN): ಅಂಚೆ ಇಲಾಖೆಯಲ್ಲಿ ಖಾತೆ ತೆರೆಯುವಾಗ ಪ್ಯಾನ್‌ ನೀಡದಿದ್ದರೆ ಅಂಥವರು ವಿಳಂಬಿಸಲದೆ ಸಲ್ಲಿಸುವುದು ಸೂಕ್ತ. ಆದರೆ ಖಾತೆಯಲ್ಲಿ ಬ್ಯಾಲೆನ್ಸ್‌ 50,000 ರೂ.ಗಿಂತ ಹೆಚ್ಚು ಇದ್ದರೆ ಅಥವಾ ವರ್ಷಕ್ಕೆ 1 ಲಕ್ಷ ರೂ. ಮೀರಿದರೆ ಪ್ಯಾನ್‌ ಅವಶ್ಯಕ. ತಿಂಗಳಿಗೆ 10 ಸಾವಿರ ರೂ.ಗಿಂತ ಹೆಚ್ಚು ವಿತ್‌ ಡ್ರಾವಲ್ಸ್‌ ಇದ್ದರೆ ಪ್ಯಾನ್‌ ಅವಶ್ಯಕ.

ಆಧಾರ್‌ ಸೇವೆ ಒದಗಿಸುವ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (Unique Identification authority of India-UIDAI) ತನ್ನ IVRS (Interactive Voice Response system) ಅಥವಾ ಟೋಲ್-ಫ್ರೀ ನಂಬರ್‌ ಮೂಲಕ ಹಲವಾರು ಹೊಸ ಸೇವೆಗಳನ್ನು ಜನತೆಗೆ ನೀಡಿದೆ. ಯುಐಡಿಎಐನ ಟೋಲ್-ಫ್ರಿ ಸಂಖ್ಯೆ 1947 ಆಗಿದೆ.

ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು 2016ರಲ್ಲಿ ಇದನ್ನು ಪರಿಚಯಿಸಿತ್ತು. ಇದು 24/7 ಲಭ್ಯವಿರುವ ಟೋಲ್-ಫ್ರಿ ನಂಬರ್‌ ಆಗಿದೆ. ಈ ವರ್ಷ ಯುಐಡಿಎಐ ಈ ಟೋಲ್‌ ಫ್ರೀ ಸಂಖ್ಯೆಯಲ್ಲಿ ಹಲವು ಹೊಸ ಸೇವೆಗಳನ್ನು ಆರಂಭಿಸಿದೆ. ವಿವರ ಇಲ್ಲಿದೆ.

ಹೊಸ ಸೇವೆಗಳ ವಿವರ: ನೀವು 1947 ಟೋಲ್‌ ಫ್ರೀ ನಂಬರ್‌ಗೆ ನಿಮ್ಮ ಮೊಬೈಲ್‌ನಿಂದ ಕರೆ ಮಾಡುವ ಮೂಲಕ ಆಧಾರ್‌ ಎನ್‌ರೋಲ್‌ಮೆಂಟ್ ಅಪ್‌ ಡೇಟ್‌ ಮಾಹಿತಿ ಪಡೆಯಬಹುದು. ನಿಮ್ಮ ಆಧಾರ್‌ PVC Card ಸ್ಟೇಟಸ್‌ ತಿಳಿಯಬಹುದು. ಆಧಾರ್‌ ಸೇವೆ ಕುರಿತ ದೂರಿನ ಸ್ಟೇಟಸ್‌ ತಿಳಿದುಕೊಳ್ಳಬಹುದು. ಆಧಾರ್‌ ಎನ್‌ರೋಲ್‌ಮೆಂಟ್‌ ಸೆಂಟರ್‌ ಅನ್ನು ಪತ್ತೆಹಚ್ಚಬಹುದು. ಎಸ್‌ ಎಂಎಸ್‌ ಮೂಲಕ ಸೂಕ್ತ ಮಾಹಿತಿ ಸಿಗುತ್ತದೆ.

ಯುಐಡಿಎಐ ಕಳೆದ 2022ರ ನವೆಂಬರ್‌ನಲ್ಲಿ ಚಾಟ್‌ ಬೋಟ್‌ ಆಧಾರ್‌ ಮಿತ್ರ ಸೇವೆಯನ್ನು ಆರಂಭಿಸಿತ್ತು. ಇದು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮತ್ತು ಮೆಶೀನ್‌ ಲರ್ನಿಂಗ್‌ ತಂತ್ರಜ್ಞಾನ ಆಧರಿತ ಸೇವೆಯಾಗಿದೆ. ಆಧಾರ್‌ ಕಾರ್ಡ್‌ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸುತ್ತದೆ.

Exit mobile version