Money Guide: ಪಿಪಿಎಫ್‌, ಎನ್‌ಎಸ್‌ಸಿ, ಎಸ್‌ಸಿಎಸ್‌ಎಸ್‌ ಖಾತೆ ಸ್ಥಗಿತವಾಗದಂತೆ ನೋಡಿಕೊಳ್ಳಿ Vistara News

ಮನಿ ಗೈಡ್

Money Guide: ಪಿಪಿಎಫ್‌, ಎನ್‌ಎಸ್‌ಸಿ, ಎಸ್‌ಸಿಎಸ್‌ಎಸ್‌ ಖಾತೆ ಸ್ಥಗಿತವಾಗದಂತೆ ನೋಡಿಕೊಳ್ಳಿ

Money Guide ಸಾರ್ವಜನಿಕ ಭವಿಷ್ಯನಿಧಿ ಅಥವಾ ಪಿಪಿಎಫ್‌ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿದ್ದರೆ, ಆಧಾರ್‌ ಲಿಂಕ್‌ ಆಗಿರುವಂತೆ ನೋಡಿಕೊಳ್ಳಿ. ವಿವರ ಇಲ್ಲಿದೆ.

VISTARANEWS.COM


on

Cash
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಣ್ಣ ಉಳಿತಾಯ ಯೋಜನೆಗಳಾದ ಹಿರಿಯ ನಾಗರಿಕರ ಉಳಿತಾಯ ಯೋಜನೆ ( Senior Citizens savings scheme -SCSS), ಸಾರ್ವಜನಿಕ ಭವಿಷ್ಯ ನಿಧಿ (PPF), ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌ (NSC) ಮತ್ತು ಇತರ ಅಂಚೆ ಇಲಾಖೆ ಯೋಜನೆಗಳಲ್ಲಿ ನೀವು ಹೂಡಿಕೆ (Money Guide) ಮಾಡಿದ್ದರೆ, 2023ರ ಸೆಪ್ಟೆಂಬರ್‌ 30ರ ಒಳಗೆ ಆಧಾರ್‌ ಲಿಂಕ್‌ ಮಾಡಿರಬೇಕು. ಆದ್ದರಿಂದ ಸಂಬಂಧಿಸಿದ ಅಂಚೆ ಕಚೇರಿ, ಬ್ಯಾಂಕ್‌ ಶಾಖೆಗೆ ತೆರಳಿ ಇದನ್ನು ಪೂರ್ಣಗೊಳಿಸಿ. ಒಂದು ವೇಳೆ ಸೆಪ್ಟೆಂಬರ್‌ 30ರೊಳಗೆ ಆಧಾರ್‌ ಲಿಂಕ್‌ ಮಾಡದಿದ್ದರೆ ಬಳಿಕ ನಿಮ್ಮ ಹೂಡಿಕೆ ನಿಷ್ಕ್ರಿಯವಾಗುತ್ತದೆ. ಹಾಗೂ ಇವುಗಳಲ್ಲಿ ನಿಮಗೆ ಭವಿಷ್ಯದ ಬಡ್ಡಿ ಆದಾಯ ಸಿಗದು.

ಹಣಕಾಸು ಸಚಿವಾಲಯವು 2023ರ ಮಾರ್ಚ್‌ 31ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಆಧಾರ್‌ ಮತ್ತು ಪ್ಯಾನ್‌ ಅನ್ನು ಪಿಪಿಎಫ್‌, ಎನ್‌ಎಸ್‌ಸಿ ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಲಿಂಕ್‌ ಮಾಡುವುದನ್ನು ಕಡ್ಡಾಯಗೊಳಿಸಿದೆ. ಆರು ತಿಂಗಳಿನ ಅವಧಿ 2023ರ ಸೆಪ್ಟೆಂಬರ್‌ 30ಕ್ಕೆ ಅಂತ್ಯವಾಗುತ್ತದೆ. ಆಧಾರ್-ಪ್ಯಾನ್‌ ಅನ್ನು ಅಂಚೆ ಕಚೇರಿ ಅಕೌಂಟ್‌ಗೆ ಲಿಂಕ್‌ ಮಾಡದಿದ್ದರೆ ಬಡ್ಡಿ ಸಂದಾಯವಾಗದೆ ಇರಬಹುದು. ಪಿಪಿಎಫಗ ಅಥವಾ ಸುಕನ್ಯಾ ಸಮೃದ್ಧಿ ಖಾತೆಗೆ ಠೇವಣಿ ಜಮೆ ಮಾಡಲು ಮಿತಿ ಉಂಟಾಗಬಹುದು. ಮೆಚ್ಯೂರಿಟಿ ಮೊತ್ತವು ಹೂಡಿಕೆದಾರರ ಖಾತೆಗೆ ಜಮೆ ಆಗದೆ ಇರಬಹುದು.

ಪ್ಯಾನ್‌ (PAN): ಅಂಚೆ ಇಲಾಖೆಯಲ್ಲಿ ಖಾತೆ ತೆರೆಯುವಾಗ ಪ್ಯಾನ್‌ ನೀಡದಿದ್ದರೆ ಅಂಥವರು ವಿಳಂಬಿಸಲದೆ ಸಲ್ಲಿಸುವುದು ಸೂಕ್ತ. ಆದರೆ ಖಾತೆಯಲ್ಲಿ ಬ್ಯಾಲೆನ್ಸ್‌ 50,000 ರೂ.ಗಿಂತ ಹೆಚ್ಚು ಇದ್ದರೆ ಅಥವಾ ವರ್ಷಕ್ಕೆ 1 ಲಕ್ಷ ರೂ. ಮೀರಿದರೆ ಪ್ಯಾನ್‌ ಅವಶ್ಯಕ. ತಿಂಗಳಿಗೆ 10 ಸಾವಿರ ರೂ.ಗಿಂತ ಹೆಚ್ಚು ವಿತ್‌ ಡ್ರಾವಲ್ಸ್‌ ಇದ್ದರೆ ಪ್ಯಾನ್‌ ಅವಶ್ಯಕ.

ಆಧಾರ್‌ ಸೇವೆ ಒದಗಿಸುವ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (Unique Identification authority of India-UIDAI) ತನ್ನ IVRS (Interactive Voice Response system) ಅಥವಾ ಟೋಲ್-ಫ್ರೀ ನಂಬರ್‌ ಮೂಲಕ ಹಲವಾರು ಹೊಸ ಸೇವೆಗಳನ್ನು ಜನತೆಗೆ ನೀಡಿದೆ. ಯುಐಡಿಎಐನ ಟೋಲ್-ಫ್ರಿ ಸಂಖ್ಯೆ 1947 ಆಗಿದೆ.

ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು 2016ರಲ್ಲಿ ಇದನ್ನು ಪರಿಚಯಿಸಿತ್ತು. ಇದು 24/7 ಲಭ್ಯವಿರುವ ಟೋಲ್-ಫ್ರಿ ನಂಬರ್‌ ಆಗಿದೆ. ಈ ವರ್ಷ ಯುಐಡಿಎಐ ಈ ಟೋಲ್‌ ಫ್ರೀ ಸಂಖ್ಯೆಯಲ್ಲಿ ಹಲವು ಹೊಸ ಸೇವೆಗಳನ್ನು ಆರಂಭಿಸಿದೆ. ವಿವರ ಇಲ್ಲಿದೆ.

ಹೊಸ ಸೇವೆಗಳ ವಿವರ: ನೀವು 1947 ಟೋಲ್‌ ಫ್ರೀ ನಂಬರ್‌ಗೆ ನಿಮ್ಮ ಮೊಬೈಲ್‌ನಿಂದ ಕರೆ ಮಾಡುವ ಮೂಲಕ ಆಧಾರ್‌ ಎನ್‌ರೋಲ್‌ಮೆಂಟ್ ಅಪ್‌ ಡೇಟ್‌ ಮಾಹಿತಿ ಪಡೆಯಬಹುದು. ನಿಮ್ಮ ಆಧಾರ್‌ PVC Card ಸ್ಟೇಟಸ್‌ ತಿಳಿಯಬಹುದು. ಆಧಾರ್‌ ಸೇವೆ ಕುರಿತ ದೂರಿನ ಸ್ಟೇಟಸ್‌ ತಿಳಿದುಕೊಳ್ಳಬಹುದು. ಆಧಾರ್‌ ಎನ್‌ರೋಲ್‌ಮೆಂಟ್‌ ಸೆಂಟರ್‌ ಅನ್ನು ಪತ್ತೆಹಚ್ಚಬಹುದು. ಎಸ್‌ ಎಂಎಸ್‌ ಮೂಲಕ ಸೂಕ್ತ ಮಾಹಿತಿ ಸಿಗುತ್ತದೆ.

ಯುಐಡಿಎಐ ಕಳೆದ 2022ರ ನವೆಂಬರ್‌ನಲ್ಲಿ ಚಾಟ್‌ ಬೋಟ್‌ ಆಧಾರ್‌ ಮಿತ್ರ ಸೇವೆಯನ್ನು ಆರಂಭಿಸಿತ್ತು. ಇದು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮತ್ತು ಮೆಶೀನ್‌ ಲರ್ನಿಂಗ್‌ ತಂತ್ರಜ್ಞಾನ ಆಧರಿತ ಸೇವೆಯಾಗಿದೆ. ಆಧಾರ್‌ ಕಾರ್ಡ್‌ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Money Guide : ನಿವೃತ್ತಿ ಬಳಿಕ ಹಣದ ಚಿಂತೆ; ಈ 10 ಟಿಪ್ಸ್​ ಪಾಲಿಸಿದರೆ ನೋ ಟೆನ್ಷನ್​!

Money Guide: ಹೂಡಿಕೆ ಮತ್ತು ಉಳಿತಾಯ ಯೋಜನೆಗಳನ್ನು ಎಷ್ಟು ಬೇಗ ಆರಂಭ ಮಾಡುತ್ತಿರೋ ಅಷ್ಟರ ಮಟ್ಟಿಗೆ ನಿವೃತ್ತಿ ಬಳಿಕದ ಹಣಕಾಸಿನ ಚಿಂತೆ ಕಡಿಮೆ.

VISTARANEWS.COM


on

Money Guide
Koo

ನಿವೃತ್ತಿ ಬಳಿಕ ಹಣದ ಸಮಸ್ಯೆ ಬಂದರೆ ಏನು ಮಾಡುವುದು ಎಂಬ ಚಿಂತೆ ಉದ್ಯೋಗಸ್ಥರಿಗೆ ಇದ್ದದ್ದೆ. ಯಾಕೆಂದರೆ ಸಂಬಳ ಬರುವ ಉದ್ಯೋಗವೊಂದು ಇಲ್ಲದಾದಾಗ ಎಲ್ಲವೂ ತಾಪತ್ರಯ ಎನಿಸಿಬಿಡುತ್ತದೆ. ದೈನಂದಿನ ಖರ್ಚಿಗೆ ಸೇರಿದಂತೆ ಎಲ್ಲ ಹಣಕಾಸಿನ ಅಗತ್ಯಗಳನ್ನು ಪೂರೈಸುವುದು ಹೇಗೆ ಎಂಬ ಆತಂಕ ಇರುತ್ತದೆ. ಆದರೆ, ಬಹುತೇಕ ಮಂದಿ ಚಿಂತೆ ಮಾತ್ರ ಮಾಡುತ್ತಾರೆಯೇ ಹೊರತು ಅದಕ್ಕೊಂದು ಯೋಜನೆ ಹಾಕಿಕೊಳ್ಳುವುದಿಲ್ಲ. ಆದರೆ, ದುಡಿಮೆಯ ಅವಧಿಯಲ್ಲಿ ದುಡ್ಡು ಉಳಿಸಲು (Money Guide) ಮನಸ್ಸು ಮಾಡಿದರೆ ಈ ಚಿಂತೆ ಎಂದಿಗೂ ಇರುವುದಿಲ್ಲ.

ದುಡಿದ ದುಡ್ಡಿನಲ್ಲಿ ಉಳಿತಾಯ (Money Saving) ಮಾಡುವುದೂ ಉತ್ತಮ ಕಲೆ. ದುಡಿಮೆಯ ದಿನಗಳಲ್ಲಿ ಒಂದಿಷ್ಟು ಮೊತ್ತವನ್ನು ಉಳಿತಾಯದ ಮಾಡಿದರೆ, ನಿವೃತ್ತಿಯ ದಿನಗಳನ್ನು (Retirement Life) ನೆಮ್ಮದಿಯಾಗಿ ಕಳೆಯಬಹುದು. ಇಲ್ಲದಿದ್ದರೆ, ದುಡಿಯುವ ಕಸುವು ಇಲ್ಲದ ಸಮಯದಲ್ಲಿ ಹಣಕ್ಕಾಗಿ ಪರದಾಡಬೇಕಾಗುತ್ತದೆ. ಹಾಗಾಗಿ, ನಿಮ್ಮ ವೃತ್ತಿಯ ಆರಂಭದ ದಿನಗಳಿಂದಲೇ ನಿವೃತ್ತಿಯ ಬಗ್ಗೆ ಪ್ಲ್ಯಾನ್ ಮಾಡಿ(Plan for Retirement life), ಹಣವನ್ನು ಉಳಿತಾಯ ಮಾಡಬೇಕು. ನಿವೃತ್ತಿಯ ಅಂಚಿಗೆ ಬರುವಷ್ಟರಲ್ಲಿ ದೊಡ್ಡ ಮೊತ್ತದ ಉಳಿತಾಯ ನಿಮಗಾಗಿ ಕಾಯುತ್ತಿರುತ್ತದೆ. ಹಾಗಾಗಿ, ಈಗನಿಂದಲೇ ನೀವು ಉಳಿತಾಯ ಮತ್ತು ನಿವೃತ್ತಿಯ ದಿನಗಳಿಗಾಗಿ ಹೂಡಿಕೆಯ ಪ್ಲ್ಯಾನ್ ಮಾಡುವುದು ಶುರು ಮಾಡಿ(Money Guide).

ನಿವೃತ್ತಿಗಾಗಿ ಹಣ ಉಳಿಸುವ ಮಾರ್ಗಗಳು….

1.ಉಳಿತಾಯ ಯೋಜನೆ ಬೇಗ ಆರಂಭಿಸಿ

ಉತ್ತಮ ನಿವೃತ್ತಿ ಜೀವನಕ್ಕಾಗಿ ವೃತ್ತಿ ಆರಂಭದ ದಿನಗಳಿಂದಲೇ ಉಳಿತಾಯವನ್ನು ಆರಂಭಿಸಬೇಕು. ಚಿಕ್ಕ ಮೊತ್ತದ ಸೇವಿಂಗ್ ಕೂಡ ನಿವೃತ್ತಿ ಹೊತ್ತಿಗೆ ಬಹುದೊಡ್ಡ ಮೊತ್ತವಾಗಿ ಬದಲಾಗಿರುತ್ತದೆ.

2.ಉಳಿತಾಯಕ್ಕೊಂದು ಗುರಿ ಇರಲಿ

ನಿಮ್ಮ ನಿರೀಕ್ಷಿತ ವೆಚ್ಚಗಳು ಮತ್ತು ಜೀವನಶೈಲಿಯ ಆಧಾರದ ಮೇಲೆ ನಿವೃತ್ತಿಗಾಗಿ ನಿಮಗೆ ಎಷ್ಟು ಹಣ ಬೇಕು ಎಂದು ನಿರ್ಧರಿಸಿ. ಹಣದುಬ್ಬರ ಮತ್ತು ಆರೋಗ್ಯ ವೆಚ್ಚಗಳಂತಹ ಅಂಶಗಳನ್ನು ಪರಿಗಣಿಸಿ ಸೇವಿಂಗ್ ಆರಂಭಿಸಿ. ಸ್ಪಷ್ಟವಾದ ನಿವೃತ್ತಿ ಗುರಿಯನ್ನು ಹಾಕಿಕೊಳ್ಳುವುದರಿಂದ ಹಣ ಉಳಿಕೆಯಲ್ಲಿ ಸ್ಪಷ್ಟತೆ ದೊರೆಯುತ್ತದೆ.

3. ನಿವೃತ್ತಿ ಬಳಿಕದ ಆಯವ್ಯಯ ಸಿದ್ದಪಡಿಸಿ

ನಿಮ್ಮ ಸದ್ಯದ ಆದಾಯ ಮತ್ತು ವೆಚ್ಚದ ಅನುಸಾರ ನಿಮ್ಮ ನಿವೃತ್ತಿಯ ಬಜೆಟ್ ತಯಾರಿಸಿ. ಅನವಶ್ಯವಾಗಿ ಎಲ್ಲೆಲ್ಲಿ ಹಣ ಪೋಲಾಗುತ್ತಿದೆ ಎಂದು ಗುರುತಿಸಿಕೊಳ್ಳಿ ಮತ್ತು ಅಂಥ ಹಣವನ್ನು ಉಳಿಕೆಯ ಪಟ್ಟಿಗೆ ಸೇರಿಸಿ. ಈ ಮೂಲಕ ರಿಟೈರ್ ಫಂಡ್ ಕ್ರೋಡೀಕರಿಸಬಹುದು.

4. ನಿವೃತ್ತಿಯ ನಂತದ ಖಾತೆ ತೆರೆಯಿರಿ

ಭಾರತದಲ್ಲಿ ನಾನಾ ಅಕೌಂಟ್‌ಗಳು ಚಾಲ್ತಿಯಲ್ಲಿವೆ. ಅವುಗಳ ಮೂಲಕ ರಿಟೈರ್ಮೆಂಟ್ ಪ್ಲ್ಯಾನ್ ಮಾಡಬಹುದು. ಇಪಿಎಫ್, ಪಿಪಿಎಫ್, ಎನ್‌ಪಿಎಸ್, ಎಫ್‌ಡಿ ಇತ್ಯಾದಿ ಖಾತೆಗಳ ಮೂಲಕ ಸೇವಿಂಗ್‌ ಹೆಚ್ಚಿಸುತ್ತಾ ಹೋದಂತೆ ನಿವೃತ್ತಿ ಸಮಯದಯಲ್ಲಿ ತುಂಬಾ ಸಹಕಾರಿಯಾಗುತ್ತದೆ.

5.ಹೂಡಿಕೆ ಪ್ರಮಾಣ ಹೆಚ್ಚಲಿ

ಷೇರುಗಳು, ನಿರ್ದಿಷ್ಟ ಆದಾಯ ತರುವ ಹೂಡಿಕೆಗಳು, ರಿಯಲ್ ಎಸ್ಟೇಟ್ ಸೇರಿದಂತೆ ಇನ್ನಿತರ ಹೂಡಿಕೆಗಳನ್ನು ಆಯ್ದುಕೊಳ್ಳಬಹುದು. ನೀವು ಯಾವುದೇ ರೀತಿಯ ಹೂಡಿಕೆಯ ಸಾಧನವನ್ನು ಆಯ್ಕೆ ಮಾಡಿಕೊಳ್ಳಿ. ಆದರೆ, ಅದಕ್ಕಿಂತ ಮುಂಚೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಮುಂದುವರಿಯರಿ.

6.ಅನವಶ್ಯಕ ವೆಚ್ಚ ಬೇಡ

ನಿಮ್ಮ ನಿವೃತ್ತಿಯ ದಿನಗಳು ಅತ್ಯುತ್ತಮವಾಗಿರಬೇಕು ಎಂದಾದರೆ, ಈಗಿನಿಂದಲೂ ಅನವಶ್ಯ ವೆಚ್ಚಗಳನ್ನು ದೂರ ಮಾಡಿ. ನಿಮ್ಮ ರಿಟೈರ್ಮೆಂಟ್‌ ಖಾತೆಗಳಿಗೆ ಆಟೋಮೆಟಿಕ್ ಆಗಿ ದುಡ್ಡು ಪೇ ಆಗುವ ಹಾಗೆ ಮಾಡಿ. ನಿಮ್ಮ ಸಂಬಳದಲ್ಲಿ ಇನ್‌ಕ್ರಿಮೆಂಟ್ ಆದಾಗಲೆಲ್ಲ. ಈ ರೀತಿಯ ಪರಿಹಾರವನ್ನು ಕಂಡುಕೊಳ್ಳಬಹುದು.

7.ಪರ್ಯಾಯ ಉಳಿತಾಯದ ಆಲೋಚನೆ ಇರಲಿ

ಮ್ಯೂಚವಲ್ ಫಂಡ್ಸ್, ಷೇರುಗಳು, ಬಾಂಡ್‌ಗಳಂಥ ಪರ್ಯಾಯ ಉಳಿತಾಯದ ಮಾರ್ಗಗಳನ್ನು ಹುಡುಕಿಕೊಳ್ಳಬಹುದು. ಕೇವಲ ಹಣವನ್ನು ಫಿಕ್ಸೆಡ್ ಡಿಪಾಸೆಟ್ ಮಾಡುವುದು ಮಾತ್ರವೇ ಉಳಿತಾಯದ ಮಾರ್ಗವಲ್ಲ. ಉಳಿತಾಯದ ಜತೆಗೆ ಹಣ ಹೆಚ್ಚಾಗುವ ಮಾರ್ಗಗಳಿವೆ. ಅವುಗಳನ್ನು ಶೋಧಿಸಬಹುದು. ಆದರೆ, ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.

ಈ ಸುದ್ದಿಯನ್ನೂ ಓದಿ : Money Guide: ನಿಶ್ಚಿತ ಠೇವಣಿಗೆ ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿದರ? ಇಲ್ಲಿದೆ ವಿವರ

8.ತೆರಿಗೆ ಕುರಿತ ಮಾಹಿತಿ ಇರಲಿ

ತೆರಿಗೆ ಕಾನೂನುಗಳು, ಹೂಡಿಕೆ ಆಯ್ಕೆಗಳು ಮತ್ತು ನಿವೃತ್ತಿ ಯೋಜನೆ ತಂತ್ರಗಳಲ್ಲಿನ ಬದಲಾವಣೆಗಳ ಬಗ್ಗೆ ನಿಮಗೆ ಅಪ್‌ಡೇಟೆಡ್ ಮಾಹಿತಿ ಇರುವುದು ಉತ್ತಮ. ತಿಳುವಳಿಕೆಯುಳ್ಳ ಹಣಕಾಸಿನ ನಿರ್ಧಾರಗಳನ್ನು ಮಾಡಲು ಈ ರೀತಿಯ ಅಪ್‌ಡೇಟೆಡ್ ಮಾಹಿತಿ ಇದ್ದರೆ ಬೆಸ್ಟ್ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.

9.ರಿಟೈರ್ಮೆಂಟ್ ಫಂಡ್ ವೆಚ್ಚ ಮಾಡಬೇಡಿ

ಯಾವುದೇ ಕಾರಣಕ್ಕೂ ನಿಮ್ಮ ನಿವೃತ್ತಿ ಉಳಿತಾಯವನ್ನು ಇತರ ವೆಚ್ಚಗಳಿಗಾಗಿ ಬಳಸಲು ಹೋಗಲೇಡಿ. ಉಳಿತಾಯದ ಹಣವನ್ನು ಬಳಸಲಾರಂಭಿಸಿದರೆ, ನಿವೃತ್ತಿಯ ಸಮಯದಲ್ಲಿ ಮತ್ತೆ ನೀವು ಹಣವಿಲ್ಲದೇ ಪರದಾಡಬೇಕಾಗುತ್ತದೆ. ಹಾಗಾಗಿ, ಎಂಥದ್ದೇ ಸಂದರ್ಭದಲ್ಲಿ ನಿವೃತ್ತಿಗಾಗಿ ತೆಗೆದಿಟ್ಟ ಅಥವಾ ಸೇವಿಂಗ್ ಮಾಡಿದ ಹಣವನ್ನು ಸದ್ಯದ ವೆಚ್ಚಕ್ಕೆ ಬಳಸಲು ಮುಂದಾಗಬೇಡಿ.

10.ತುರ್ತು ನಿಧಿ ಇರಲಿ

ಅನಿರೀಕ್ಷಿತ ವೆಚ್ಚಗಳಿಗಾಗಿ ತುರ್ತು ನಿಧಿಯನ್ನು ನಿರ್ವಹಣೆ ಮಾಡುವುದು ಉತ್ತಮ. ಯಾಕೆಂದರೆ, ತುರ್ತು ನಿಧಿ ನಿಮ್ಮ ಬಳಿ ಇದ್ದರೆ ನೀವು ನಿಮ್ಮ ಸೇವಿಂಗ್ಸ್‌ ಅನ್ನು ವೆಚ್ಚಗಳಿಗೆ ಬಳಸಲು ಮುಂದಾಗುವುದಿಲ್ಲ. ಇಲ್ಲದಿದ್ದರೆ, ಉಳಿತಾಯದ ಹಣವನ್ನೇ ನೀವು ತುರ್ತು ಅಗತ್ಯಗಳಿಗೆ ಬಳಸುತ್ತೀರಿ. ಆಗ ನಿಮ್ಮ ನಿವೃತ್ತಿಯ ಎಲ್ಲ ಪ್ಲ್ಯಾನ್ ಹಾಳಾಗುತ್ತದೆ.

Continue Reading

ಪ್ರಮುಖ ಸುದ್ದಿ

Money Guide: ಪಿಪಿಎಫ್‌, ಅಂಚೆ ಕಚೇರಿ; ಮಧ್ಯಮ ವರ್ಗದವರ ಹೂಡಿಕೆಗೆ ಇವು ಬೆಸ್ಟ್‌ ಪ್ಲಾನ್‌ಗಳು!

Money Guide: ಆಧುನಿಕ ಜಗತ್ತಿನಲ್ಲಿ ನಾವು ದುಡಿಯುವ ಜತೆಗೆ ದುಡ್ಡನ್ನೂ ದುಡಿಸಬೇಕು. ದುಡ್ಡನ್ನೂ ದುಡಿಸಬೇಕು ಎಂದರೆ ಹೂಡಿಕೆ ಮಾಡಬೇಕು. ಆದರೆ, ಹೆಚ್ಚು ಬಡ್ಡಿ ತಂದುಕೊಡುವ ಯೋಜನೆಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಬೇಕು. ಅಂತಹ ಯೋಜನೆಗಳ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

VISTARANEWS.COM


on

Best Investment Plans
Koo

ಬೆಂಗಳೂರು: ನಾವು ದುಡಿಯುವ ಜತೆಗೆ ದುಡ್ಡನ್ನೂ ದುಡಿಸಬೇಕು ಎಂಬುದು ಸರಿಯಾದ ನಿರ್ಧಾರ. ಆದರೆ, ಹೂಡಿಕೆಯ ಯೋಜನೆಗಳನ್ನು (Investment Plans) ಆಯ್ಕೆ ಮಾಡಿಕೊಳ್ಳುವಾಗ ಹೆಚ್ಚು ಬಡ್ಡಿ ತಂದುಕೊಡುವ, ಕಡಿಮೆ ಅವಧಿಯಲ್ಲಿಯೇ ನಮ್ಮ ಹೂಡಿಕೆಯ ದುಡ್ಡಿನ ಮೊತ್ತ ಹೆಚ್ಚಾಗುವ, ಸುದೀರ್ಘ ಅವಧಿಗೆ ಹೂಡಿಕೆ ಮಾಡಿದರೂ ಕೊನೆಯಲ್ಲಿ ಹೆಚ್ಚು ಹಣ ಪಡೆದ ಖುಷಿ ನಮ್ಮದಾಗಬೇಕು. ಅದಕ್ಕಾಗಿ ಹೆಚ್ಚು ಬಡ್ಡಿದರ ಇರುವ ಹೂಡಿಕೆ ಯೋಜನೆಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಹೂಡಿಕೆ ಮಾಡುವುದು ದೊಡ್ಡದಲ್ಲ, ಹೂಡಿಕೆ ಮಾಡುವಾಗ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಜಾಣ್ಮೆ. ಸಣ್ಣ ಹೂಡಿಕೆದಾರರಿಗಂತೂ ಈ ನಿಯಮ ಕಡ್ಡಾಯ. ಹೀಗೆ ಹೆಚ್ಚು ಬಡ್ಡಿದರ ಇರುವ ಹೂಡಿಕೆ ಯೋಜನೆಗಳ ಕುರಿತ ಸಂಕ್ಷಿಪ್ತ ವಿವರಣೆ ಇಂದಿನ ವಿಸ್ತಾರ (Money Guide) ಮನಿ ಗೈಡ್‌ನಲ್ಲಿದೆ. ‌

ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ (PPF)

ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ ಯೋಜನೆಯು ಕೇಂದ್ರ ಸರ್ಕಾರ ಬೆಂಬಲಿತ ಪ್ಲಾನ್‌ ಆಗಿದೆ. ಹಾಗಾಗಿ, ಸಣ್ಣ ಹೂಡಿಕೆದಾರರು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರಿ ಬೆಂಬಲಿತ ಪ್ಲಾನ್‌ ಆದ ಕಾರಣ ಇಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಅಲ್ಲ. ಪಿಪಿಎಫ್‌ ಖಾತೆ ತೆರೆಯುವವರಿಗೆ ವಾರ್ಷಿಕ ಶೇ.7.1ರಷ್ಟು ಬಡ್ಡಿ ದೊರೆಯಲಿದೆ. ಆದರೆ, ಈ ಯೋಜನೆಯು 15 ವರ್ಷ ಇರಲಿದೆ. ಮಗಳ ಮದುವೆ, ಮಕ್ಕಳ ಶಿಕ್ಷಣ ಸೇರಿ ಹಲವು ಮುಂದಾಲೋಚನೆ ಇರುವವರು 15 ವರ್ಷದ ಹೂಡಿಕೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಮ್ಯೂಚುವಲ್‌ ಫಂಡ್ಸ್‌

ಪಿಪಿಎಫ್‌ಗಿಂತ ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಬಡ್ಡಿ ಸಿಗುತ್ತದೆ. ಆದರೆ, ಇಲ್ಲಿ ಷೇರು ಮಾರುಕಟ್ಟೆಯ ನಿತ್ಯ ಹೂಡಿಕೆಗಿಂತ ಕಡಿಮೆ ಹಾಗೂ ಪಿಪಿಎಫ್‌ಗಿಂತ ಹೆಚ್ಚು ರಿಸ್ಕ್‌ ಇರುತ್ತದೆ. ಆದರೆ, ಮ್ಯೂಚುವಲ್‌ ಫಂಡ್ಸ್‌ ಹೂಡಿಕೆ ಪ್ಲಾನ್‌ಗಳನ್ನು ಒಂದು ವರ್ಷ, ಎರಡು ವರ್ಷ ಹಾಗೂ ಐದು ವರ್ಷದವರೆಗೆ ಆಯ್ಕೆ ಮಾಡಿಕೊಳ್ಳಬಹುದು. ಈಕ್ವಿಟಿಯಲ್ಲಿ ಹೂಡಿಕೆ ಮಾಡುವುದು ಒಳಿತು. ಅದರಲ್ಲೂ, ಅಪಾಯಕಾರಿ ಸನ್ನಿವೇಶದಲ್ಲಿ (ಷೇರು ಮಾರುಕಟ್ಟೆ ಕುಸಿತ, ಆರ್ಥಿಕ ದಿವಾಳಿ ಇತ್ಯಾದಿ) ನಿಮ್ಮ ಹೂಡಿಕೆಗಳನ್ನು ಮಾರಾಟ ಮಾಡುವ ಮೂಲಕ ಹೂಡಿಕೆಯ ಹಣವನ್ನು ಪಡೆಯಬಹುದು. ಎಸ್‌ಬಿಐ ಸೇರಿ ಯಾವುದೇ ಪರಿಚಿತ ಅಥವಾ ಹೆಚ್ಚು ಲಾಭ ತರುವಲ್ಲಿ ಹೂಡಿಕೆ ಮಾಡುವುದು ಜಾಣತನ ಎಂಬುದು ಹೂಡಿಕೆ ತಜ್ಞರ ಅಭಿಪ್ರಾಯವಾಗಿದೆ.

Mutual funds Good news for investors, SEBI proposes uniform expense ratio for mutual funds

ಇದನ್ನೂ ಓದಿ: Money Guide: ಎಫ್‌ಡಿಗಳಿಂದ ಹೆಚ್ಚಿನ ಆದಾಯ ಬೇಕೇ? ಲ್ಯಾಡರಿಂಗ್ ತಂತ್ರದಂತೆ ಹೂಡಿಕೆ ಮಾಡಿ ನೋಡಿ!

ಪೋಸ್ಟ್‌ ಆಫೀಸ್‌ ಹೂಡಿಕೆ ಯೋಜನೆಗಳು

ಪೋಸ್ಟ್‌ ಆಫೀಸ್‌ ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವುದರಿಂದ ಹೂಡಿಕೆಗೆ ಯಾವುದೇ ಅಪಾಯವಿಲ್ಲ. ಅದರಲ್ಲೂ, ಬದಲಾದ ಕಾಲಘಟ್ಟದಲ್ಲಿ ಪೋಸ್ಟ್‌ ಆಫೀಸ್‌ ಬ್ಯಾಂಕ್‌ಗಳು ಹೂಡಿಕೆಗೆ ಹೆಚ್ಚಿನ ಬಡ್ಡಿ ನೀಡುತ್ತವೆ. ಹಾಗಾದರೆ, ಪೋಸ್ಟ್‌ ಆಫೀಸ್‌ನಲ್ಲಿ ಹೂಡಿಕೆ ಮಾಡಬಹುದಾದ ಪ್ಲಾನ್‌ಗಳು ಯಾವವು? ಅವುಗಳ ಇಂಟರೆಸ್ಟ್‌ ರೇಟ್‌ ಎಷ್ಟಿದೆ ಎಂಬುದರ ಮಾಹಿತಿ ಹೀಗಿದೆ…

  1. ಪೋಸ್ಟ್‌ ಆಫೀಸ್‌ ರೆಕರಿಂಗ್‌ ಡೆಪಾಸಿಟ್‌ (RD) ಪ್ಲಾನ್‌ ಅನ್ವಯ ಹೂಡಿಕೆ ಮಾಡಿದರೆ ಅಕ್ಟೋಬರ್‌ 1ರಿಂದ ಶೇ.6.7ರಷ್ಟು ಬಡ್ಡಿ ನೀಡಲಾಗುತ್ತಿದೆ. ಮೂರರಿಂದ ಐದು ವರ್ಷ ಮಾಸಿಕ ಇಂತಿಷ್ಟು ಹಣ ಠೇವಣಿ ಮಾಡಿದರೆ ಬಡ್ಡಿಯ ಲಾಭ ಸಿಗಲಿದೆ.
  2. ನ್ಯಾಷನಲ್‌ ಸೇವಿಂಗ್ಸ್‌ ಟೈಮ್‌ ಡೆಪಾಸಿಟ್‌ ಅಕೌಂಟ್‌ (TD) ತೆರೆದರೆ ಒಳ್ಳೆಯ ಬಡ್ಡಿ ಸಿಗಲಿದೆ. ಒಂದು ವರ್ಷದ ಅವಧಿಯ ಹೂಡಿಕೆಗೆ ಶೇ.6.9, 2 ವರ್ಷಕ್ಕೆ ಶೇ.7 ಹಾಗೂ 5 ವರ್ಷಕ್ಕೆ ಶೇ.7.5ರಷ್ಟು ಬಡ್ಡಿ ದೊರೆಯಲಿದೆ.
  3. ಹೆಣ್ಣುಮಕ್ಕಳ ತಂದೆಯರಿಗೆ ಸುಕನ್ಯಾ ಸಮೃದ್ಧಿ ಯೋಜನೆ ಒಳ್ಳೆಯ ಪ್ಲಾನ್‌ ಆಗಿದೆ. 10 ವರ್ಷದೊಳಗಿನ ಹೆಣ್ಣುಮಕ್ಕಳಿದ್ದರೆ ಅವರ ಪೋಷಕರು ಸುಕನ್ಯಾ ಸಮೃದ್ಧಿ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು. ವರ್ಷಕ್ಕೆ 250 ರೂ.ನಿಂದ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಮಗಳು 18 ವರ್ಷ ತುಂಬಿದ ಬಳಿಕ ಶೇ.8ರಷ್ಟು ಬಡ್ಡಿಯೊಂದಿಗೆ ಹಣ ಪಡೆಯಬಹುದು. ಇದೇ ಹಣವನ್ನು ಮಗಳು 21 ವರ್ಷದ ದಾಟಿದ ಬಳಿಕ ಪಡೆದರೆ ಹೆಚ್ಚಿನ ಮೊತ್ತ ಸಿಗಲಿದೆ. ಆಕೆಯ ಉನ್ನತ ಶಿಕ್ಷಣ ಸೇರಿ ಹಲವು ಕಾರಣಗಳಿಗೆ ಇದು ಹೇಳಿ ಮಾಡಿಸಿದ ಯೋಜನೆ.
  4. ಪೋಸ್ಟ್‌ ಆಫೀಸ್‌ ಮಂತ್ಲಿ ಇನ್‌ಕಮ್‌ ಸ್ಕೀಮ್‌ ಅಕೌಂಟ್‌ ಕೂಡ ಸಣ್ಣ ಉಳಿತಾಯದಾರರಿಗೆ ಒಳ್ಳೆಯ ಯೋಜನೆ ಆಗಿದೆ. ಒಂದು, ಮೂರು, ಐದು ವರ್ಷದ ಯೋಜನೆ ಇದಾಗಿದ್ದು, ಒಬ್ಬ ವ್ಯಕ್ತಿಯು ಒಂದು ಖಾತೆಯಲ್ಲಿ 9 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯ ಬಡ್ಡಿದರವು ಶೇ.7.4ರಷ್ಟು ಇದೆ. ಈ ಯೋಜನೆಯಲ್ಲಿ ಜಂಟಿ ಖಾತೆ ತೆರೆಯುವುದು ತುಂಬ ಒಳಿತು. ಜಂಟಿಯಾಗಿ ತೆರೆದ ಖಾತೆ (Joint Account)ಯಲ್ಲಿ 15 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಇದರಿಂದ ಹೆಚ್ಚಿನ ಲಾಭವಾಗಲಿದೆ.
Continue Reading

ಪ್ರಮುಖ ಸುದ್ದಿ

Small Savings: ಸೆ.30ರೊಳಗೆ ಇದಕ್ಕೆಲ್ಲಾ ಆಧಾರ್ ಕಾರ್ಡ್ ಸಲ್ಲಿಸದಿದ್ದರೆ ಬಡ್ಡಿ ಕಳೆದುಕೊಳ್ಳುವಿರಿ! ಯಾವುದಕ್ಕೆಲ್ಲ? ಇಲ್ಲಿದೆ ವಿವರ

ನೀವು ಸಾರ್ವಜನಿಕ ಭವಿಷ್ಯ ನಿಧಿ (PPF), ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS), ಅಥವಾ ಪೋಸ್ಟ್ ಆಫೀಸ್ ಸಮಯ ಠೇವಣಿಗಳ (POTD) ಇಂತಹ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ ಸೆಪ್ಟೆಂಬರ್ 30, 2023ರೊಳಗೆ ನಿಮ್ಮ ಆಧಾರ್ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

VISTARANEWS.COM


on

september 30
Koo

ಬೆಂಗಳೂರು: ಸೆಪ್ಟೆಂಬರ್ 30ರೊಳಗೆ ನಿಮ್ಮ PPF, SCSS, NSC ಸೇರಿದಂತೆ ಹಲವು ಸಣ್ಣ ಉಳಿತಾಯ (Small savings) ಯೋಜನೆಗಳಿಗೆ ಆಧಾರ್‌ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಇದನ್ನು ಸಲ್ಲಿಸಲು ನೀವು ವಿಫಲರಾದರೆ ನಿಮ್ಮ ಖಾತೆಗೆ ಬರಬೇಕಾದ ಬಡ್ಡಿ ಹಣದ (Interest rate) ಪಾವತಿ ನಿಲ್ಲಬಹುದು. ಯಾವ್ಯಾವ ಉಳಿತಾಯ ಯೋಜನೆಗಳು? ಇಲ್ಲಿದೆ ವಿವರ.

ನೀವು ಸಾರ್ವಜನಿಕ ಭವಿಷ್ಯ ನಿಧಿ (PPF), ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS), ಅಥವಾ ಪೋಸ್ಟ್ ಆಫೀಸ್ ಸಮಯ ಠೇವಣಿಗಳ (POTD) ಇಂತಹ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ ಸೆಪ್ಟೆಂಬರ್ 30, 2023ರೊಳಗೆ ನಿಮ್ಮ ಆಧಾರ್ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

PPF, SCSS, NSC ಮತ್ತು ಇತರ ಪೋಸ್ಟ್ ಆಫೀಸ್ ಉಳಿತಾಯ

ನಿಮ್ಮ PPF, ಸುಕನ್ಯಾ ಸಮೃದ್ಧಿ ಯೋಜನೆ (SSY), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC), ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಅಥವಾ ಯಾವುದೇ ಇತರ ಸಣ್ಣ ಉಳಿತಾಯ ಯೋಜನೆಯ ಜತೆಗೆ ಮುಂದಿನ ತಿಂಗಳಿನಿಂದ ನಿಮ್ಮ ಆಧಾರ್‌ ಸಂಖ್ಯೆ ಜೋಡಣೆಯಾಗಿರುವುದು ಕಡ್ಡಾಯವಾಗಿದೆ. ಒಂದು ವೇಳೆ ಖಾತೆಯನ್ನು ತೆರೆಯುವಾಗ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಸಲ್ಲಿಸಿರದಿದ್ದರೆ, ನೀವು ಅದನ್ನು ಸೆಪ್ಟೆಂಬರ್ 30ರೊಳಗೆ ಸಲ್ಲಿಸಬೇಕು.

ಆತಂಕ ಪಡುವ ಅಗತ್ಯವಿಲ್ಲ

ನೀವು ಏಪ್ರಿಲ್ 1, 2023ರಂದು ಅಥವಾ ನಂತರ ನಿಮ್ಮ ಸಣ್ಣ ಉಳಿತಾಯ ಖಾತೆಗಳನ್ನು ತೆರೆದಿದ್ದರೆ, ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಆಧಾರ್ ಮತ್ತು ಪ್ಯಾನ್ ವಿವರಗಳು ಈಗಾಗಲೇ ದಾಖಲೆಗೆ ಜೋಡಣೆಯಾಗಿರುತ್ತವೆ.

ಆಧಾರ್‌ ಸಲ್ಲಿಸಲು ವಿಫಲವಾದರೆ ಏನಾಗುತ್ತದೆ?

ಸೆಪ್ಟೆಂಬರ್ 30, 2023ರೊಳಗೆ ನಿಮ್ಮ ಪೋಸ್ಟ್ ಆಫೀಸ್ ಯೋಜನೆಗೆ ಆಧಾರ್ ಅನ್ನು ಸಲ್ಲಿಸಲು ನೀವು ವಿಫಲರಾದರೆ, ನಿಮ್ಮ ಸಣ್ಣ ಉಳಿತಾಯ ಯೋಜನೆಯ ಖಾತೆಯು ನಿಷ್ಕ್ರಿಯವಾಗಬಹುದು. ಅಂದರೆ PPF, NSC ಅಥವಾ SCSSನಂತಹ ಸಣ್ಣ ಉಳಿತಾಯ ಯೋಜನೆ ಖಾತೆಯಲ್ಲಿರುವ ನಿಮ್ಮ ಹಣಕ್ಕೆ ಸಂಚಿತ ಬಡ್ಡಿಯನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದಿಲ್ಲ.

ನಿಮ್ಮ ಸಣ್ಣ ಉಳಿತಾಯ ಯೋಜನೆಯಿಂದ ಬರುವ ಬಡ್ಡಿ ಆದಾಯವನ್ನು ನೀವು ಅವಲಂಬಿಸಿದ್ದರೆ, ಖಂಡಿತವಾಗಿಯೂ ಆದಷ್ಟು ಬೇಗನೆ ಗಡುವಿನ ಮೊದಲು ನಿಮ್ಮ ಆಧಾರ್ ವಿವರಗಳನ್ನು ಸಲ್ಲಿಸಬೇಕು.

ಇದನ್ನೂ ಓದಿ: Money Guide: ಅಕ್ಟೋಬರ್ 1ರ ಮೊದಲೇ ಇದೆಲ್ಲ ಮಾಡಿಕೊಳ್ಳಿ… ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ!

Continue Reading

ಮನಿ ಗೈಡ್

Demat Account: ಡಿಮ್ಯಾಟ್ ಖಾತೆದಾರರಿಗೆ ಗುಡ್‌ ನ್ಯೂಸ್:‌ ನಾಮಿನಿ ಘೋಷಣೆಗೆ ಸಮಯ ವಿಸ್ತರಣೆ

ಸ್ಥಿರಾಸ್ತಿ ಭದ್ರತೆ ಹೊಂದಿರುವವರು ಪ್ಯಾನ್, ನಾಮಿನಿ, ಸಂಪರ್ಕ ವಿವರಗಳು, ಬ್ಯಾಂಕ್ ಖಾತೆ ವಿವರಗಳು ಮತ್ತು ಫೋಲಿಯೊ ಸಂಖ್ಯೆಗಳಿಗೆ ಮಾದರಿ ಸಹಿಯನ್ನು ಸಲ್ಲಿಸಲು ಸೆಬಿ ಡಿಸೆಂಬರ್ 31ರವರೆಗೆ ಸಮಯವನ್ನು ನೀಡಿದೆ.

VISTARANEWS.COM


on

demat account
Koo

ಹೊಸದಿಲ್ಲಿ: ಡಿಮ್ಯಾಟ್ ಖಾತೆದಾರರು ನಾಮನಿರ್ದೇಶನ (ನಾಮಿನಿ) ಆಯ್ಕೆ ಮಾಡಲು ಅಥವಾ ನಾಮನಿರ್ದೇಶನ ಆಯ್ಕೆಯನ್ನು ಕೈಬಿಡಲು ಗಡುವನ್ನು ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಿದೆ. ಇದಕ್ಕೆ ಡಿಸೆಂಬರ್ ಅಂತ್ಯದವರೆಗೆ ಸಮಯ ನೀಡಿದೆ.

ಈ ಹಿಂದೆ, ಅರ್ಹ ಟ್ರೇಡಿಂಗ್‌ ಮತ್ತು ಡಿಮ್ಯಾಟ್ ಖಾತೆದಾರರಿಗೆ ನಾಮನಿರ್ದೇಶನದ ಆಯ್ಕೆಯನ್ನು ಒದಗಿಸಲು ಗಡುವು ಸೆಪ್ಟೆಂಬರ್ 30ರವರೆಗೆ ಇತ್ತು. ವ್ಯವಹಾರವನ್ನು ಸುಲಭಗೊಳಿಸುವ ಉದ್ದೇಶದಿಂದ, ಟ್ರೇಡಿಂಗ್‌ ಖಾತೆಗಳಿಗೆ ʼನಾಮನಿರ್ದೇಶನದ ಆಯ್ಕೆ’ ಸಲ್ಲಿಕೆಯನ್ನು ಸ್ವಯಂಪ್ರೇರಿತ ಮಾಡಲಾಗಿದೆ. ಈ ಕ್ರಮವು ಹೂಡಿಕೆದಾರರಿಗೆ ತಮ್ಮ ಸ್ವತ್ತುಗಳನ್ನು ಸುರಕ್ಷಿತವಾಗಿರಿಸಲು ಮತ್ತು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವರ್ಗಾಯಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

“ವ್ಯವಹಾರವನ್ನು ಸುಲಭಗೊಳಿಸುವುದಕ್ಕಾಗಿ, ಠೇವಣಿದಾರರು, ದಲ್ಲಾಳಿಗಳ ಸಂಘಗಳು ಮತ್ತು ಇತರ ವಿವಿಧ ಪಾಲುದಾರರಿಂದ ಪಡೆದ ಮಾಹಿತಿಯಂತೆ, ಟ್ರೇಡಿಂಗ್‌ ಖಾತೆಗಳಿಗೆ ನಾಮನಿರ್ದೇಶನದ ಆಯ್ಕೆಯ ಸಲ್ಲಿಕೆಯನ್ನು ಸ್ವಯಂಪ್ರೇರಿತ ಮಾಡಲಾಗಿದೆ. ಡಿಮ್ಯಾಟ್ ಖಾತೆಗಳಿಗೆ ಸಂಬಂಧಿಸಿದಂತೆ ನಾಮಿನಿ ಆಯ್ಕೆ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿಸೆಂಬರ್ 31, 2023ಕ್ಕೆ ವಿಸ್ತರಿಸಲಾಗಿದೆ” ಎಂದು ಸೆಬಿ ಸುತ್ತೋಲೆಯಲ್ಲಿ ತಿಳಿಸಿದೆ.

ಸ್ಥಿರಾಸ್ತಿ ಭದ್ರತೆ ಹೊಂದಿರುವವರು ಪ್ಯಾನ್, ನಾಮಿನಿ, ಸಂಪರ್ಕ ವಿವರಗಳು, ಬ್ಯಾಂಕ್ ಖಾತೆ ವಿವರಗಳು ಮತ್ತು ಫೋಲಿಯೊ ಸಂಖ್ಯೆಗಳಿಗೆ ಮಾದರಿ ಸಹಿಯನ್ನು ಸಲ್ಲಿಸಲು ಸೆಬಿ ಡಿಸೆಂಬರ್ 31ರವರೆಗೆ ಸಮಯವನ್ನು ನೀಡಿದೆ.

ಅಸ್ತಿತ್ವದಲ್ಲಿರುವ ಎಲ್ಲಾ ಅರ್ಹ ಟ್ರೇಡಿಂಗ್‌ ಮತ್ತು ಡಿಮ್ಯಾಟ್ ಖಾತೆದಾರರಿಗೆ ನಾಮಿನಿ ಆಯ್ಕೆಯನ್ನು ಒದಗಿಸುವಂತೆ ಜುಲೈ 2021ರಲ್ಲಿ ಸೆಬಿ ಹೇಳಿತ್ತು. ಮಾರ್ಚ್ 31, 2022ರ ಗಡುವು ನೀಡಿತ್ತು. ನಂತರ ಅದನ್ನು ಇನ್ನೂ ಒಂದು ವರ್ಷ ಅಂದರೆ ಮಾರ್ಚ್ 31, 2023ರವರೆಗೆ, ನಂತರ ಮತ್ತೆ ಸೆಪ್ಟೆಂಬರ್ 30, 2023ರವರೆಗೆ ವಿಸ್ತರಿಸಿತು.

ಸೆಬಿ ನಿಯಮಾವಳಿಗಳ ಪ್ರಕಾರ, ಹೊಸ ಹೂಡಿಕೆದಾರರು ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆಗಳನ್ನು ತೆರೆದಾಗ, ತಮ್ಮ ಸೆಕ್ಯುರಿಟೀಸ್ ನಾಮಿನಿಯನ್ನು ಗೊತ್ತುಪಡಿಸಬೇಕು ಅಥವಾ ಡಿಕ್ಲರೇಶನ್ ಫಾರ್ಮ್ ಅನ್ನು ಸಲ್ಲಿಸುವ ಮೂಲಕ ನಾಮನಿರ್ದೇಶನವನ್ನು ಸ್ಪಷ್ಟವಾಗಿ ನಿರಾಕರಿಸಬೇಕು.

ಇದನ್ನೂ ಓದಿ: Demat Account: ಡಿಮ್ಯಾಟ್‌ ಖಾತೆಗೆ ಅಗತ್ಯವಿರುವ ದಾಖಲೆಗಳು

Continue Reading
Advertisement
cleaning
ದೇಶ8 mins ago

ಒಳ ಚರಂಡಿ ಸ್ವಚ್ಛಗೊಳಿಸುವಾಗ 5 ವರ್ಷಗಳಲ್ಲಿ 443 ಕಾರ್ಮಿಕರ ಸಾವು!

Ajitabh Bachchan, Younger Brother Of Amitabh At The Archies Film Screening
ಬಾಲಿವುಡ್10 mins ago

The Archies Film: ನಿಮಗೆ ಅಮಿತಾಭ್‌ ತಮ್ಮ ಅಜಿತಾಭ್‌ ಗೊತ್ತಾ? ಅವರೇ ಇವರು!

MLA Basanagouda Patil Yatnal and CM Siddaramaiah
ಕರ್ನಾಟಕ13 mins ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ26 mins ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Khalistani Terrorist Pannun
ದೇಶ43 mins ago

ಸಂಸತ್ತಿನ ಮೇಲೆ ಡಿ.13ರಂದು ಉಗ್ರ ದಾಳಿ: ಬೆದರಿಕೆ ವಿಡಿಯೋ ಹರಿಬಿಟ್ಟ ಖಲಿಸ್ತಾನಿ ಉಗ್ರ ಪನ್ನುನ್‌

lidkar ambassador dolly dhananjay Officially
South Cinema58 mins ago

Dolly Dhananjay: ಸಂಭಾವನೆ ಪಡೆಯದೆ ಲಿಡ್ಕರ್‌ ರಾಯಭಾರಿಯಾದ ಡಾಲಿ ಧನಂಜಯ್‌!

Government Job Vistara Exclusive and CM Siddaramaiah
ಉದ್ಯೋಗ1 hour ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

kim
ವಿದೇಶ1 hour ago

Viral Video: ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ!

narendra modi amit shah jp nadda
ದೇಶ2 hours ago

Assembly Election 2023: 3 ರಾಜ್ಯಗಳಲ್ಲೂ ಮುಖ್ಯಮಂತ್ರಿಯಾಗಿ ಬಿಜೆಪಿಯಿಂದ ಹೊಸ ಮುಖ

Vinay Gowda and sangeetha Bigg boss
ಬಿಗ್ ಬಾಸ್2 hours ago

BBK SEASON 10: ಪಾತ್ರದಿಂದ ಹೊರಗೆ ಬಂದ್ರೆ ಸಂಗೀತಾ ಟೀಮ್‌ಗೆ ʻಹುಚ್ಚೇಟುʼ ಕೊಡ್ತೀನಿ ಎಂದ ವಿನಯ್‌!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

MLA Basanagouda Patil Yatnal and CM Siddaramaiah
ಕರ್ನಾಟಕ13 mins ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ26 mins ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 hour ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ2 hours ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

read your daily horoscope predictions for december 6 2023
ಪ್ರಮುಖ ಸುದ್ದಿ9 hours ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ17 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ18 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ18 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

ಟ್ರೆಂಡಿಂಗ್‌