ಚೆನ್ನೈ: ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ 10 ರೂ. ನಾಣ್ಯಗಳಿಂದಲೇ 6 ಲಕ್ಷ ರೂ. ಬೆಲೆಯ ಕಾರನ್ನು ಖರೀದಿಸಿ ಸುದ್ದಿ ಮಾಡಿದ್ದಾರೆ. ಇದಕ್ಕೆ ಕಾರಣ ಕೇಳಿದರೆ ಅಚ್ಚರಿ ಪಡುತ್ತೀರಾ. ಈ ಮೂಲಕ 10 ರೂ. ನಾಣ್ಯ ಉಂಟು ಮಾಡಿರುವ ಸಮಸ್ಯೆಯ ಮೇಲೆ ಅವರು ಬೆಳಕು ಚೆಲ್ಲಿದ್ದಾರೆ. ಆಶ್ಚರ್ಯವೇನೆಂದರೆ ಇದಕ್ಕಾಗಿ ಅವರು ಒಂದು ತಿಂಗಳು ಭಾರಿ ಶ್ರಮ ಪಟ್ಟಿದ್ದಾರೆ.
ತಮಿಳುನಾಡಿನ ಅರೂರಿನ ವೆಟ್ರಿವೆಲ್ ಎಂಬುವರ ತಾಯಿಯ ಅಂಗಡಿಯಲ್ಲಿ ಗ್ರಾಹಕರು ಕೊಡುತ್ತಿದ್ದ 10 ರೂ.ಗಳ ನಾಣ್ಯವನ್ನು ಬ್ಯಾಂಕ್‌ನಲ್ಲಿ ತೆಗೆದುಕೊಳ್ಳುತ್ತಿರಲಿಲ್ಲ. ಎಣಿಸಲು ಜನ ಇಲ್ಲ ಎಂದು ಬ್ಯಾಂಕಿನವರು ಸಬೂಬು ಹೇಳುತ್ತಿದ್ದರಂತೆ. ಇದರ ಪರಿಣಾಮ ಅವರ ಮನೆಯಲ್ಲಿ ಹತ್ತು ರೂ. ನಾಣ್ಯಗಳು ಶೇಖರಣೆಯಾಗುತ್ತಾ ಬಂದಿತ್ತು. ಅದು ಸಮಸ್ಯೆಯೂ ಆಗಿತ್ತು.
ಅಂತಿಮವಾಗಿ ೧೦ ರೂ. ನಾಣ್ಯಗಳಿಂದ 6 ಲಕ್ಷ ರೂ. ಬೆಲೆ ಬಾಳುವ ಕಾರನ್ನು ವೆಟ್ರಿವೆಲ್ ಖರೀದಿಸಿದ್ದಾರೆ. ನಾಣ್ಯ ಉಂಟು ಮಾಡಿರುವ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದಾರೆ. ಆದರೆ ಇದಕ್ಕಾಗಿ ಒಂದು ತಿಂಗಳು ಕಾಲ ನಾಣ್ಯ ಸಂಗ್ರಹಿಸಲು ಶ್ರಮಪಟ್ಟಿದ್ದಾರೆ. ಡೀಲರ್‌ಗಳು ಮೊದಲು ನಿರಾಕರಿಸಿದರೂ, ಬಳಿಕ ವೆಟ್ರಿವೆಲ್‌ನ ಇಚ್ಛಾಶಕ್ತಿ ಗಮನಿಸಿ ಒಪ್ಪಿದರು. ಡೀಲರ್‌ಗಳ ಸಿಬ್ಬಂದಿ ಹಾಗೂ ವೆಟ್ರಿವೆಲ್ ಕುಟುಂಬಸ್ತರು ಸೇರಿ ನಾಣ್ಯಗಳನ್ನು ಎಣಿಸಿದ್ದರು.
ಹತ್ತು ರೂ. ನಾಣ್ಯಕ್ಕೆ ಮಾನ್ಯತೆ ಇದೆ ಎಂದು ಆರ್‌ಬಿಐ ಸ್ಪಷ್ಟೀಕರಣ ನೀಡಿದ್ದರೂ, ಅದನ್ನು ತೆಗೆದುಕೊಳ್ಳಲು ಬ್ಯಾಂಕ್‌ಗಳೂ ಹಿಂಜರಿದಿರುವುದು ವಿಪರ್ಯಾಸ.