ತ್ರಿಶ್ಶೂರು: ಜಾರಿ ನಿರ್ದೇಶನಾಲಯವು ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಗ್ರೂಪ್‌ನ ಕಚೇರಿಗಳಿಗೆ ದಾಳಿ ನಡೆಸಿದೆ. ತ್ರಿಶ್ಶೂರಿನ ನಾನಾ ಕಡೆಗಳಲ್ಲಿ ಇ.ಡಿ ದಾಳಿ ( ED searches at Manappuram Finance) ಮುಂದುವರಿದಿದೆ. ಆರ್‌ಬಿಐನ ಅನುಮೋದನೆ ಇಲ್ಲದೆಯೇ ಸಾರ್ವಜನಿಕರಿಂದ 150 ಕೋಟಿ ರೂ.ಗಿಂತ ಹೆಚ್ಚಿನ ಠೇವಣಿಯನ್ನು ಸ್ವೀಕರಿಸಿರುವ ಆರೋಪವನ್ನು ಮಣಪ್ಪುರಂ ಎದುರಿಸುತ್ತಿದೆ. ಮಣಪ್ಪುರಂ ಫೈನಾನ್ಸ್‌ನ ಪ್ರವರ್ತಕ ವಿಪಿ ನಂದಕುಮಾರ್ ಅವರ ನಿವಾಸದಲ್ಲೂ ಶೋಧ ನಡೆದಿದೆ.
ಮಣಪ್ಪುರಂ ಫೈನಾನ್ಸ್‌ನಲ್ಲಿ ಕೆವೈಸಿ ನಿಯಮಗಳನ್ನು ಉಲ್ಲಂಘಿಸಿ ಭಾರಿ ನಗದು ವರ್ಗಾವಣೆಗಳು ನಡೆದಿರಬಹುದು ಎಂದು ಶಂಕಿಸಲಾಗಿದೆ. ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ( Manappuram Finance limited) ಅನ್ನು 74 ವರ್ಷಗಳ ಹಿಂದೆ 1949ರಲ್ಲಿ ತ್ರಿಶ್ಶೂರಿನ ವಲಪಾಡ್‌ನಲ್ಲಿ ಸ್ಥಾಪಿಸಲಾಯಿತು.
ಚಿನ್ನದ ಸಾಲ, ಫೊರೆಕ್ಸ್ ಮತ್ತು ಹಣ ವರ್ಗಾವಣೆ, ವಾಣಿಜ್ಯ ವಾಹನ ಸಾಲವನ್ನು ವಿತರಿಸುತ್ತದೆ. 17,500 ಉದ್ಯೋಗಿಗಳನ್ನು ಒಳಗೊಂಡಿದೆ. 25 ರಾಜ್ಯಗಳಲ್ಲಿ 4 ಸಾವಿರಕ್ಕೂ ಹೆಚ್ಚು ಶಾಖೆಗಳನ್ನು ಒಳಗೊಂಡಿದೆ. ವಿ.ಪಿ ನಂದಕುಮಾರ್ ಅವರು ಮಣಪ್ಪುರಂ ಫೈನಾನ್ಸ್‌ನ ಸ್ಥಾಪಕರಾಗಿದ್ದಾರೆ.
ಮಣಪ್ಪುರಂ ಫೈನಾನ್ಸ್ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ಬೆನ್ನಲ್ಲೇ ಷೇರು ವಿನಿಮಯ ಕೇಂದ್ರದಲ್ಲಿ ಸಂಸ್ಥೆಯ ಷೇರು ದರ ಬುಧವಾರ 9% ಇಳಿಯಿತು. (119 ರೂ.)