ನವ ದೆಹಲಿ: ಕಳೆದ ವಾರ ಷೇರು ಮಾರುಕಟ್ಟೆಯಲ್ಲಿ ಪ್ರಮುಖ 10 ಕಂಪನಿಗಳ ಪೈಕಿ 9 ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ 79,798 ಕೋಟಿ ರೂ. (Market valuation) ಹೆಚ್ಚಳವಾಗಿದೆ.
ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಮತ್ತು ಇನ್ಫೋಸಿಸ್ ಅತಿ ಹೆಚ್ಚು ಬಂಡವಾಳ ಮೌಲ್ಯವನ್ನು ಗಳಿಸಿವೆ. ಕಳೆದವಾರ ಸೆನ್ಸೆಕ್ಸ್ 630 ಅಂಕ ಏರಿತ್ತು. ಶುಕ್ರವಾರ ಸೂಚ್ಯಂಕ 62,293ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತ್ತು.
ಟಿಸಿಎಸ್ ಮಾರುಕಟ್ಟೆ ಮೌಲ್ಯದಲ್ಲಿ 17,215 ಕೋಟಿ ರೂ. ಹೆಚ್ಚಳವಾಗಿದ್ದು, 12,39,997 ಕೋಟಿ ರೂ.ಗೆ ವೃದ್ಧಿಸಿತ್ತು. ಇನ್ಫೋಸಿಸ್ 15,946 ಕೋಟಿ ರೂ. ಸೇರಿಸಿದ್ದು, 6,86,211 ಕೋಟಿ ರೂ.ಗೆ ತಲುಪಿತ್ತು. ರಿಲಯನ್ಸ್ ಇಂಡಸ್ಟ್ರೀಸ್ 13,192 ಕೋಟಿ ರೂ. ಮೌಲ್ಯವನ್ನು ಸೇರಿಸಿದ್ದು, 17,70,532 ಕೋಟಿ ರೂ.ಗೆ ವೃದ್ಧಿಸಿತ್ತು.
ಷೇರು ಮಾರುಕಟ್ಟೆಯಲ್ಲಿ 2022ರ ನವೆಂಬರ್ 25ಕ್ಕೆ ಪ್ರಮುಖ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ:
ರಿಲಯನ್ಸ್ ಇಂಡಸ್ಟ್ರೀಸ್: 17,70,532
ಟಿಸಿಎಸ್: 12,39,997 ಕೋಟಿ ರೂ.
ಎಚ್‌ಡಿಎಫ್‌ಸಿ ಬ್ಯಾಂಕ್: 9,01,523 ಕೋಟಿ ರೂ.
ಇನ್ಫೋಸಿಸ್: 6,86,211 ಕೋಟಿ ರೂ.
ಐಸಿಐಸಿಐ ಬ್ಯಾಂಕ್: 6,48,362 ಕೋಟಿ ರೂ.
ಹಿಂದುಸ್ತಾನ್ ಯುನಿಲಿವರ್: 5,95,997 ಕೋಟಿ ರೂ.
ಎಸ್‌ಬಿಐ: 5,42,125 ಕೋಟಿ ರೂ.
ಎಚ್‌ಡಿಎಫ್‌ಸಿ: 4,87,908 ಕೋಟಿ ರೂ.
ಭಾರ್ತಿ ಏರ್‌ಟೆಲ್: 4,71,094 ಕೋಟಿ ರೂ.
ಅದಾನಿ ಎಂಟರ್‌ಪ್ರೈಸಸ್: 4,44,982 ಕೋಟಿ ರೂ.