ಬೆಂಗಳೂರು: ಭಾರತದಲ್ಲಿ ಟೆಸ್ಲಾ ಕಾರುಗಳ ಮಾರಾಟ ಮತ್ತು ಸರ್ವೀಸ್‌ಗೆ ಮೊದಲು ಅನುಮತಿ ನೀಡದಿದ್ದರೆ, ಇಲ್ಲಿ ಉತ್ಪಾದನೆ ಮಾಡುವುದಿಲ್ಲ ಎಂದು ಟೆಸ್ಲಾ ಕಂಪನಿಯ ಸ್ಥಾಪಕ ಮತ್ತಿ ಸಿಇಒ ಆದ ಎಲಾನ್ ಮಸ್ಕ್ ಹೇಳಿದ್ದಾರೆ.
ಟ್ವಿಟಿಗರೊಬ್ಬರು ಈ ಸಂಬಂಧ ಕೇಳಿದ ಪ್ರಶ್ನೆಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್, ತಮ್ಮ ಷರತ್ತನ್ನು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಪ್ರದೇಶದಲ್ಲಾದರೂ, ಟೆಸ್ಲಾ ಕಾರುಗಳಿಗೆ ಮೊದಲು ಮಾರಾಟ ಮತ್ತು ಸರ್ವೀಸ್ ನೀಡಲು ಅನುಮತಿ ಕೊಡದಿದ್ದರೆ, ಉತ್ಪಾದನಾ ಘಟಕ ತೆರೆಯಲಾಗದು ಎಂದು ತಿಳಿಸಿದ್ದಾರೆ.
ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿ ಟೆಸ್ಲಾ 2019ರಿಂದ ಯತ್ನಿಸುತ್ತಿದೆ. ಆದರೆ ಆಮದು ಮಾಡುವ ದುಬಾರಿ ಎಲೆಕ್ಟ್ರಿಕ್ ಕಾರುಗಳಿಗೆ ಸುಂಕ ಕಡಿತ ಮಾಡಲು ಭಾರತ ಸರಕಾರ ಸಮ್ಮತಿಸಿಲ್ಲ. ಸುಂಕ ಇಳಿಸಬೇಕು ಎಂದು ಟೆಸ್ಲಾ ಪಟ್ಟು ಹಿಡಿದಿತ್ತು. ಸರಕಾರ 40,000 ಡಾಲರ್‌ಗಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ವಾಹನಗಳ ಆಮದಿಗೆ ಶೇ. 60 ಹಾಗೂ ಅದಕ್ಕಿಂತ ಹೆಚ್ಚಿನ ದರದ ಕಾರುಗಳ ಆಮದಿಗೆ ಶೇ.100 ಆಮದು ಸುಂಕ ವಿಧಿಸುತ್ತದೆ.
ಇದನ್ನೂ ಓದಿ:Twitter ಖರೀದಿಸುವ ಮೆಗಾ ಡೀಲ್‌ಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ ಎಲನ್ ಮಸ್ಕ್!