ನವ ದೆಹಲಿ: ಕೇಂದ್ರ ಸರ್ಕಾರಿ ಉದ್ಯೋಗಿಗಳು ಜುಲೈನಲ್ಲಿ ಶುಭ ಸುದ್ದಿ ನಿರೀಕ್ಷಿಸಬಹುದು. ಉದ್ಯೋಗಿಗಳು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ( Dearness allowance) ಅನ್ನು ಜುಲೈ 1ರಿಂದ ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ.
ಸಾಮಾನ್ಯವಾಗಿ ಸರ್ಕಾರ ಜನವರಿ ಮತ್ತು ಜುಲೈನಲ್ಲಿ ಡಿಎ ಅನ್ನು ಪರಿಷ್ಕರಿಸುತ್ತದೆ. ಇದಕ್ಕಾಗಿ ಗ್ರಾಹಕ ದರ ಆಧಾರಿತ ಹಣದುಬ್ಬರವನ್ನು ಪರಿಗಣಿಸುತ್ತದೆ. ಏಳನೇ ವೇತನ ಆಯೋಗದ ಅಡಿಯಲ್ಲಿ ಇದನ್ನು ಘೋಷಿಸಲಾಗುತ್ತದೆ. ಈ ಸಲ ಶೇ.4ರಷ್ಟು ಏರಿಕೆಯನ್ನು ನಿರೀಕ್ಷಿಸಲಾಗಿದೆ.
ಪ್ರಸ್ತುತ ಸರ್ಕಾರಿ ಉದ್ಯೋಗಿಗಳು ತಮ್ಮ ಮೂಲ ವೇತನದ ಶೇ.34 ಮೊತ್ತವನ್ನು ಡಿಎ ಆಗಿ ಪಡೆಯುತ್ತಾರೆ.
ಇದರಲ್ಲಿ ಶೇ.4 ಏರಿಸಿದರೆ ಶೇ.38 ಡಿಎ ಪಡೆಯಲಿದ್ದಾರೆ. ತುಟ್ಟಿಭತ್ಯೆಯು ಉದ್ಯೋಗಿಯ ವಾಸಸ್ಥಳ ಆಧರಿಸಿ ವ್ಯತ್ಯಾಸವಾಗುತ್ತದೆ. ನಗರ, ಪಟ್ಟಣ, ಗ್ರಾಮೀಣ ಪ್ರದೇಶವನ್ನು ಆಧರಿಸಿ ಭಿನ್ನವಾಗಿರುತ್ತದೆ.
ಇದನ್ನೂ ಓದಿ: ಸೂಕ್ತ ವೇತನಕ್ಕೆ ಆಗ್ರಹಿಸಿ ಮೇ 17ರಂದು ಅಶಾ ಕಾರ್ಯಕರ್ತೆಯರ ಪ್ರತಿಭಟನೆ