Site icon Vistara News

Interest rate : ಬ್ಯಾಂಕ್‌ಗಳಲ್ಲಿ ಎಂಸಿಎಲ್‌ಆರ್‌ ಆಧರಿತ ಸಾಲದ ಬಡ್ಡಿ ದರ 2023-24ರಲ್ಲಿ ಏರಿಕೆ ಸಂಭವ

cash

ನವ ದೆಹಲಿ: ಮುಂದಿನ 2023-24ರ ಸಾಲಿನಲ್ಲಿ ಎಂಸಿಎಲ್‌ಆರ್‌ (Marginal cost of funds based lending rate) ಆಧರಿತ ಸಾಲದ ಬಡ್ಡಿ ದರಗಳಲ್ಲಿ ಏರಿಕೆ ನಿರೀಕ್ಷಿಸಲಾಗಿದೆ. ಇಂಡಿಯಾ ರೇಟಿಂಗ್ಸ್‌ ಏಜೆನ್ಸಿಯ ವರದಿಯ ಪ್ರಕಾರ ಎಂಸಿಎಲ್‌ಆರ್‌ ದರದಲ್ಲಿ 1-1.5% ತನಕ ಹೆಚ್ಚಳವಾಗುವ ಸಾಧ್ಯತೆ ಇದೆ. (Interest rate) ಇದರ ಪರಿಣಾಮ ಎಂಸಿಎಲ್‌ಆರ್‌ ಆಧಾರಿತ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್‌ ಸಾಲಗಳ ಬಡ್ಡಿ ದರಗಳು ವೃದ್ಧಿಸುವ ಸಾಧ್ಯತೆ ಇದೆ.

ಈ ಹಿಂದೆ ರಿವರ್ಸ್‌ ರೆಪೊ ದರದ ಪರಿಣಾಮ ಬ್ಯಾಂಕಿಂಗ್‌ ವಲಯ 5 ಲಕ್ಷ ಕೋಟಿ ರೂ. ಗಳಿಸಿತ್ತು. ಇದರಿಂದ ಸಾಲ ಮತ್ತು ಠೇವಣಿಯ ಬಡ್ಡಿ ದರದ ವ್ಯತ್ಯಾಸವನ್ನು ಭರಿಸಲು ಸಹಕಾರಿಯಾಗಿತ್ತು. ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಆರ್‌ಬಿಐ, ತನ್ನ ರೆಪೊ ದರ ಏರಿಕೆ ಮಾಡಿದೆ. ಇದರ ಪರಿಣಾಮ ಮುಂಬರುವ ದಿನಗಳಲ್ಲಿ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಬಿಗಿಯಾಗಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ತಿಳಿಸಿದೆ.

ಎಸ್‌ಬಿಐನಲ್ಲಿ ಎಂಸಿಎಲ್‌ಆರ್‌ ದರ 3 ವರ್ಷಗಳ ಅವಧಿಗೆ 8.70 % ಹಾಗೂ 2 ವರ್ಷಗಳ ಅವಧಿಗೆ 8.60% ಇದೆ. ಬ್ಯಾಂಕ್‌ಗೆ ಸಾಲ ವಿತರಣೆಗೆ ತಗಲುವ ವೆಚ್ಚದ ದರವನ್ನು ಎಂಸಿಎಲ್‌ಆರ್‌ ಎನ್ನುತ್ತಾರೆ. ಅದಕ್ಕಿಂತ ಕಡಿಮೆ ಮಟ್ಟಕ್ಕೆ ಬ್ಯಾಂಕ್‌ ಬಡ್ಡಿ ದರ ನಿಗದಿಪಡಿಸುವುದಿಲ್ಲ. ರೆಪೊ ದರ ಆಧರಿತ ಸಾಲ ವಿತರಣೆಯೂ ಜಾರಿಯಲ್ಲಿದೆ.

Exit mobile version