ಮುಂಬಯಿ: ನಿರೀಕ್ಷೆಯಂತೆ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಮೂಲಕ ಮೆಟ್ರೊ ಕ್ಯಾಶ್ & ಕ್ಯಾರಿಯ ಭಾರತೀಯ ಘಟಕವನ್ನು 2,850 ಕೋಟಿ ರೂ.ಗೆ (Metro Cash & Carry India) ಖರೀದಿಸಿದೆ.
ಮೆಟ್ರೊ ಕ್ಯಾಶ್ & ಕ್ಯಾರಿ ಇಂಡಿಯಾದ 100 % ಷೇರುಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಖರೀದಿಸಿದೆ. ಅದು ಮೆಟ್ರೊ ಇಂಡಿಯಾ ಬ್ರಾಂಡ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಇದರೊಂದಿಗೆ ಇನ್ನು ಮುಂದೆ ರಿಲಯನ್ಸ್ ರಿಟೇಲ್ ಮೆಟ್ರೊ ಕ್ಯಾಶ್‌ನ ಭಾರತೀಯ ನೆಟ್ ವರ್ಕ್ ಅನ್ನು ಮುನ್ನಡೆಸಲಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮೆಟ್ರೊ ಕ್ಯಾಶ್ ಕಾರ್ಯನಿರ್ವಹಿಸುತ್ತಿದೆ. ಒಟ್ಟು 31 ಹೋಲ್‌ಸೇಲ್ ವಿತರಣೆ ಕೇಂದ್ರಗಳನ್ನು ಒಳಗೊಂಡಿದೆ. ಭಾರತೀಯ ರಿಟೇಲ್ ಮಾರುಕಟ್ಟೆ 60 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆಯಾಗಿದೆ. ಆಹಾರ ಮತ್ತು ದಿನಸಿ ಮಾರುಕಟ್ಟೆಯಲ್ಲಿ 20% ಪಾಲನ್ನು ರಿಲಯನ್ಸ್ ಹೊಂದಿದೆ.