Site icon Vistara News

Bangaluru MG Road : ಟಾಪ್‌ 30 ಉತ್ತಮ ರಸ್ತೆಗಳಲ್ಲಿ ಬೆಂಗಳೂರಿನ ಎಂ.ಜಿ ರೋಡ್‌ಗೆ ಮೊದಲ ರ‍್ಯಾಂಕ್

MG Road Top 30 best roads for Bangalore's MG Road is the first rank

#image_title

ಬೆಂಗಳೂರು: ರಿಯಾಲ್ಟಿ ವಲಯದ ನೈಟ್‌ ಫ್ರಾಂಕ್‌ ಇಂಡಿಯಾ ಸಂಸ್ಥೆ ಸಿದ್ಧಪಡಿಸಿರುವ ಭಾರತದ ಟಾಪ್ 30 ಹೈ ಸ್ಟ್ರೀಟ್‌ಗಳ ಪಟ್ಟಿಯಲ್ಲಿ ಬೆಂಗಳೂರಿನ ಎಂ.ಜಿ ರಸ್ತೆಗೆ ( Bangaluru MG Road) ಮೊದಲ ರ‍್ಯಾಂಕ್‌ ಲಭಿಸಿದೆ. ರಸ್ತೆಯ ಗುಣಮಟ್ಟ, ಪಾರ್ಕಿಂಗ್‌ ಸೌಲಭ್ಯ, ಸುತ್ತಲಿನ ಪರಿಸರ, ಗ್ರಾಹಕರಿಗೆ ಸಿಗುವ ಉತ್ತಮ ಶಾಪಿಂಗ್‌ ಅನುಭವವನ್ನು ಆಧರಿಸಿ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ನೈಟ್‌ ಫ್ರಾಂಕ್‌ ತಿಳಿಸಿದೆ.

ಹೈದರಾಬಾದ್‌ನ ಸೋಮಾಜಿಗುಡ, ಮುಂಬಯಿನ ಲಿಂಕಿಂಗ್‌ ರೋಡ್‌ ಅನುಕ್ರಮವಾಗಿ 2 ಮತ್ತು 3ನೇ ಸ್ಥಾನ ಗಳಿಸಿದೆ. ದಿಲ್ಲಿಯ ಸೌತ್‌ ಎಕ್ಸ್‌ಟೆನ್ಷನ್‌ (Part 1 ಮತ್ತು Part 2) ನಾಲ್ಕನೇ ಸ್ಥಾನ ಗಳಿಸಿತ್ತು. 30 ಹೈ ಸ್ಟ್ರೀಟ್‌ ಲೊಕೇಶನ್‌ಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಈ ಬಗ್ಗೆ Think India Think Retail 2023 – High Street Real Estate Outlook ಎಂಬ ವರದಿಯನ್ನು ನೈಟ್‌ ಫ್ರಾಂಕ್‌ ಬಿಡುಗಡೆಗೊಳಿಸಿದೆ.

ಕೋಲ್ಕತ್ತಾದ ಪಾರ್ಕ್‌ ಸ್ಟ್ರೀಟ್‌ ಐದನೇ ಸ್ಥಾನ ಗಳಿಸಿದೆ. ಚೆನ್ನೈನ ಅಣ್ಣಾ ನಗರ್‌, ಬೆಂಗಳೂರಿನ ಕಮರ್ಶಿಯಲ್‌ ಸ್ಟ್ರೀಟ್‌, ನೋಯ್ಡಾದ ಸೆಕ್ಟರ್‌ 18 ಮಾರ್ಕೆಟ್‌, ಬೆಂಗಳೂರಿನ ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ ಪಟ್ಟಿಯಲ್ಲಿದೆ. ದಿಲ್ಲಿಯ ಖಾನ್‌ ಮಾರ್ಕೆಟ್‌, ಡಿಎಲ್‌ಎಫ್‌ ಗ್ಯಾಲರಿಯಾ (ಗುರುಗ್ರಾಮ) ಕಡಿಮೆ ಸ್ಕೋರ್‌ ಗಳಿಸಿದೆ. ಬೆಂಗಳೂರಿನ ಎಂ.ಜಿ ರಸ್ತೆ, ಹೈದರಾಬಾದಿನ ಸೋಮಾಜಿಗುಡಾ, ಮುಂಬಯಿನ ಲಿಂಕಿಂಗ್‌ ರೋಡ್‌, ತಮಿಳುನಾಡಿನ ಅಣ್ಣಾ ನಗರ್‌,‌ ಕೋಲ್ಕತಾದ ಪಾರ್ಕ್‌ ಸ್ಟ್ರೀಟ್ ಹೈ ಸ್ಕೋರ್‌ ಗಳಿಸಿವೆ.

ಇದನ್ನೂ ಓದಿ: Namma Metro : ಕೆ.ಆರ್‌.ಪುರಂ-ವೈಟ್‌ಫೀಲ್ಡ್‌ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಆರಂಭ

ರಿಟೇಲ್‌ ಅತ್ಯಂತ ಸ್ಪರ್ಧಾತ್ಮಕ ಕ್ಷೇತ್ರವಾಗಿದ್ದು, ಇತ್ತೀಚಿನ ಶಾಪಿಂಗ್‌ ಮಾಲ್‌ಗಳು ಗ್ರಾಹಕರ ಒಟ್ಟಾರೆ ಶಾಪಿಂಗ್‌ ಅನುಭವವನ್ನು ಸಮೃದ್ಧಗೊಳಿಸಿವೆ. ಜಾಗತಿಕ ಮಟ್ಟದ ಹೈ ಸ್ಟ್ರೀಟ್‌ಗಳಲ್ಲಿ ಪ್ರಮುಖ ಬ್ರಾಂಡ್‌ಗಳು ಆಕರ್ಷಿಸುತ್ತವೆ ಎಂದು ನೈಟ್‌ ಫ್ರಾಂಕ್‌ ವರದಿ ತಿಳಿಸಿದೆ.

Exit mobile version