ನವ ದೆಹಲಿ: ತಂತ್ರಜ್ಞಾನ ದಿಗ್ಗಜ ಮೈಕ್ರೊಸಾಫ್ಟ್ ಸುಮಾರು 1,000 ಉದ್ಯೋಗಿಗಳನ್ನು (Microsoft) ವಜಾಗೊಳಿಸಿದೆ ಎಂದು ಅಮೆರಿಕದ ನ್ಯೂಸ್ ವೆಬ್ ಸೈಟ್ ಎಕ್ಸಿಯೋಸ್ ವರದಿ ತಿಳಿಸಿದೆ.
ಕಳೆದ ಜುಲೈನಿಂದ ಮೂರನೇ ಸುತ್ತಿನಲ್ಲಿ ಕಂಪನಿ ಉದ್ಯೋಗಿಗಳನ್ನು ವಜಾಗೊಳಿಸಿದೆ. ಮೈಕ್ರೊಸಾಫ್ಟ್ 180,000 ಉದ್ಯೋಗಿಗಳನ್ನು ಹೊಂದಿದ್ದು, ಇದರಲ್ಲಿ 1% ಮಂದಿಯನ್ನು ಕಳೆದ ಜುಲೈನಲ್ಲಿ ವಜಾಗೊಳಿಸಿತ್ತು.
ಕಂಪನಿಯ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಬಲವನ್ನು ಪುನಾರಚನೆ ಮಾಡಲಾಗಿದೆ ಎಂದು ಮೈಕ್ರೊಸಾಫ್ಟ್ ಹೇಳಿರುವುದಾಗಿ ವರದಿಯಾಗಿತ್ತು. ಜುಲೈ ಬಳಿಕ ಮತ್ತೆ 200 ಉದ್ಯೋಗಿಗಳನ್ನು ಕಂಪನಿ ಕಳೆದ ಆಗಸ್ಟ್‌ನಲ್ಲಿ ವಜಾಗೊಳಿಸಿತ್ತು. ಜಾಗತಿಕ ಆರ್ಥಿಕ ಮಂದಗತಿ ಹಾಗೂ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಕಂಪನಿ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ.