Site icon Vistara News

Milk adulteration : ಹಾಲಿನ ಕಲಬೆರಕೆ ತಡೆಯಲು ತಳಮಟ್ಟದ ಸಮೀಕ್ಷೆ, ಹೇಗೆ ನಡೆಯಲಿದೆ ಪರೀಕ್ಷೆ?

Milk adulteration Ground level survey to prevent milk adulteration, how will the test be conducted

#image_title

ನವ ದೆಹಲಿ: ದೇಶದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಕಲಬೆರಕೆ ಸಮಸ್ಯೆಯನ್ನು ತಡೆಯಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ರಾಷ್ಟ್ರ ವ್ಯಾಪಿ ಸಮೀಕ್ಷೆ ನಡೆಸಲು ನಿರ್ಧರಿಸಿದೆ. (Milk adulteration) ಭಾರಿ ಪ್ರಮಾಣದಲ್ಲಿ ನಿಗಾ ವಹಿಸಲಿದೆ. ಹಾಲು ಮತ್ತು ಅದರ ಉತ್ಪನ್ನಗಳ ಕಲಬೆರಕೆಗೆ ಸಂಬಂಧಿಸಿ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಈ ಕ್ರಮ ಕೈಗೊಂಡಿದೆ.

ಹೇಗೆ ನಡೆಯಲಿದೆ ಪರೀಕ್ಷೆ?

ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ಸಮೀಕ್ಷೆ ನಡೆಯಲಿದೆ. ಜಲ್ಲಾ ಮಟ್ಟದಲ್ಲಿ ಹಾಲು ಮತ್ತು ಅದರ ಉತ್ಪನ್ನಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಕಲಬೆರಕೆ ಬಗ್ಗೆ ಪರೀಕ್ಷೆ ನಡೆಸಲಾಗುವುದು. ಖೋವಾ, ಚೆನ್ನಾ, ಪನ್ನೀರ್‌, ಬೆಣ್ಣೆ, ತುಪ್ಪ, ಮೊಸರು, ಐಸ್‌ಕ್ರೀಮ್‌ ಉತ್ಪನ್ನಗಳನ್ನು ಪರೀಕ್ಷಿಸಲಾಗುವುದು. ಮೇ 25ರಂದು FSSAI ಈ ವಿಷಯ ತಿಳಿಸಿದೆ.

ಭಾರತವು ವಿಶ್ವದಲ್ಲಿಯೇ ಅತಿ ದೊಡ್ಡ ಹಾಲಿನ ಉತ್ಪಾದಕ ರಾಷ್ಟ್ರವಾಗಿದೆ. ಆದರೆ ಹಾಲಿನ ಜತೆಗೆ ನಾನಾ ಬಗೆಯ ರಾಸಾಯನಿಕಗಳನ್ನು ಕಲಬೆರಕೆ ಮಾಡುವ ಪ್ರವೃತ್ತಿ ಸವಾಲಾಗಿ ಪರಿಣಮಿಸಿದೆ.

ಕಲಬೆರಕೆ ಹೆಚ್ಚು ನಡೆಯುವ ಹಾಟ್‌ ಸ್ಪಾಟ್‌ಗಳ ಪತ್ತೆಗೂ ಸಮೀಕ್ಷೆ ಸಹಕಾರಿಯಾಗಲಿದೆ. ಪ್ರಾಧಿಕಾರವು 2011ರಿಂದ ಕಲಬೆರಕೆ ವಿರುದ್ಧ ಅಭಿಯಾನ ನಡೆಸುತ್ತಿದೆ. ಇತ್ತೀಚೆಗೆ 12 ರಾಜ್ಯಗಳಲ್ಲಿ ಎಫ್‌ಎಸ್‌ಎಸ್‌ಎಐ ಹಾಲಿನ ಸಮೀಕ್ಷೆ ನಡೆಸಿತ್ತು.

ಇದನ್ನೂ ಓದಿ: Uttar Pradesh | 32 ವರ್ಷಗಳ ಹಿಂದೆ ಕಲಬೆರಕೆ ಹಾಲು ಮಾರಾಟ ಮಾಡಿದ್ದವನಿಗೆ ಈಗ ಆರು ತಿಂಗಳ ಶಿಕ್ಷೆ!

Exit mobile version