Site icon Vistara News

MNCs in India : ಸಣ್ಣ ನಗರ, ಪಟ್ಟಣಗಳಿಗೆ ದೊಡ್ಡ ಕಂಪನಿಗಳ ವಲಸೆ ಶುರು: ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್‌ ಪರೇಖ್

Deepak parekh

#image_title

ಮುಂಬಯಿ: ಭಾರತದಲ್ಲೀಗ ಹಲವಾರು ಬಹು ರಾಷ್ಟ್ರೀಯ ಕಂಪನಿಗಳು (MNCs in India) ಸಣ್ಣ ನಗರಗಳು ಮತ್ತು ಪಟ್ಟಣಗಳಿಗೆ ವಲಸೆ ಹೋಗಲು ಆರಂಭಿಸಿವೆ ಎಂದು ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್‌ ಪರೇಖ್‌ ಹೇಳಿದ್ದಾರೆ. ಇದು ನಗರಗಳಿಗೆ ಯುವಜನತೆಯ ವಲಸೆಯನ್ನು ತಡೆಯುವ ನಿಟ್ಟಿನಲ್ಲಿ ಸಹಕಾರಿಯಾಗುವ ನಿರೀಕ್ಷೆ ಇದೆ.

ಹಲವಾರು ಕಾರಣಗಳಿಂದಾಗಿ ದೇಶದ ಎರಡು ಮತ್ತು ಮೂರನೇ ಸ್ತರದ ನಗರಗಳು ಇಂದು ಅಭಿವೃದ್ಧಿಯಾಗುತ್ತಿವೆ. ಇದರ ಪರಿಣಾಮ ಅವುಗಳು ಬಹುರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸುತ್ತಿವೆ. ಎಂಎನ್‌ಸಿಗಳು ಅಲ್ಲಿ ತಮ್ಮ ಗ್ಲೋಬಲ್ ಕೆಪಬಿಲಿಟಿ ಕೇಂದ್ರಗಳನ್ನು‌ (global capability centre) ತೆರೆಯುತ್ತಿವೆ ಎಂದು ಪರೇಖ್‌ (HDFC Chairman Deepak Parekh) ಹೇಳಿದ್ದಾರೆ.

ಎಂಎನ್‌ಸಿಗಳಿಗೆ ಮಹಾನಗರಗಳು ಮತ್ತು ಎರಡನೇ ಸ್ತರದ ನಗರಗಳಿಗೆ ಹೋಲಿಸಿದರೆ ಎರಡನೇ ಸ್ತರದ ನಗರಗಳಲ್ಲಿ ಖರ್ಚು ಕಡಿಮೆ. ಕಡಿಮೆ ವೆಚ್ಚದಲ್ಲಿ ಪ್ರತಿಭಾವಂತ ಮಾನವ ಸಂಪನ್ಮೂಲ ಸಿಗುವುದು ಅವುಗಳನ್ನು ಆಕರ್ಷಿಸಿದೆ. ಜತೆಗೆ ಈ ನಗರಗಳಲ್ಲೂ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿರುವುದು ಪ್ಲಸ್‌ ಪಾಯಿಂಟ್‌ ಆಗಿದೆ.

ಗ್ಲೋಬಲ್‌ ಕೆಪಬಿಲಿಟಿ ಸೆಂಟರ್‌ (Global Capability Centers) :

ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ತಮ್ಮ ಗ್ಲೋಬಲ್‌ ಕೆಪಬಿಲಿಟಿ ಸೆಂಟರ್‌ ಗಳನ್ನು ತೆರೆಯುತ್ತಿವೆ. 2019-21ರಲ್ಲಿ 140 ಎಂಎನ್‌ಸಿಗಳು ದೇಶದಲ್ಲಿ ಜಿಸಿಸಿಯನ್ನು ತೆರೆದಿವೆ. 14 ಲಕ್ಷಕ್ಕೂ ಹೆಚ್ಚು ಮಂದಿ ಇಲ್ಲಿ ದುಡಿಯುತ್ತಿದ್ದಾರೆ. ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆ ಇದಕ್ಕೆ ಕಾರಣವಾಗಿದೆ ಎಂದು ಪರೇಖ್‌ ಹೇಳಿದ್ದಾರೆ. ಮುಂಬಯಿನಲ್ಲಿ ಡೆವಲಪರ್‌ಗಳ ಸಭೆಯೊಂದರಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ 1,500 ಗ್ಲೋಬಲ್‌ ಕೆಪಬಿಲಿಟಿ ಸೆಂಟರ್‌ಗಳು ಇವೆ. ಈ ಸಂಖ್ಯೆ ಬೆಳೆಯುತ್ತಿದೆ. ಫಾರ್ಚ್ಯೂನ್‌ 500 ಕಂಪನಿಗಳು ಇಲ್ಲಿ ತಮ್ಮ ಜಿಸಿಸಿಗಳನ್ನು ತೆರೆಯುತ್ತಿವೆ. ಇದು ಆರ್ಥಿಕ ಅಭಿವೃದ್ಧಿಗೆ ಪುಷ್ಟಿ ತುಂಬಲಿದೆ ಎಂದರು ನಾಲ್ಕು ದಶಕಗಳ ಹಿಂದೆ ಎಂಎನ್‌ಸಿಗಳ ಜಾಗತಿಕ ಕಚೇರಿಗಳಿಗೆ ಬ್ಯಾಕ್‌ ಆಫೀಸ್‌ ಸಪೋರ್ಟ್‌ ವ್ಯವಸ್ಥೆಗಳಾಗಿ ಅಸ್ತಿತ್ವಕ್ಕೆ ಬಂದಿರುವ ಜಿಸಿಸಿಯು ಈಗ ಆವಿಷ್ಕಾರಗಳ ಆಗರವಾಗಿದೆ..

ಎರಡು ಮತ್ತು ಮೂರನೇ ಸ್ತರದ ನಗರಗಳಲ್ಲಿ ಡೆವಲಪರ್‌ಗಳು ಅಫರ್ಡೆಬಲ್‌ ಹೌಸಿಂಗ್‌ ಯೋಜನೆಗಳಿಗೆ ಆದ್ಯತೆ ನೀಡುವುದು ನಿರ್ಣಾಯಕ ಮತ್ತು ಈ ವಲಯದಲ್ಲಿ ಉತ್ತಮ ವಹಿವಾಟು ಸಾಧ್ಯವಿದೆ ಎಂದರು. 2030ರ ವೇಳೆಗೆ ಭಾರತೀಯ ರಿಯಾಲ್ಟಿ ಮಾರುಕಟ್ಟೆ 1 ಲಕ್ಷ ಕೋಟಿ ಡಾಲರ್‌ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ. ಇಷ್ಟಾದರೂ 2.9 ಕೋಟಿ ಮನೆಗಳಿಗೆ ಕೊರತೆ ಇದೆ ಎಂದರು.

Exit mobile version