Site icon Vistara News

Mohandas Pai | ಬೆಂಗಳೂರಿನ ರಸ್ತೆಗಳ ದುಸ್ಥಿತಿಯನ್ನು ಬಗೆಹರಿಸಲು ಪ್ರಧಾನಿಗೆ ಮೋಹನ್‌ದಾಸ್‌ ಪೈ ಮನವಿ

road

ಬೆಂಗಳೂರು: ಬೆಂಗಳೂರಿನಲ್ಲಿ ಹದಗೆಟ್ಟಿರುವ ರಸ್ತೆಗಳ ದುಸ್ಥಿತಿಯನ್ನು ಸರಿಪಡಿಸುವಂತೆ ಬಯೊಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ, ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ ಮುಖ್ಯಸ್ಥ ಟಿ.ವಿ ಮೋಹನ್‌ ದಾಸ್‌ ಪೈ ಮೊದಲಾದವರು ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ ಮೊದಲಾದವರಿಗೆ (Mohandas Pai ) ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಬೆಂಗಳೂರಿನ ರಸ್ತೆಗಳ ಗುಣಮಟ್ಟ ಸುಧಾರಿಸಿತೇ? ಟ್ರಾಫಿಕ್‌ ದಟ್ಟಣೆ ಕಡಿಮೆ ಮಾಡಲು ಪೊಲೀಸರು ಏನು ಮಾಡುತ್ತಾರೆ? ತಂತ್ರಜ್ಞಾನ ಬಳಸುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ನಗರದ ಪಾಣತ್ತೂರಿನಲ್ಲಿ ಶಾಲಾ ಮಕ್ಕಳು ಟ್ರಾಫಿಕ್‌ ದಟ್ಟಣೆಯಲ್ಲಿ ಗಂಟೆಗಟ್ಟಲೆ ಸಿಲುಕಿ ಶಾಲೆಯ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದೆ ಮನೆಗೆ ಮರಳುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸಾಥ್‌ ನೀಡಿದ್ದ ಮೋಹನ್‌ ದಾಸ್‌ ಪೈ ಅವರು, ಸಮಸ್ಯೆ ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಂಗಳೂರು ಸಿಟಿಜನ್ಸ್‌ ವಾಯ್ಸ್‌ ಸಂಘಟನೆ ಕೂಡ ಪ್ರತಿಭಟನೆ ನಡೆಸಿದೆ.

ಪಾಣತ್ತೂರು ಆರ್‌ಯುಬಿ ವೃತ್ತವು ಟ್ರಾಫಿಕ್‌ ಸಮಸ್ಯೆಗೆ ಕುಖ್ಯಾತಿ ಗಳಿಸಿದೆ. ಇದರಿಂದ ಈ ಭಾಗದಲ್ಲಿ 5 ಕಿ.ಮೀ ಪ್ರಯಾಣಕ್ಕೆ ಎರಡು ಗಂಟೆ ತಗಲುತ್ತದೆ ಎಂದು ನಾಗರಿಕರು ದೂರಿದ್ದಾರೆ. ಸ್ಥಳೀಯರು ಹಲವಾರು ಬಾರಿ ಪ್ರತಿಭಟಿಸಿದ್ದರೂ ಪ್ರಯೋಜನವಾಗಿಲ್ಲ. ಬಯೊಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ಕೂಡ ಸಮಸ್ಯೆ ಪರಿಹರಿಸದ ಅಧಿಕಾರಿಗಳನ್ನು ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Exit mobile version