Site icon Vistara News

Money Changes : ಸೆಪ್ಟೆಂಬರ್‌ನಲ್ಲಿ 7 ಹಣಕಾಸು ಬದಲಾವಣೆಗಳನ್ನು ಮರೆಯದಿರಿ

cash

2023ರ ಸೆಪ್ಟೆಂಬರ್‌ನಲ್ಲಿ ಹಲವಾರು ಹಣಕಾಸು ಬದಲಾವಣೆಗಳು ನಡೆಯಲಿದ್ದು, ಗಡುವುಗಳನ್ನು ಮರೆಯದಿರಿ. (Money Changes) ಇವುಗಳನ್ನು ಮಿಸ್‌ ಮಾಡುವುದರಿಂದ ಪರಿಣಾಮಗಳನ್ನು ಎದುರಿಸಬೇಕಾಗಿ ಬರಬಹುದು. ಆದ್ದರಿಂದ ತಿಳಿದುಕೊಳ್ಳೋಣ.

ಎಕ್ಸಿಸ್‌ ಬ್ಯಾಂಕ್‌ ಮ್ಯಾಗ್ನಸ್‌ ಕಾರ್ಡ್‌ : ಎಕ್ಸಿಸ್‌ ಮ್ಯಾಗ್ನಸ್‌ ಕ್ರೆಡಿಟ್‌ ಕಾರ್ಡ್‌ನ ನಿಯಮಗಳು 2023ರ ಸೆಪ್ಟೆಂಬರ್‌ 1ರಿಂದ ಬದಲಾಗುತ್ತದೆ. ಎಕ್ಸಿಸ್‌ ಬ್ಯಾಂಕ್‌ ವೆಬ್‌ಸೈಟ್‌ ಪ್ರಕಾರ ಕೆಲವು ಟ್ರಾನ್ಸಕ್ಷನ್‌ಗಳು ಇಡಿಜಿಇ ಅವಾರ್ಡ್‌ ಅಥವಾ ವಾರ್ಷಿಕ ಶುಲ್ಕ ಮನ್ನಾಗೆ ಅನ್ವಯವಾಗುವುದಿಲ್ಲ. ಸೆಪ್ಟೆಂಬರ್‌ 1 ರಿಂದ ಹೊಸ ಕಾರ್ಡ್‌ ದಾರರಿಗೆ ವಾರ್ಷಿಕ ಶುಲ್ಕ 12,500 ರೂ. ಗೆ ಏರಿಕೆಯಾಗಲಿದೆ. ಹಾಲಿ ಗ್ರಾಹಕರಿಗೆ 10,000 ರೂ. ಉಳಿಯಲಿದೆ.

ಆಧಾರ್‌ ಫ್ರೀ ಅಪ್‌ ಡೇಟ್:‌ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (Unique Identification Authority of India) ಆಧಾರ್‌ ಕಾರ್ಡ್‌ ಅನ್ನು ಉಚಿತವಾಗಿ ಅಪ್‌ ಡೇಟ್‌ ಮಾಡುವ ಅವಧಿಯನ್ನು 2023ರ ಜೂನ್‌ 14ರಿಂದ 2023ರ ಸೆಪ್ಟೆಂಬರ್‌ 14 ತನಕ ಮೂರು ತಿಂಗಳ ಅವಧಿಗೆ ವಿಸ್ತರಿಸಿತ್ತು. ಆದ್ದರಿಂದ ಈ ಗಡುವಿನೊಳಗೆ ಅಪ್‌ ಡೇಟ್‌ ಮಾಡಿಸಿಕೊಳ್ಳಿ.

2000 ರೂ. ಎಕ್ಸ್‌ ಚೇಂಜ್‌ಗೆ ಕೊನೆ ದಿನ: ಆರ್‌ಬಿಐ 2000 ರೂ. ನೋಟು ವಿನಿಮಯ ಮಾಡಿಕೊಳ್ಳಲು ನಾಲ್ಕು ತಿಂಗಳ ಅವಧಿಯನ್ನು ನೀಡಿತ್ತು. 2023ರ ಸೆಪ್ಟೆಂಬರ್‌ 30ಕ್ಕೆ ಇದು ಮುಕ್ತಾಯವಾಗುತ್ತದೆ.

ಪ್ಯಾನ್ -ಆಧಾರ್‌ ಲಿಂಕ್:‌ ಸಣ್ಣ ಉಳಿತಾಯಗಾರರು ತಮ್ಮ ಪೋಸ್ಟ್‌ ಆಫೀಸ್‌ ಅಕೌಂಟ್‌ ಅಥವಾ ಬ್ಯಾಂಕ್‌ ಅಕೌಂಟ್ – ಆಧಾರ್‌ ನಡುವೆ ಲಿಂಕ್‌ ಕಲ್ಪಿಸಲು 2023 ಸೆಪ್ಟೆಂಬರ್‌ 30 ತನಕ ಅವಕಾಶ ಇದೆ.‌ ಒಂದು ವೇಳೆ ಲಿಂಕ್‌ ಮಾಡದಿದ್ದರೆ ನಿಮ್ಮ ಸಣ್ಣ ಉಳಿತಾಯ ಹೂಡಿಕೆಗಳು ಲಿಂಕ್‌ ಮಾಡುವ ತನಕ ನಿಷ್ಕ್ರಿಯ ಎನ್ನಿಸಲಿವೆ.

ಡಿಮ್ಯಾಟ್‌ ನಾಮಿನೇಶನ್:‌ ಟ್ರೇಡಿಂಗ್‌ ಮತ್ತು ಡಿಮ್ಯಾಟ್‌ ಖಾತೆಯಲ್ಲಿ ನಾಮಿನೇಶನ್‌ ಸಲ್ಲಿಸಲು 2023ರ ಸೆಪ್ಟೆಂಬರ್‌ 30 ಕೊನೆಯ ದಿನವಾಗಿದೆ.

ಎಸ್‌ಬಿಐ ವಿ ಕೇರ್:‌ ಎಸ್‌ಬಿಐ ವಿ ಕೇರ್‌ ಫಿಕ್ಸೆಡ್‌ ಡೆಪಾಸಿಟ್‌ ಹಿರಿಯ ನಾಗರಿಕರಿಗೆ ಬ್ಯಾಂಕ್‌ ನೀಡುವ ಯೋಜನೆಯಾಗಿದ್ದು, 2023ರ ಸೆಪ್ಟೆಂಬರ್‌ 30 ತನಕ ವಿಸ್ತರಿಸಲಾಗಿದೆ.

ಐಡಿಬಿಐ ಅಮೃತ್‌ ಮಹೋತ್ಸವ್‌ ಎಫ್‌ಡಿ: ಅಮೃತ್‌ ಮಹೋತ್ಸವ್‌ ಎಫ್‌ಡಿ ಸ್ಕೀಮ್‌ 375 ದಿನಗಳ ಯೋಜನೆಯಾಗಿದೆ. 7.10% ಬಡ್ಡಿ ನೀಡುತ್ತದೆ. ಇದು ಈಗಿನ ರೂಲ್ಸ್‌ ಪ್ರಕಾರ ಸೆಪ್ಟೆಂಬರ್‌ 30 ತನಕ ಲಭ್ಯವಿದೆ.

Exit mobile version