Site icon Vistara News

Money changes in August : ಆಗಸ್ಟ್‌ ತಿಂಗಳಿನಲ್ಲಿ ಪ್ರಮುಖ ಹಣಕಾಸು ಬದಲಾವಣೆಗಳೇನು?

finance

ನಿಮ್ಮ ಉಳಿತಾಯ ಮತ್ತು ಹೂಡಿಕೆಗೆ ಸಂಬಂಧಿಸಿ ಆಗಸ್ಟ್‌ನಲ್ಲಿ ಐದು ಪ್ರಮುಖ ಬದಲಾವಣೆಗಳು ನಡೆಯಲಿವೆ.(Money changes in August) ಅವುಗಳನ್ನು ನೀವು ಗಮನಿಸಬಹುದು. ಪರಿಣಾಮ ಬೀರುವುದಿದ್ದರೆ ಅಗತ್ಯ ಬದಲಾವಣೆ ಮಾಡಿಕೊಳ್ಳಬಹುದು. ವಿವರ ಇಲ್ಲಿದೆ.

ಎಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ನಿಯಮಾವಳಿಗಳು ಬದಲಾಗುತ್ತಿವೆ. ನೀವು‌ ಫ್ಲಿಪ್‌ ಕಾರ್ಟ್- ಎಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಬಳಸುತ್ತಿದ್ದರೆ ಗಮನಿಸಿ. ನಿಯಮ ಬದಲಾಗಲಿದೆ. ಎಕ್ಸಿಸ್‌ ಬ್ಯಾಂಕ್‌ ಕೆಲವು ಕ್ಯಾಶ್‌ ಬ್ಯಾಕ್‌ ಮತ್ತು ಇನ್ಸೆಂಟಿವ್‌ ಪಾಯಿಂಟ್‌ಗಳನ್ನು ಈ ಕಾರ್ಡಿಗೆ ಕಡಿತಗೊಳಿಸಲಿದೆ. ಹೀಗಾಗಿ ಇದರ ಪ್ರಯೋಜನ ತಪ್ಪಬಹುದು. ಆಗಸ್ಟ್‌ 12ರಿಂದ ಹೊಸ ನಿಯಮ ಅನ್ವಯವಾಗಲಿದೆ.

ಎಕ್ಸಿಸ್‌ ಬ್ಯಾಂಕ್‌ ವೆಬ್‌ಸೈಟ್‌ ಪ್ರಕಾರ 2023 ಆಗಸ್ಟ್‌ 12ರಿಂದ ನೀವು ನಿಮ್ಮ ಕ್ರೆಡಿಟ್‌ ಕಾರ್ಡ್‌ ಬಳಸಿ ಫ್ಲಿಪ್‌ ಕಾರ್ಟ್‌ನಲ್ಲಿ ಮಾಡುವ ಟ್ರಾವೆಲ್ಸ್‌ ಸಂಬಂಧಿತ ವೆಚ್ಚಗಳಿಗೆ 1.5% ಕ್ಯಾಶ್‌ ಬ್ಯಾಕ್‌ ಸಿಗಲಿದೆ. ಬ್ಯಾಂಕ್‌ ಪ್ರಕಾರ ಮರ್ಚೆಂಟ್‌ ಕೆಟಗರಿ ಕೋಡ್‌ (mcc) ಬಳಸಿ ಸರ್ಕಾರಿ ಸೇವೆಗೆ ನೀಡುವ ಮೊತ್ತಕ್ಕೆ ಕ್ಯಾಶ್‌ ಬ್ಯಾಕ್‌ ಇರುವುದಿಲ್ಲ. ಪೆಟ್ರೋಲ್-ಡೀಸೆಲ್‌ ಖರೀದಿ, ಫ್ಲಿಪ್‌ ಕಾರ್ಟ್‌ ಮತ್ತು ಮೈಂತ್ರದಲ್ಲಿ ಗಿಫ್ಟ್‌ ಕಾರ್ಡ್‌ ಪರ್ಚೇಸ್‌ಗೆ ಕ್ಯಾಶ್‌ ಬ್ಯಾಕ್‌ ಇರುವುದಿಲ್ಲ.

ಎಸ್‌ಬಿಐ ಅಮೃತ್‌ ಕಲಾಶ್:‌ (SBI Amrit Kalash) : ಎಸ್‌ಬಿಐ ಅಮೃತ್‌ ಕಲಾಶ್‌ ಡೆಪಾಸಿಟ್‌ ಯೋಜನೆಯಲ್ಲಿ ಹೂಡಿಕೆಗೆ ಕೊನೆಯ ದಿನ 2023ರ ಆಗಸ್ಟ್‌ 15 ಕೊನೆಯ ದಿನವಾಗಿದೆ. ಎಸ್‌ಬಿಐ ವೆಬ್‌ಸೈಟ್‌ ಪ್ರಕಾರ 400 ದಿನಗಳ ಟರ್ಮ್‌ ಡೆಪಾಸಿಟ್‌ 7.1% ಬಡ್ಡಿ ದರವನ್ನು ಸಾಮಾನ್ಯ ಗ್ರಾಹಕರಿಗೆ ನೀಡುತ್ತದೆ. ಹಿರಿಯ ನಾಗರಿಕರಿಗೆ 7.6% ಬಡ್ಡಿ ಕೊಡುತ್ತದೆ.

ಇಂಡಿಯನ್‌ ಬ್ಯಾಂಕ್‌ IND SUPER 400 DAYS: ಇಂಡಿಯನ್‌ ಬ್ಯಾಂಕ್‌ 2023 ಮಾರ್ಚ್‌ 6ರಿಂದ ಇಂಡ್‌ ಸೂಪರ್‌ 400 ಡೇಸ್‌ ಎಂಬ ನೂತನ ಸ್ಪೆಶಲ್‌ ರಿಟೇಲ್‌ ಟರ್ಮ್‌ ಡೆಪಾಸಿಟ್‌ ಪ್ರಾಡಕ್ಟ್‌ IND SUPER 400 DAYS ಅನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಹೂಡಿಕೆಗೆ ಕೊನೆಯ ದಿನಾಂಕ 2023 ಆಗಸ್ಟ್‌ 31 ಆಗಿದೆ. 10,000 ರೂ.ಗಳಿಂದ 2 ಕೋಟಿ ರೂ. ತನಕ ಇನ್ವೆಸ್ಟ್‌ ಮಾಡಬಹುದು.

ಇಂಡಿಯನ್‌ ಬ್ಯಾಂಕ್‌ ಇಂಡ್‌ ಸುಪ್ರೀಮ್‌ 300 ಡೇಸ್:‌ ಇಂಡಿಯನ್‌ ಬ್ಯಾಂಕ್‌ ವೆಬ್‌ ಸೈಟ್‌ ಪ್ರಕಾರ special retail term deposit IND SUPREME 300 DAYS 2023ರ ಜುಲೈ 1ರಿಂದ ಚಾಲ್ತಿಯಲ್ಲಿದೆ. 5000 ರೂ.ಗಳಿಂದ 2 ಕೋಟಿ ರೂ. ತನಕದ ಮೊತ್ತಕ್ಕೆ 300 ದಿನಗಳಿಗೆ ಎಫ್‌ಡಿ/ಎಂಎಂಡಿ ಆಯ್ಕೆ ನೀಡುತ್ತದೆ. ಈ ಯೋಜನೆ 2023 ಆಗಸ್ಟ್‌ 31 ತನಕ ಇರುತ್ತದೆ. ಇಂಡಿಯನ್‌ ಬ್ಯಾಂಕ್‌ ಈಗ 7.05% ಬಡ್ಡಿಯನ್ನು ಸಾಮಾನ್ಯ ನಾಗರಿಕರಿಗೆ ನೀಡುತ್ತದೆ. ಹಿರಿಯ ನಾಗರಿಕರಿಗೆ 7.80% ಮತ್ತು ಸೂಪರ್‌ ಸೀನಿಯರ್‌ ಸಿಟಿಜನ್ಸ್‌ಗೆ 7.80% ಬಡ್ಡಿ ಕೊಡುತ್ತದೆ.

ಇದನ್ನೂ ಓದಿ: Mutual fund : ಮ್ಯೂಚುವಲ್‌ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ಐಟಿ ರಿಟರ್ನ್‌ ವಿಳಂಬಕ್ಕೆ ಪೆನಾಲ್ಟಿ: 2023ರ ಜುಲೈ 31ರೊಳಗೆ ಐಟಿ ರಿಟರ್ನ್‌ ಫೈಲ್‌ ಮಾಡದವರಿಗೆ ಪೆನಾಲ್ಟಿ ಇರುತ್ತದೆ. ಇದು 5000 ರೂ. ತನಕ ಇರಬಹುದು. ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕೆಳಗಿದ್ದವರಿಗೆ 1000 ರೂ. ಮಾತ್ರ ಪೆನಾಲ್ಟಿ. ಆದಾಯ ತೆರಿಗೆ ರಿಟರ್ನ್‌ ಫೈಲಿಂಗ್‌ ಗಡುವು ವಿಸ್ತರಣೆ ಆಗದಿದ್ದರೆ ಇದು ಅನ್ವಯ.

ಅಮೃತ್‌ ಮಹೋತ್ಸವ್‌ ಎಫ್‌ಡಿ: ಅಮೃತ್‌ ಮಹೋತ್ಸವ್‌ ಎಫ್‌ಡಿ ಎಂಬ ಡೆಪಾಸಿಟ್‌ ಸ್ಕೀಮ್‌ ಅನ್ನು ಐಡಿಬಿಐ ಬ್ಯಾಂಕ್‌ ಪರಿಚಯಿಸಿದೆ. 7.6% ಬಡ್ಡಿ ನೀಡುವ ಈ ಸ್ಲೀಮ್‌ 2023ರ ಆಗಸ್ಟ್‌ 15 ತನಕ ಲಭ್ಯ. ಆಗಸ್ಟ್‌ 15ಕ್ಕೆ ಎಲ್ಲ ಬ್ಯಾಂಕ್‌ಗಳಿಗೆ ರಜಾ ದಿನ.

Exit mobile version