Site icon Vistara News

Money Guide : ಬೇಡಿಕೆ ಗಳಿಸಿರುವ ಬಿಎಲ್‌ಎಸ್-ಸರ್ವೀಸ್‌ ಐಪಿಒ, ಈ ಕಂಪನಿಯ ವಿಶೇಷತೆ ಏನು?

BSE

ಬಿಎಲ್‌ಎಸ್‌ ಇ- ಸರ್ವೀಸ್‌ ಲಿಮಿಟೆಡ್‌ ಕಂಪನಿಯ ಐಪಿಒ ಈಗ ನಡೆಯುತ್ತಿದೆ. ( Money Guide ) ಜನವರಿ 30ಕ್ಕೆ ಐಪಿಒ ಶುರುವಾಗಿದ್ದು ಫೆಬ್ರವರಿ 1ಕ್ಕೆ ಮುಕ್ತಾಯವಾಗುತ್ತಿದೆ. ಇದರ ಇಶ್ಯೂ ಪ್ರೈಸ್‌ ಪ್ರತಿ ಷೇರಿಗೆ 129 ರೂ.ಗಳಿಂದ 135 ರೂ.ಗಳಾಗಿದೆ. ಐಪಿಒ ಗಾತ್ರ 310 ಕೋಟಿ ರೂ.ಗಳಾಗಿದೆ. 2.3 ಕೋಟಿ ಷೇರುಗಳನ್ನು ಬಿಡುಗಡೆಗೊಳಿಸಲಾಗಿದೆ. ಇದುವರೆಗೆ ಎಂಟು ಪಟ್ಟು ಸಬ್‌ ಸ್ಕ್ರೈಬ್‌ ಆಗಿರುವುದು ಗಮನಾರ್ಹ. ಗ್ರೇ ಮಾರ್ಕೆಟ್‌ ನಲ್ಲೂ ಷೇರಿಗೆ ಡಿಮಾಂಡ್‌ ಇತ್ತು. ಈಗ ಕಂಪನಿಯ ಹಿನ್ನೆಲೆ ಬಗ್ಗೆ ತಿಳಿಯೋಣ.

ಬಿಎಸ್‌ಇ-ಇ ಸರ್ವೀಸ್‌ ಕಂಪನಿಯು ಬಿಎಲ್‌ ಎಸ್‌ ಇಂಟರ್‌ ನ್ಯಾಶನಲ್‌ ಸರ್ವೀಸ್‌ ಲಿಮಿಟೆಡ್‌ನ ಅಧೀನ ಸಂಸ್ಥೆಯಾಗಿದೆ. ಇದು ಅಂತಾರಾಷ್ಟ್ರೀಯ ಅಸ್ತಿತ್ವವನ್ನು ಹೊಂದಿದೆ. ವೀಸಾ ಅರ್ಜಿಗಳ ಹೊರಗುತ್ತಿಗೆಯ ವಲಯದಲ್ಲಿ ಅತಿ ದೊಡ್ಡ ಕಂಪನಿಯಾಗಿದೆ. ಬಿಎಲ್‌ಎಸ್‌ ಜಿ2ಸಿ ವಲಯದಲ್ಲಿ (ಸರ್ಕಾರದಿಂದ ನಾಗರಿಕರು) ಡಿಜಿಟಲ್‌ ಮತ್ತು ಫಿಸಿಕಲ್‌ ಪ್ರಾಡಕ್ಟ್‌ಗಳನ್ನು ನೀಡುತ್ತದೆ. ಬಿ2ಬಿ ( ಬಿಸಿನೆಸ್‌ನಿಂದ ಬಿಸಿನೆಸ್‌ಗೆ) ವಲಯದಲ್ಲೂ ಸೇವೆ ನೀಡುತ್ತದೆ.

ಬಿಎಸ್‌ಇ-ಇ ಸರ್ವೀಸ್‌ ಕಂಪನಿಯು ಭಾರತದಲ್ಲಿ ಮೂರು ಪ್ರಮುಖ ಬ್ಯಾಂಕ್‌ಗಳಗೆ ಬಿಸಿನೆಸ್‌ ಕರೆಸ್ಪಾಂಡೆನ್ಸ್‌ ಇ-ಸರ್ವೀಸ್‌ ಮತ್ತು ಇ-ಗವರ್ನೆನ್ಸ್‌ ಸೇವೆಯನ್ನು ತಳ ಮಟ್ಟದಲ್ಲಿ ನೀಡುತ್ತದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಸೇವೆ ಒದಗಿಸುತ್ತಿದೆ. ಪಂಜಾಬ್‌, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಇದನ್ನೂ ಓದಿ: Money plus : ಕೇಂದ್ರ ಬಜೆಟ್‌ನಲ್ಲಿ ತೆರಿಗೆದಾರರ ನಿರೀಕ್ಷೆಗಳು ಈಡೇರಲಿದೆಯೇ?

ಬಿಎಲ್‌ಎಸ್‌ ತನ್ನ ಏಜೆಂಟರಿಗೆ ಅರ್ನ್‌ ಮನಿ ಸರ್ವೀಸ್‌ ಒದಗಿಸುತ್ತದೆ. ಆಯುಷ್ಮಾನ್‌ ಭಾರತ್‌, ಪ್ಯಾನ್‌ ಕಾರ್ಡ್‌, ರಿಚಾರ್ಜ್‌ ( ಟೆಲಿಕಾಂ, ಡಿಟಿಎಚ್‌, ಫಾಸ್ಟ್‌ ಟ್ಯಾಗ್‌, ಡೇಟಾ ಕಾರ್ಡ್)‌, ಬಿಲ್‌ ಪೇಮೆಂಟ್‌ ( ವಿದ್ಯುತ್‌, ನೀರು, ಗ್ಯಾಸ್‌, ಟೆಲಿಫೋನ್‌ ಇತ್ಯಾದಿ) , ಮನಿ ಟ್ರಾನ್ಸ್‌ ಫರ್‌, ಟ್ರಾವೆಲ್‌ ಬುಕಿಂಗ್‌, ಆಧಾರ್‌ ಪೇಮೆಂಟ್‌, ಮಿನಿ ಎಟಿಎಂ, ಪಾಸ್‌ ಪೋರ್ಟ್‌ ಮತ್ತು ವೀಸಾ ಅರ್ಜಿ ಸಲ್ಲಿಕೆ, ವಿಮೆ, ರಿಫರ್ಬೀಷ್ಡ್‌ ಮೊಬೈಲ್‌ ಫೋನ್‌, ಹಮಾರಾ ಕ್ಲಿನಿಕ್‌ ( ವೈದ್ಯರ ಸಮಾಲೋಚನೆ) ಇತ್ಯಾದಿ ಸೇವೆಗಳನ್ನು ಏಜೆಂಟರ ಮೂಲಕ ಒದಗಿಸುತ್ತದೆ. ಏಜೆಂಟರಿಗೂ ಹಣ ಸಂಪಾದನೆಗೆ ಅವಕಾಶ ಸಿಗುತ್ತದೆ. ಬಿಎಲ್‌ಎಸ್‌ ತನ್ನದೇ ವೆಬ್‌ ಎನೇಬಲ್ಡ್‌ ಸೇವೆಗಳ ಪೋರ್ಟಲ್‌ ಅನ್ನು ಒಳಗೊಂಡಿದೆ. ಗ್ರಾಮೀಣ ಮಟ್ಟದಲ್ಲಿ ವಿಲೇಜ್‌ ಲೆವೆಲ್‌ ಎಂತ್ರೆಪ್ರೆನ್ಯೂರ್‌ ( VLE) ನೆಟ್‌ ವರ್ಕ್‌ ಅನ್ನು ಒಳಗೊಂಡಿದೆ.

Exit mobile version