Site icon Vistara News

Money Guide: ಗೃಹಸಾಲಕ್ಕೆ ಅರ್ಜಿ ಸಲ್ಲಿಸುತ್ತೀರಾ? ಈ ಅಂಶಗಳು ಗಮನದಲ್ಲಿರಲಿ

home loan

home loan

ಬೆಂಗಳೂರು: ಹೊಸ ಮನೆ ನಿರ್ಮಿಸಬೇಕು ಅಥವಾ ಖರೀದಿಸಬೇಕು ಎನ್ನುವುದು ಬಹುತೇಕರ ಕನಸು. ಈ ಕನಸನ್ನು ನನಸಾಗಿಸಲು ಗೃಹ ಸಾಲಗಳು (Home Loan) ನೆರವಾಗುತ್ತವೆ. ಆದರೆ ಹೋಮ್‌ ಲೋನ್‌ಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಕೆಲವೊಂದು ವಿಚಾರಗಳತ್ತ ಗಮನ ಹರಿಸುವುದು ಮುಖ್ಯ. ಈ ಬಗೆಗಿನ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಈ ವರ್ಷ 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಗೃಹ ಸಾಲದ ಬೇಡಿಕೆಯಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಬಹುತೇಕ ಬ್ಯಾಂಕ್‌ಗಳು ಆರ್‌ಬಿಐ ರೆಪೊ ದರ ಆಧರಿಸಿದ ಫ್ಲೋಟಿಂಗ್‌ ಬಡ್ಡಿ ದರ ಪದ್ಧತಿಯನ್ನು ಬಳಸುತ್ತವೆ. ಹೀಗಾಗಿ ಆರ್‌ಬಿಐ ರೆಪೊ ದರ ಏರಿಸಿದಾಗ ಅಥವಾ ಕಡೊತಗೊಳಿಸಿದಾಗ ಬ್ಯಾಂಕ್‌ ಸಾಲದ ಬಡ್ಡಿ ದರ ಕೂಡ ವ್ಯತ್ಯಾಸವಾಗುತ್ತದೆ.

ಈ ಅಂಶಗಳನ್ನು ಗಮನಿಸಿ

ಅರ್ಹತೆ: ನಿಮ್ಮ ಆದಾಯ, ಕ್ರೆಡಿಟ್ ಸ್ಕೋರ್ ಮತ್ತು ಡೌನ್ ಪೇಮೆಂಟ್ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿ.

ಬಡ್ಡಿದರ: ಎಲ್ಲ ಬ್ಯಾಂಕ್‌ಗಳು ಗೃಹಸಾಲಕ್ಕೆ ಒಂದೇ ರೀತಿಯ ಬಡ್ಡಿದರ ವಿಧಿಸುವುದಿಲ್ಲ. ಹೀಗಾಗಿ ಬೇರೆ ಬೇರೆ ಬ್ಯಾಂಕ್‌ಗಳ ಬಡ್ಡಿದರವನ್ನು ಹೋಲಿಸಿ ನೋಡಿ.

ಸಾಲದ ನಿಯಮಗಳು: ಸಾಲ ಮರುಪಾವತಿಯ ಅವಧಿ, ದಂಡಗಳು ಮತ್ತು ಸಂಸ್ಕರಣಾ ಶುಲ್ಕಗಳನ್ನು ಅರ್ಥ ಮಾಡಿಕೊಳ್ಳಿ.

ಇಎಂಐ: ಇಎಂಐ ನಿಮ್ಮ ಒಟ್ಟು ಆದಾಯದ 30% ಒಳಗೆ ಇರುವುದನ್ನು ಖಚಿತಪಡಿಸಿಕೊಳ್ಳಿ.

ಹಿಡನ್‌ ಕಾಸ್ಟ್‌: ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಶುಲ್ಕ ಮತ್ತು ವಿಮೆಯಲ್ಲಿನ ಅಂಶಗಳನ್ನು ಗಮನ ಹರಿಸಿ ಓದಿ.

ಹೋಮ್‌ಲೋನ್‌ಗೆ ಅಗತ್ಯವಾದ ದಾಖಲೆಗಳು

 ಇಎಂಐ ಹೆಚ್ಚಿಸಬೇಕೇ ಅಥವಾ ಅವಧಿಯನ್ನು ವಿಸ್ತರಿಸಬೇಕೇ?

ಬಡ್ಡಿದರವು ಹೆಚ್ಚಾದಾಗ ಇಎಂಐ ಅಥವಾ ಸಾಲದ ಅವಧಿಯನ್ನು ಹೆಚ್ಚಿಸುವುದು ಉತ್ತಮ ಆಯ್ಕೆಯೇ ಎಂದು ಗೃಹ ಸಾಲಗಾರ ಮೊದಲೇ ನಿರ್ಧರಿಸಬೇಕು. ಇಎಂಐಗಳನ್ನು ಹೆಚ್ಚಿಸಲು ನಿರ್ಧರಿಸಿದರೆ ಮರುಪಾವತಿ ಸಾಮರ್ಥ್ಯದೊಳಗೆಯೇ ಇದೆ ಎಂದು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಅವಧಿ ಹೆಚ್ಚಿಸಲು ತೀರ್ಮಾನಿಸಿದರೆ ದೀರ್ಘಾವಧಿಯಲ್ಲಿ ಪಾವತಿಸಬೇಕಾದ ಹೆಚ್ಚುವರಿ ಬಡ್ಡಿ ಪಾವತಿಸಲು ಸಾಧ್ಯವೇ ಎಂದು ತಿಳಿದುಕೊಳ್ಳಬೇಕು. ನಿಮ್ಮ ದೈನಂದಿನ ವೆಚ್ಚಗಳ ಮೇಲೆ ಪರಿಣಾಮ ಬೀರದೆ ಸಾಧ್ಯವಾದಷ್ಟು ಪೂರ್ವಪಾವತಿ ಮಾಡಲು ಪ್ರಯತ್ನಿಸಿ. ಪೂರ್ವಪಾವತಿ ಹೆಚ್ಚಾದಷ್ಟೂ, ಬ್ಯಾಲೆನ್ಸ್ ಮೊತ್ತ ಕಡಿಮೆಯಾಗುತ್ತದೆ ಹಾಗೂ ಬಡ್ಡಿ ಶುಲ್ಕಗಳು ನಿಯಂತ್ರಣದಲ್ಲಿರುತ್ತವೆ.

ಬೋಸನ್​ ಮೊತ್ತ ಬಳಸಿ

ಸಾಲಗಾರರು ಸಾಧ್ಯವಾದಷ್ಟು ಸಾಲಗಳನ್ನು ಪೂರ್ವಪಾವತಿ ಮಾಡಲು ವಾರ್ಷಿಕ ಬೋನಸ್ ಅಥವಾ ಅನಿರೀಕ್ಷಿತ ಲಾಭಗಳನ್ನು ಬಳಸಬೇಕು. ಸಾಲದ ಪೂರ್ವಪಾವತಿ ಮಾಡುವ ಮೊದಲು ತಮ್ಮ ಆರ್ಥಿಕ ಸ್ಥಿತಿಯನ್ನು ನಿರ್ಣಯಿಸಬೇಕು. ಆದಾಯ ಹೆಚ್ಚಾದರೆ, ಇಎಂಐ ಮೊತ್ತದಲ್ಲಿ ಹೆಚ್ಚಳವನ್ನು ಆರಿಸಿಕೊಳ್ಳಿ, ಏಕೆಂದರೆ ಇದು ಸಾಲ ಮರುಪಾವತಿಯನ್ನು ವೇಗಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Money Guide: ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತಿದ್ದೀರಾ? ಈ ಅಂಶ ಗಮನದಲ್ಲಿರಲಿ

Exit mobile version