Site icon Vistara News

Money Guide : ಸೈಟ್‌ ಖರೀದಿಸಲು ಬ್ಯಾಂಕ್‌ಗಳಲ್ಲಿ ಸಾಲ ಸಿಗುತ್ತಾ, ಬಡ್ಡಿ ಎಷ್ಟಿರುತ್ತದೆ?

Cash

ಅನೇಕ ಮಂದಿ ಉದ್ಯೋಗಕ್ಕೆ ಸೇರಿ ಒಂದೆರಡು ವರ್ಷಗಳಾದ ಬಳಿಕ ವೇತನವೂ ಏರಿಕೆಯಾಗುತ್ತದೆ. ಆಗ ಅವರಲ್ಲೊಂದು ಆಸೆ ಮೂಡುವುದು ಸ್ವಾಭಾವಿಕ. ನಗರ ಅಥವಾ ಪಟ್ಟಣಗಳಲ್ಲೊಂದು ಸೈಟ್‌ ಖರೀದಿಸಬೇಕು. ಅಲ್ಲೊಂದು ಸ್ವಂತ ಸೂರು ಕಟ್ಟಬೇಕು ಎಂಬ ಕನಸು. ( Money Guide) ಸೈಟ್‌ ಖರೀದಿಯೂ ಅಗ್ಗವೇನಲ್ಲ. ಲಕ್ಷಾಂತರ ರೂ. ಬೇಕಾಗುತ್ತದೆ. ಬ್ಯಾಂಕ್‌ಗಳಲ್ಲಿ ಗೃಹ ಸಾಲವೇನೋ ಸಿಗುತ್ತದೆ. ಆದರೆ ಸೈಟ್‌ ಖರೀದಿಗೂ ಲೋನ್‌ ಸಿಗುತ್ತಾ? ಸಿಕ್ಕಿದರೆ ಬಡ್ಡಿ ಎಷ್ಟಿರುತ್ತದೆ ಎಂಬ ಪ್ರಶ್ನೆ ಮೂಡಬಹುದು. ಇಲ್ಲಿದೆ ವಿವರ.

ಇಲ್ಲೊಂದು ಉದಾಹರಣೆ ನೋಡೋಣ. ನಿಮ್ಮ ಮಾಸಿಕ ಆದಾಯ 25,000 ರೂ. ಎಂದು ಭಾವಿಸಿ. ನಿಮಗೆ 15 ವರ್ಷಗಳ ಮರು ಪಾವತಿ ಅವಧಿಗೆ ಎಷ್ಟು ಸಾಲ ಸಿಗಬಹುದು? ಎಚ್‌ಡಿಎಫ್‌ಸಿ ವೆಬ್‌ ಸೈಟ್‌ ಪ್ರಕಾರ ನಿಮಗೆ 10,15,497 ರೂ. ಸಾಲ ಸಿಗಬಹುದು. ಮಾಸಿಕ ಇಎಂಐ 10,000 ರೂ. ಇರುತ್ತದೆ. ಬಡ್ಡಿ ದರ 8.50%ರಿಂದ 9.15% ತನಕ ಇದೆ.

ಇದನ್ನೂ ಓದಿ: Money Guide : 50 ಲಕ್ಷ ರೂ. ಪರ್ಸನಲ್‌ ಲೋನ್‌ ಈಗ ಪಡೆಯಿರಿ

ಸೈಟ್‌ ಲೋನ್‌ ಪಡೆಯಲು ಬೇಕಾಗುವ ದಾಖಲೆಗಳು ಯಾವುದು? ಕೆವೈಸಿ ದಾಖಲೆಗಳು ಬೇಕು. ಆದಾಯ ದಾಖಲಾತಿಗಳು, ಪ್ರಾಪರ್ಟಿ ಸಂಬಂಧಿತ ದಾಖಲೆಗಳು ಅವಶ್ಯಕ. ನೀವು ಸಂಬಳ ಪಡೆಯುವ ಉದ್ಯೋಗಿಯಾಗಿದ್ದರೆ, ಕಳೆದ ಮೂರು ತಿಂಗಳಿನ ಸ್ಯಾಲರಿ ಸ್ಲಿಪ್‌, ಕಳೆದ 6 ತಿಂಗಳಿನ ಬ್ಯಾಂಕ್‌ ಸ್ಟೇಟ್‌ ಮೆಂಟ್‌, ಇತ್ತೀಚಿನ ಫಾರ್ಮ್-‌16 ಅಗತ್ಯ. ಸ್ವಂತ ಉದ್ಯೋಗಿಯಾಗಿದ್ದರೆ ಕಳೆದ ಎರಡು ವರ್ಷಗಳ ಆದಾಯದ ರಿಟರ್ನ್‌, ಎರಡು ವರ್ಷಗಳ ಬ್ಯಾಲೆನ್ಸ್‌ ಶೀಟ್‌, 12 ತಿಂಗಳಿನ ಕರೆಂಟ್‌ ಅಕೌಂಟ್‌ ಸ್ಟೇಟ್‌ ಮೆಂಟ್‌ ಅಗತ್ಯ. ಎಚ್‌ಡಿಎಫ್‌ಸಿ ವೆಬ್‌ ಸೈಟ್‌ ಪ್ರಕಾರ ನಿವೇಶನ ಖರೀದಿ ಸಾಲಕ್ಕೆ 3000 ರೂ. ಅಥವಾ ಸಾಲದ ಮೊತ್ತದ 0.50% ಇದರಲ್ಲಿ ಯಾವುದು ಗರಿಷ್ಠವೋ ಅದು ಅನ್ವಯ.

ಎಚ್‌ಡಿಎಫ್‌ಸಿ ಒಂದೇ ಅಲ್ಲ, ಹಲವು ಖಾಸಗಿ-ಸಾರ್ವಜನಿಕ ಬ್ಯಾಂಕ್‌ಗಳು ಹೋಮ್‌ ಲೋನ್‌ ಮಾತ್ರವಲ್ಲದೆ, ನಿವೇಶನ ಖರೀದಿಸಲು ಪ್ಲಾಟ್‌ ಲೋನ್‌ ನೀಡುತ್ತವೆ. ನೆನಪಿಡಿ, ಪ್ಲಾಟ್‌ ಲೋನ್‌ ಎಂದರೆ ಹೋಮ್‌ ಲೋನ್‌ ಅಲ್ಲ. ಎರಡಕ್ಕೂ ವ್ಯತ್ಯಾಸವಿದೆ. ಪ್ಲಾಟ್‌ ಲೋನ್‌ ಅನ್ನು ಆಕರ್ಷಕ ಬಡ್ಡಿ ದರದಲ್ಲಿ ಪಡೆಯಬಹುದು. ಅಫರ್ಡಬಲ್‌ ರಿಪೇಮೆಂಟ್‌ ಅವಧಿ ಇರುತ್ತದೆ. ಪ್ರಿ-ಪೇಮೆಂಟ್‌ ಪೆನಾಲ್ಟಿ ಇರಲ್ಲ. ಪ್ರೊಸೆಸಿಂಗ್‌ ಫೀ ಕಡಿಮೆ ಇರುತ್ತದೆ. ದಾಖಲಾತಿಗಳು ಸೀಮಿತ. 18-65 ವರ್ಷ ವಯೋಮಿತಿಯ ಭಾರತೀಯರಿಗೆ ಈ ಲೋನ್‌ ಸಿಗುತ್ತದೆ. ಸೈಟ್‌ನ ಮಾಲಿಕತ್ವ ಕುರಿತ ಮೂಲ ದಾಖಲಾತಿಗಳನ್ನು ಬ್ಯಾಂಕ್‌ಗೆ ನೀಡಬೇಕಾಗಬಹುದು. ಸಾಲ ಮರುಪಾವತಿಯ ಬಳಿಕ ಬ್ಯಾಂಕ್‌ ಅವುಗಳನ್ನು ಮರಳಿಸುತ್ತದೆ. ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಪ್ಲಾಟ್‌ ಲೋನ್‌ ಬಡ್ಡಿ ದರಗಳನ್ನು ಹೋಲಿಸಿ, ನಿಮಗೆ ಬೆಸ್ಟ್‌ ಅನ್ನಿಸಿದ್ದನ್ನು ಆಯ್ಕೆ ಮಾಡಿಕೊಳ್ಳಿ.

Exit mobile version